ಪುರ್ಸೊತ್ತು ಇಲ್ಲ ಮಾರ್ರೆ!!!
ಪುರ್ಸೊತ್ತು ಇಲ್ಲ ಮಾರ್ರೆ!!!
AUTHOR: M RAMA ISHWARAMANGALA
ಅಣ್ಣಾ.. ನಾಳೆ ಕೆಲಸಕ್ಕೆ ಬರ್ತೀರಾ..ಅಂಥ ಕೇಳಿದ್ರೆ ಸಾಕು. ನಾಳೆಯಾ..! ? ನಾಳೆ ಪುರ್ಸೊತ್ತು ಇಲ್ಲ ಮಾರ್ರೆ ಎನ್ನುವ ಉತ್ತರ ಈಗೀಗ ಎಲ್ಲಾ ಕಡೆ ಬರುತ್ತದೆ.. ಯಾರ ಹತ್ರನೂ ಕೇಳಿದ್ರೆ ಇದೇ ಉತ್ತರ.. ಕೆಲವರು ಕೆಲಸದ ಒತ್ತಡದಿಂದಾಗಿ ಹಾಗೆ ಹೇಳಿದ್ರೆ ಇನ್ನೂ ಕೆಲವರು “ಬೇಲೆ ಕಂಡು” ಬಿರುದಾಂಕಿತರು ಇದೇ ಮಾತನ್ನು ಹೇಳುವ ರೂಡಿ.. ಈಗಿನ ಎಮರ್ಜೆನ್ಸಿ ನೆಂಟರು ಮನೆಗೆ ಬಂದ್ರೆ.. ಚಾಹ ಕುಡಿದು ಹೋಗಿ ಅಥವ ಊಟ ಮಾಡಿಕೊಂಡು ಹೋಗಿ ಅಂದ್ರೆ.. ಅವರ ಹೊಟ್ಟೆಯಲ್ಲಿ ಹುಳ ನಾಟ್ಯವಾಡುತಿದ್ದರೂ.. ಇಲ್ಲಲ್ಲ.. ನನ್ಗೆ ಊಟ ಮಾಡುವಷ್ಟು ಪುರ್ಸೊತ್ತು ಇಲ್ಲ. ಇನ್ನೊಮ್ಮೆ ಬಂದಾಗ ಊಟ ಮಾಡುವ ಅಂಥ ಹೇಳಿ ಗಾಡಿ ಹತ್ತಿ ಹೋಗೊದೆ.. ಒಂದು ಊಟ ತಿಂಡಿ ತಿನ್ನಲು ಕೂಡ ಈಗ ಸಮಯವಿಲ್ಲದಾಗಿದೆ.. ಅಷ್ಟೂ ಬ್ಯುಸಿಯಂತ್ತಲ್ಲ.. ಅವರು ಆತುರದಿಂದ ಹೋರಟು ಅಂಗಡಿಯ ಬಾಗಿಲಲ್ಲಿ ಹರಟೆ ಹೊಡೆಯುತ್ತಾ.. “ಉನರೆ ಪಂಡೆರ್ ಯಾನ್ ನನೊರ ಬರ್ಪೆ ಪಂಡೆ ” ಅಂಥ ಹೇಳಿ ಅಂಗಡಿಯಲ್ಲಿ ಸಾಲ ಮಾಡಿಯಾದರು ತಿಂಡಿ ತಿನ್ತಾರೆ..
ಸರಕಾರಿ ಕಚೇರಿಗಳಲ್ಲಿ ಕೂಡ ಇದೇ ಮಾತು.. ಇವತ್ತು ಆಗಲ್ಲ ನಾಳೆ ಬನ್ನಿ.. ಇವತ್ತು ಪುರ್ಸೊತ್ತೇ ಇಲ್ಲ ಎನ್ನುವ ಸ್ವಲ್ಪ ಗಟ್ಟಿ ಸ್ವರದ ಮಾತು..
ರೀ.. ಮಕ್ಕಳನ್ನು ಶಾಲೆಯಿಂದ ಕರ್ಕೊಂಡು ಬರ್ತಿರಾ.., ಅಂದ್ರೆ ಸಾಕು.. ನನ್ಗೆ ಪುರ್ಸೊತ್ತು ಇಲ್ಲ ನೀನೆ ಹೋಗಿ ಕರ್ಕೊಂಡು ಬಾ. ಅನ್ನುವ ಗಂಡನ ಮಾತು.. ಎಲ್ಲದಕ್ಕೂ ಕಾರಣ ಈ ಪುರ್ಸೊತ್ತು… ಈಗಿನ ಒತ್ತಡದ ಜೀವನದಲ್ಲಿ ಸಮಯದ ಅಭಾವೊ.. ಅಥವ ಉದಾಸೀನವೋ ತಿಳಿಯದು. ಅಂತೂ ಯಾರಲ್ಲೂ ಕೇಳಿದ್ರು.. ಪುರ್ಸೊತ್ತು ಇರೋದಿಲ್ಲ.. ಕೆಲವರಿಗೆ ಸಮಯವನ್ನು ಉಪಯೋಗಿಸಿಕೊಳ್ಳುವ ಛಲವಾದರೆ.. ಕೆಲವರಿಗೆ ಸಮಯ ಹಾಳು ಮಾಡುವ ಚಟ..
ವಿಶ್ರಾಂತಿಯಿರದ ಕೆಲಸ .. ಕೆಲಸ ಮಾಡದೆ ವಿಶ್ರಾಂತಿ ಪಡೆಯುವಲ್ಲಿ ಕೂಡ ಪುರ್ಸೊತ್ತಿನ ಕೊರತೆ … ಪುರ್ಸೊತ್ತು ಇಲ್ಲದವರಂತೆ ಮಾಡಿಕೊಳ್ಳೊದು ನಾವೇ.. ಪುರುಸೊತ್ತು ಇದ್ದು ಇಲ್ಲದವರಂತೆ ನಟಿಸೋದು ಕೂಡ ನಾವೆ.. ಯಾವಾಗಲು ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು.. ಇರುವ ಜೀವನದಲ್ಲಿ ಆರಾಮವಾಗಿ ಇರಬೇಕು.. ಕೆಲಸದ ಜಾಸ್ತಿ ಆದಂತ್ತೆ ಮಾತುಗಳು ಕಡಿಮೆಯಾಗಿ ಮುಖ ನೋಡಿ ಮಾತನಾಡುವಷ್ಟು ಪುರುಸೊತ್ತು ಇಲ್ಲದಾಗುತ್ತದೆ.. ಮನೆಯವರಲ್ಲಾಗಲಿ ಗೆಳೆಯರೊಂದಿಗಾಗಲಿ ಬಿಡುವ ಮಾಡಿಕೊಂಡು ಹರಟೆ ತಮಾಷೆ ನಗುವಿನೊಂದಿಗೆ ಕಳೆಯುವ ರಸ ಘಳಿಗೆಗಳು ಒಮ್ಮೆ ಕೈ ತಪ್ಪಿದರೆ ಮತ್ತೆ ನಿಧಾನವಾಗಿ ನಿಮ್ಮಿಂದ ದೂರ ದೂರವಾಗಿ ಕೊನೆಗೆ ನೀವೊಬ್ಬರೇ ಒಂಟಿಯಾಗಿ ಇರುವಂತೆ ಮಾಡಿಬಿಡುತ್ತದೆ.. ಕಾರಣ.. ಅವ ಕೆಲಸದಲ್ಲಿ ಯಾವಾಗ್ಲೂ ಬ್ಯುಸಿ ಒಂದು ಮಾತಾಡ್ಲಿಕ್ಕೂ ಪುರುಸೊತ್ತು ಇಲ್ಲ ಮುಖ ಗಂಟು ಹಾಕಿಕೊಂಡು ಇದ್ದಾನೆ .ಈ ತರ ಆಗಿ ಬಿಡ ಬಹುದು..
ನಾಳೆ ನಾವು ಇರುತ್ತೀವೊ ಇಲ್ವೊ ಇರುವಷ್ಟು ದಿನ ಎಲ್ಲರೊಂದಿಗೆ ಬೆರೆಯುವ ಸಮಯವನ್ನು ನಾವು ರೂಡಿಸಿಕೊಳ್ಳಬೇಕು.. ಸತ್ರೂ ಜನ ಆಡಿಕೊಳ್ತಾರೆ ಅವ ಪುರ್ಸೊತ್ತು ಇಲ್ಲದೆ ದುಡಿದ ಈಗ ಮಡಿದ.. ಅಲ್ಲಿ ಅಂತ್ಯಕ್ರಿಯೆಗೆ ಬಂದವರಿಗೂ ಪುರುಸೊತ್ತು ಇಲ್ಲ.. ಒಮ್ಮೆ ಬೇಗ ಮಾಡಿ ಮುಗಿಸುವ ಮಾರ್ರೆ.. ಸುಮ್ನೆ ಯಾಕೆ ಕಾಯೊದು ಅಂತ.. ಬುದ್ದಿ ಬಂದ ನಂತ್ತರದ್ದಿಂದ ಸಾಯುವ ವರೆಗೂ ಇರದ ಪುರುಸೊತ್ತು .. ನಂತ್ತರ ಇದ್ದು ಏನು ಸುಖ.. ಆದರಿಂದ ಪುರುಸೊತ್ತನ್ನು ನಾವೇ ಸೃಷ್ಟಿಸಿ ಒತ್ತಡದಿಂದ ಬಿಡುಗಡೆಗೊಂಡು.. ಎಲ್ಲವನ್ನೂ ಮಿತಿಯೊಂದಿಗೆ ಕಳೆಯುತ್ತಾ ಇದ್ದರೆ ಎಷ್ಟು ಚೆನ್ನ ಅಲ್ಲವೇ.. ಈ ಪುರ್ಸೊತ್ತಿನ ಬಗ್ಗೆ ಬರೆಯಲು ಹೋದರೆ ದೊಡ್ಡ ಮಹಾ ಗ್ರಂಥವೇ ಆದಿತು..
ಅಷ್ಟು ಬರೆಯಲು ನನಗೂ ಪುರುಸೊತ್ತು ಇಲ್ಲ ಮಾರ್ರೆ…! ಇನ್ನೊಮ್ಮೆ ಸಿಗುವ ..😁