• 8 ಸೆಪ್ಟೆಂಬರ್ 2024

ಆಗಸ್ಟ್ 1 ರಂದು ಪ್ರಧಾನಿ ಮೋದಿಯವರಿಗೆ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ 

 ಆಗಸ್ಟ್ 1 ರಂದು ಪ್ರಧಾನಿ ಮೋದಿಯವರಿಗೆ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ 
Digiqole Ad

ಆಗಸ್ಟ್ 1 ರಂದು ಪ್ರಧಾನಿ ಮೋದಿಯವರಿಗೆ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಗಸ್ಟ್‌ 1ರಂದು ‘ಲೋಕಮಾನ್ಯ ತಿಲಕ್‌’ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಲಕ್‌ ಸ್ಮಾರಕ ಮಂದಿರ ಟ್ರಸ್ಟ್‌ ಮಾಹಿತಿ ನೀಡಿದ್ದಾರೆ.ಲೋಕಮಾನ್ಯ ತಿಲಕ್‌ ಅವರ 103ನೇ ಪುಣ್ಯತಿಥಿಯಂದು ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ವರ್ಷದ ಪ್ರತಿಷ್ಠಿತ ಲೋಕಮಾನ್ಯ ತಿಲಕ್ ಪ್ರಶಸ್ತಿ ಪ್ರದಾನಿಸಲಾಗುತ್ತಿದೆ. ಇಂದು ಪುಣೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಲಕ್ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಡಾ. ದೀಪಕ್ ತಿಲಕ್ ಮತ್ತು ರೋಹಿತ್ ತಿಲಕ್ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ .ಲೋಕಮಾನ್ಯ ತಿಲಕರ ಪುಣ್ಯತಿಥಿಯಾದ ಆಗಸ್ಟ್ 1ರಂದು ಟ್ರಸ್ಟ್‌ನ ಅಧ್ಯಕ್ಷ ಡಾ.ದೀಪಕ್ ತಿಲಕ್ ಅವರ ಕೈಯಿಂದ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಮೋದಿಯವರ ಸರ್ವೋಚ್ಚ ನಾಯಕತ್ವವನ್ನು ಗುರುತಿಸಿ ಮತ್ತು ನಾಗರಿಕರಲ್ಲಿ ದೇಶಭಕ್ತಿಯ ಭಾವನೆಯನ್ನು ಜಾಗೃತಗೊಳಿಸುವುದಕ್ಕಾಗಿ ಈ ಪ್ರಶಸ್ತಿಯನ್ನು ಮೋದಿಗೆ ಪ್ರದಾನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಪ್ರಧಾನಿ ಮೋದಿ ದೇಶ ಕಂಡ ಆಧ್ಬುತ ನಾಯಕ, ಮೋದಿಯವರು ನಾಗರಿಕರಲ್ಲಿ ದೇಶ ಭಕ್ತಿ ಮೂಡಿಸಿದ್ದಾರೆ ಎಂದು ತಿಳಿಸಿದರು. ಮೋದಿಯವರ ಪರಿಶ್ರಮ , ಪ್ರಯತ್ನ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ ಹಾಗೂ ಮೋದಿಯವರ ಕೆಲಸವನ್ನು ನೋಡಿ ಟ್ರಸ್ಟಿಗಳೇ ಈ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ.ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಎನ್ ಸಿಪಿ ಮುಖ್ಯಸ್ಥರು ಶರದ್ ಪವಾರ್ ನ್ನು ಆಹ್ವಾನಿಸಲಾಗಿದೆ, ಅಷ್ಟೇ ಅಲ್ಲದೇ ರಾಜ್ಯಪಾಲ ರಮೇಶ್ ಬೈಸ್, ಮುಖ್ಯಮಂತ್ರಿ ಏಕನಾಥ ಶೀಂಥೆ, ಡಿಸಿಎಂ ದೇವೇಂದ್ರ ಫಡ್ನವೀಸ್, ಅಜಿತ್ ಪವಾರ್ ನ್ನು ಆಹ್ವಾನಿಸಲಾಗಿದೆ.

ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು ತಿಲಕ್ ಸ್ಮಾರಕ್ ಮಂದಿರ್ ಟ್ರಸ್ಟ್ ಕೊಡಮಾಡುತ್ತದೆ.ಮೋದಿ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ 41 ನೇ ವ್ಯಕ್ತಿಯಾಗಿದ್ದಾರೆ. ಪ್ರಶಸ್ತಿಯು ಸ್ಮರಣಿಕೆ , ಪ್ರಶಸ್ತಿ ಪತ್ರ ಒಳಗೊಂಡಿದೆ. ಅಟಲ್ ಬಿಹಾರಿ ವಾಜಪೇಯಿ, ಶರದ್ ಪವಾರ್ , ರಾಹುಲ್ ಬಜಾಜ್, ಸೈರನ್ ಪೂನಾವಾಲ್, ಡಾ ಮನಮೋಹನ್ ಸಿಂಗ್ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದ ಪ್ರಮುಖರಾಗಿದ್ದಾರೆ. ಈ ಸಾಲಿಗೆ ನರೇಂದ್ರ ಮೋದಿ ಈಗ ಸೇರ್ಪಡೆಯಾಗ್ತಿದ್ದಾರೆ.ಹಲವಾರು ದೇಶಗಳ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಿಗೆ ಭಾಜನರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಅವಾರ್ಡ್ ಘೋಷಣೆ ಮಾಡಲಾಗಿದೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ