• 8 ಸೆಪ್ಟೆಂಬರ್ 2024

ಗೂಗಲ್‌ನಿಂದ ದಾಖಲೆಯ ಉದ್ಯೋಗ ಆಫರ್ ಪಡೆದ MMMUT ಭಾರತೀಯ ವಿದ್ಯಾರ್ಥಿನಿ

 ಗೂಗಲ್‌ನಿಂದ ದಾಖಲೆಯ ಉದ್ಯೋಗ ಆಫರ್ ಪಡೆದ MMMUT ಭಾರತೀಯ ವಿದ್ಯಾರ್ಥಿನಿ
Digiqole Ad

ಗೂಗಲ್‌ನಿಂದ ದಾಖಲೆಯ ಉದ್ಯೋಗ ಆಫರ್ ಪಡೆದ MMMUT ಭಾರತೀಯ ವಿದ್ಯಾರ್ಥಿನಿ!

ಮದನ್ ಮೋಹನ್ ಮಾಳವೀಯ ಯೂನಿವರ್ಸಿಟಿ ಆಫ್ ಟೆಕ್ನಾಲಜಿ (MMMUT) ವಿದ್ಯಾರ್ಥಿನಿ ಆರಾಧ್ಯ ತ್ರಿಪಾಠಿ ಅವರು ಗೂಗಲ್‌ನಿಂದ ದಾಖಲೆಯ ಉದ್ಯೋಗ ಆಫರ್ ಪಡೆದಿದ್ದು.ಆರಾಧ್ಯ ತ್ರಿಪಾಠಿ ಈ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ. US ಟೆಕ್ ದೈತ್ಯ ಗೂಗಲ್‌ನಿಂದ 52 ಲಕ್ಷ ರೂಪಾಯಿಗಳ ಪ್ಯಾಕೇಜ್ ಪಡೆದುಕೊಂಡಿದ್ದು, ಇವರು ಎಂಎಂಎಂಯುಟಿಯಿಂದ ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಬಿಟೆಕ್ ಪದವಿ ಪಡೆದುಕೊಂಡಿದ್ದಾರೆ.

MMMUT ನ ವಿದ್ಯಾರ್ಥಿಗಳಲ್ಲಿ ಇಲ್ಲಿವರೆಗೆ ಗಳಿಸಿದ ಅತ್ಯಧಿಕ ಪ್ಯಾಕೇಜ್ ಆರಾಧ್ಯ ತ್ರಿಪಾಠಿ ಅವರು ಪಡೆದಿರುವುದು ಆಗಿದೆ. ಈಕೆಯ ತಂದೆ ಅಂಜನಿ ನಂದನ್ ತ್ರಿಪಾಠಿ ಗೋರಖ್‌ಪುರದ ಸಿವಿಲ್ ಕೋರ್ಟ್‌ನಲ್ಲಿ ವಕೀಲರಾಗಿದ್ದರೆ, ಈ ಕೆಯ ತಾಯಿ ಗೃಹಿಣಿಯಾಗಿದ್ದಾರೆ.ಆರಾಧ್ಯ ತ್ರಿಪಾಠಿ ಉತ್ತರ ಪ್ರದೇಶದ ಸಂತಕ್‌ಬೀರ್‌ನಗರ ಜಿಲ್ಲೆಯ ಮಘರ್ ಪ್ರದೇಶದ ಗೋಯಿತ್ವಾ ಗ್ರಾಮದ ನಿವಾಸಿ.ಇವರು ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಇಂಜಿನಿಯರ್ ಆಗಿ ಗೂಗಲ್‌ನಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ.ತ್ವರಿತ ಕಲಿಕೆಯ ಜೊತೆಗೆ,

ನಾನು ವೇಗದ ಕಲಿಕೆಯ ಸಂದರ್ಭಗಳಲ್ಲಿ ಅಭಿವೃದ್ಧಿ ಹೊಂದಲು ಇಷ್ಟಪಡುತ್ತೇನೆ ಎಂದು ಆರಾಧ್ಯ ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಬರೆದುಕೊಂಡಿದ್ದಾರೆ.ನಾನು ಡೇಟಾ ಸ್ಟ್ರಕ್ಚರ್‌ಗಳು ಮತ್ತು ಅಲ್ಗಾರಿದಮ್‌ಗಳಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದೇನೆ ಮತ್ತು ವಿವಿಧ ಕೋಡಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುಮಾರು 1000+ ಪ್ರಶ್ನೆಗಳನ್ನು ಪರಿಹರಿಸಿದ್ದೇನೆ ಮತ್ತು ಅವುಗಳ ಮೇಲೆ ಉತ್ತಮ ರೇಟಿಂಗ್ ಅನ್ನು ಹೊಂದಿದ್ದೇನೆ ಎಂದರು.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ