ರಾಜ್ಯದಲ್ಲಿ ಮದ್ರಾಸ್ ಐ ಪ್ರಮಾಣ ಏರಿಕೆ: ಪೋಷಕರಲ್ಲಿ ಹೆಚ್ಚಿದ ಆಂತಕ
ರಾಜ್ಯದಲ್ಲಿ ಮದ್ರಾಸ್ ಐ ಪ್ರಮಾಣ ಏರಿಕೆ: ಪೋಷಕರಲ್ಲಿ ಹೆಚ್ಚಿದ ಆಂತಕ
ಕಳೆದ ಮೂರ್ನಾಲ್ಕು ವರ್ಷಗಳ ನಂತರ ಕಣ್ಣಿನ ನೋವು ಕಾಟ ಶುರುವಾಗಿದೆ.ಪಿಂಕ್ ಐ, ಮದ್ರಾಸ್ ಐ ಅಥವಾ ಕಾಂಜಂಕ್ಟಿವಿಟಿಸ್ ಜನರಲ್ಲಿ ಆತಂಕ ಮೂಡಿಸಿದ್ದು, ಕಳೆದ ಮೂರ್ನಾಲ್ಕು ವಾರಗಳಲ್ಲಿ ಚಿತ್ರದುರ್ಗ, ಬೆಂಗಳೂರಿನಲ್ಲಿ ಪ್ರಕರಣ ಏರಿಕೆಯಾಗುತ್ತಿದೆ . ತೇವಾಂಶ ಹೆಚ್ಚಾದಾಗ ಅಥವಾ ಚಳಿಗಾಲದ ವಾತಾವರಣದಲ್ಲಿ ಹುಟ್ಟಿಕೊಳ್ಳುವ ಈ ವೈರಾಣುಗಳು ನೇರವಾಗಿ ಕಣ್ಣಿನ ಮೇಲೆ ಪರಿಣಾಮವನ್ನು ಉಂಟು ಮಾಡುತ್ತಿವೆ.ಇದು ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತಿದ್ದು, ಪೋಷಕರಲ್ಲಿ ತಳಮಳ ಶುರುವಾಗಿದೆ. ಈ ರೋಗ ಹರಡವುದನ್ನು ತಡೆಗಟ್ಟಲು ಕೈ ತೊಳೆಯುತ್ತಿರಬೇಕು. ರೋಗಕ್ಕೆ ತುತ್ತಾದ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ ಎಂದು ವೈದ್ಯರು ಸೂಚಿಸಿದ್ದಾರೆ.ಅಲರ್ಜಿ, ಆಸ್ತಮಾ ಮತ್ತು ಒಣ ಕಣ್ಣುಗಳಂತಹ ಗುಣಲಕ್ಷಣಗಳನ್ನು ಹೊಂದಿರುವ ರೋಗಿಗಳು ಮತ್ತು ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಬಳಸುವವರು ಆಕ್ರಮಣಕಾರಿ ಮದ್ರಾಸ್ ಐ’ಗೆ ಹೆಚ್ಚು ಗುರಿಯಾಗುತ್ತಾರೆ. ಕಳೆದ 20 ದಿನಗಳಿಂದ ಮಳೆ ಹಾಗೂ ಶೀತದ ವಾತಾವರಣ ಹೆಚ್ಚಿರುವುದರಿಂದ ಈ ಸಮಸ್ಯೆ ತೀವ್ರವಾಗಿದ್ದು, ಆತಂಕಕ್ಕೆ ಕಾರಣವಾಗಿದೆ.ರಾಜ್ಯದಲ್ಲಿ ಕೆಲದಿನಗಳಿಂದ ಮಳೆ ಹೆಚ್ಚಳವಾಗಿದ್ದು, ಬಿಸಿಲು ಮರೆಯಾಗಿದೆ. ಈ ತೇವಾಂಶದ ವಾತಾವರಣದಿಂದಾಗಿ ಮದ್ರಾಸ್ ಐ ಎಂದು ಕಣ್ಣಿನ ಸೋಂಕು ಹೆಚ್ಚಳವಾಗಿದೆ. ಈ ರೋಗದ ಲಕ್ಷಣ, ಮುನ್ನೆಚ್ಚರಿಕೆ ಕ್ರಮ, ಚಿಕಿತ್ಸೆ ಬಗ್ಗೆ ಮಾಹಿತಿ ಇಲ್ಲಿದೆ.ಸಾಮಾನ್ಯವಾಗಿ ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ‘ಮದ್ರಾಸ್ ಐ’ ಈ ಬಾರಿ ಮಳೆಗಾಲದಲ್ಲೇ ಎಂಟ್ರಿ ಕೊಟ್ಟು ರಾಜ್ಯದ ಜನರ ಕಣ್ಣು ಕೆಂಪಗಾಗಿಸುತ್ತಿದೆ. ಮುಖ್ಯವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಹಾಸ್ಟೆಲ್ ನಿವಾಸಿಗಳಲ್ಲಿ ಮದ್ರಾಸ್ ಐ ವೈರಾಣು ಅತಿ ವೇಗವಾಗಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.ಕಂಜಕ್ಟಿವೈಟಿಸ್ ಎಂದು ಕರೆಯಲಾಗುವ ಮದ್ರಾಸ್ ಐ ಅಥವಾ ‘ಕಣ್ಣು’ ವೈರಾಣುಗಳಿಂದ ಹರಡುವ ಕಣ್ಣಿನ ಸಮಸ್ಯೆ. ವಾತಾವರಣದಲ್ಲಿ ತೇವಾಂಶ ಹೆಚ್ಚಾದಾಗ ಅಥವಾ ಚಳಿ ವಾತಾವರಣದಲ್ಲಿ ಹುಟ್ಟಿಕೊಳ್ಳುವ ವೈರಾಣುಗಳು ನೇರವಾಗಿ ಕಣ್ಣಿನ ಮೇಲೆ ಪರಿಣಾಮ ಉಂಟು ಮಾಡುತ್ತವೆ. ಜುಲೈ ಆರಂಭದಿಂದಲೂ ರಾಜ್ಯಾದ್ಯಂತ ಮಳೆ ಸುರಿಯುತ್ತಿದ್ದು, ಸೂರ್ಯನ ಕಿರಣಗಳ ದರ್ಶನವಾಗಿಲ್ಲ. ಇದರ ಪರಿಣಾಮ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿ, ಅವಧಿಗೂ ಮೊದಲೇ ಮದ್ರಾಸ್ ಐ ವೈರಾಣು ದಾಂಗುಡಿ ಇರಿಸಿದೆ.
ಮದ್ರಾಸ್ ಐಗೆ ಮಕ್ಕಳೇ ಟಾರ್ಗೆಟ್
ಜಿಲ್ಲೆಯ ಶಾಲೆ, ಕಾಲೇಜುಗಳಲ್ಲಿಮದ್ರಾಸ್ಐ ಹೊಂದಿರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ.ಈ ಬಾರಿ ಹಿರಿಯರಿಗಿಂತಲೂ ಹೆಚ್ಚಾಗಿ ಮಕ್ಕಳು ಮದ್ರಾಸ್ ಐ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಶಾಲೆ ಮಾತ್ರವಲ್ಲದೆ ವಸತಿಯುತ ಶಾಲೆ, ಕಾಲೇಜುಗಳ ಹಾಸ್ಟೆಲ್ಗಳಲ್ಲೂಈ ಸಮಸ್ಯೆ ತೀವ್ರವಾಗಿದೆ. ಶಾಲಾ ಕಾಲೇಜು ಹಾಗೂ ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳು ಒಟ್ಟಿಗೇ ಕೂರುವುದು ಹಾಗೂ ಪೆನ್, ಪುಸ್ತಕ ಮತ್ತಿತರ ವಸ್ತುಗಳನ್ನು ಶೇರ್ ಮಾಡುವುದರಿಂದ ವೈರಾಣುಗಳು ವ್ಯಾಪಕವಾಗಿ ಹರಡುತ್ತಿವೆ. ಕೆಲ ಶಾಲೆಗಳಲ್ಲಿಕಣ್ಣಿನ ಸಮಸ್ಯೆ ಇರುವ ಮಕ್ಕಳನ್ನು ಮನೆಗೆ ಕಳುಹಿಸುತ್ತಿದ್ದಾರೆ.
ಮದ್ರಾಸ್ ಐ ಲಕ್ಷಣಗಳೇನು?
ಕಣ್ಣಲ್ಲಿನೀರು ಬರುವುದು.
ರೆಪ್ಪೆ, ಕಣ್ಣು ದಪ್ಪ ಆಗುವುದು
ಕಸ ಬಿದ್ದಾಗ ಆಗುವ ರೀತಿಯಲ್ಲೇ ಕಣ್ಣು ಚುಚ್ಚುವುದು
ಕಣ್ಣುಗಳು ಕೆಂಪಾಗಿ, ಕಿರಿಕಿರಿ ಹೆಚ್ಚುವುದು.
ಬೆಳಗ್ಗೆ ಎದ್ದಾಗ ಹೆಚ್ಚು ಪಿಸುರು (ಪಿಚ್ಚು) ಬರುತ್ತದೆ.
ಮದ್ರಾಸ್ ಐಗೆ ಪರಿಹಾರ ಏನು?
ಮದ್ರಾಸ್ ಐ ಮುನ್ನೆಚ್ಚರಿಕೆ ಕ್ರಮಗಳು
ಸಮಸ್ಯೆ ಇರುವವರು ಕೆಲ ದಿನ ಪ್ರತ್ಯೇಕ ವಾಸ ಮಾಡಿ.
ಕಣ್ಣಾದವರು ಬಳಸಿದ ಯಾವುದೇ ವಸ್ತು ಇತರರು ಬಳಸಬೇಡಿ
ಲಕ್ಷಣಗಳು ಕಾಣಿಸಿಕೊಳ್ಳದಿದ್ದರೂ ಕಣ್ಣಿಗೆ ಔಷಧ ಹಾಕಬೇಡಿ
ಕಣ್ಣು ಮುಟ್ಟಿಕೊಳ್ಳುವುದನ್ನು ಕಡಿಮೆ ಮಾಡಿ
ದಿನಕ್ಕೆ 8-10 ಬಾರಿ ಸ್ಯಾನಿಟೈಸರ್, ಸೋಪು ಬಳಸಿ ಕೈ ತೊಳೆದುಕೊಳ್ಳಿ
ಸಮಸ್ಯೆ ಉಳ್ಳವರು ಇತರರಿಂದ ದೂರ ಇರಬೇಕು.
ವೈದ್ಯರ ಬಳಿ ತೋರಿಸಿ, ಐ ಡ್ರಾಫ್ಸ್ ಮಾತ್ರ ಹಾಕಬೇಕು.
ಸಮಸ್ಯೆ ಕಡಿಮೆ ಆಗುವವರೆಗೆ ಗಾಳಿಗೆ ಹೋಗಬಾರದು.
ದ್ವಿಚಕ್ರ ವಾಹನ ಓಡಿಸಬಾರದು.
ಸ್ಕ್ರೀನ್ ಟೈಮ್ ಕಡಿಮೆ ಮಾಡಿ ಕಣ್ಣಿಗೆ ವಿಶ್ರಾಂತಿ ಕೊಡಬೇಕು.