ಅದ್ಯಾಕೋ ದೇಸ ಹಿಂಗೈತೋ : ಕವಿ ಮನ
ಅದ್ಯಾಕೋ ದೇಸ ಹಿಂಗೈತೋ : ಕವಿ ಮನ
ಅದ್ಯಾಕೋ ಈ ಪರಪಂಚ ಹಿಂಗೈತೋ
ಚಾಡಿ ಮಾತ ಕೇಳ್ತಾಯಿತೋ
ತನ್ನ ಮನಿ ವಿಸ್ಯ ಚಿಂತಿ ಮಾಡ್ರಯ್ಯೋ
ಊರ ಉಸಾಬರಿ ಯಾಕ್ರಯ್ಯೋ
ಕುಟುಂಬ ಅಭಿವೃದ್ಧಿ ಮಾಡ್ರಯ್ಯೋ
ಅಂತೆ ಕಂತೆಗಳಿಗೆ ಕಿವಿಯ ಕೊಡುವುದ್ಯಾತಕೋ
ಮಾನ ಹರಾಜು ಮಾಡೋದ್ಯಾತಕೊ
ವಸಿ ನಿಜಾ ತಿಳ್ಕೊಂಡು ನೀವು ಮಾತಾಡ್ರಿ
ಸುಳ್ಳು ನಂಬ್ಕೊಂಡು ದೇಸ ಹಾಳ್ ಮಾಡಬ್ಯಾಡ್ರಿ
ನಮ್ ದೇಸ ನಮ್ ಪ್ರಾಣ ಅಂದ್ಕೊಳ್ರಿ
ಜಾತಿ ಗೀತಿ ನಮ್ಗ ಬ್ಯಾಡವೇ ಬ್ಯಾಡ್ವಯ್ಯ
ಮನುಸ ಜಾತಿಯೊದೇ ಸಾಕ್ರಯ್ಯ
ಮತ ಧರ್ಮ ಕದನ ನಿಲ್ಲಿಸ್ರಯ್ಯೋ
ಮನುಜ ಮತಕೆ ಜೈ ಜೈ ಅನ್ರಯ್ಯೋ
ಒಗ್ಗಟ್ಟಾಗಿ ಬಾಳೋಣ ಬನ್ರಯ್ಯೋ
ಕೇಳ್ರಿ ಕೇಳ್ರಿ ನನ್ನೆಲ್ಲಾ ಬಾಂಧವರೇ
ಭಾರತದ ಬಂಧು ಬಳಗದವರೇ
ಕಾಯಕವೇ ಕೈಲಾಸ ಎನ್ನೋಣ
ಒಟ್ಟಾಗಿ ಸೇರಿ ಬದುಕೋಣ
ಸಮರಸ ಸಾಮ್ರಾಜ್ಯ ಕಟ್ಟೋಣ
✍️ಪರಿಮಳ ಐವರ್ನಾಡು ಸುಳ್ಯ