• 18 ಅಕ್ಟೋಬರ್ 2024

ರಕ್ಷಿತ್​ ಶೆಟ್ಟಿ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೊ ಟ್ರೈಲರ್’​ ಬಿಡುಗಡೆ

 ರಕ್ಷಿತ್​ ಶೆಟ್ಟಿ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೊ ಟ್ರೈಲರ್’​ ಬಿಡುಗಡೆ
Digiqole Ad

ರಕ್ಷಿತ್​ ಶೆಟ್ಟಿ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೊ ಟ್ರೈಲರ್’​ ಬಿಡುಗಡೆ

ಹೇಮಂತ್ ಎಮ್​ ರಾವ್​ ನಿರ್ದೇಶನದ ರಕ್ಷಿತ್​ ಶೆಟ್ಟಿ ಅಭಿನಯಿಸಿದ ಸಪ್ತ ಸಾಗರದಾಚೆ ಎಲ್ಲೊ ಸಿನಿಮಾದ ಟ್ರೈಯಲ್​ ಸಂಜೆ 6 ಗಂಟೆ ಬಿಡುಗಡೆ ಮಾಡಲಾಗಿದೆ. ಜನರಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾ ಟ್ರೈಲರ್​ ಬಗ್ಗೆ ಸ್ಯಾಂಡಲ್​ವುಡ್​ ನಲ್ಲಿ ಚರ್ಚೆ ನಡೆಯುತ್ತಿದೆ. ಸೆಪ್ಟೆಂಬರ್​ 1ರಂದು ಸಿನಿಮಾದ ಮೊದಲ ಭಾಗ ತೆರೆಯ ಮೇಲೆ ಬರಲಿದೆ. ಸಿನಿಮಾದ ಪೋಸ್ಟರ್‌, ಟೀಸರ್‌, ಹಾಡಿನ ಮೂಲಕವೇ ಕುತೂಹಲ ಉಂಟುಮಾಡಿರುವ ಈ ಸಿನಿಮಾ ಇನ್ನೇನು ಬಿಡುಗಡೆಗೆ ಹೆಚ್ಚು ದಿನ ಉಳಿದಿಲ್ಲ.

ಸೆಪ್ಟೆಂಬರ್‌ 1ರಂದು ರಾಜ್ಯಾದ್ಯಂತ ಸಿನಿಮಾ ರಿಲೀಸ್‌ ಆಗಲಿದೆ. ಎರಡು ಭಾಗಗಳಲ್ಲಿ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಬಿಡುಗಡೆ ಆಗುತ್ತಿದೆ.ಪಾರ್ಟ್​ 2ನಲ್ಲಿ ರುಕ್ಮಿಣಿ ಜೊತೆಗೆ ಚೈತ್ರ ಜೆ.ಆಚಾರ್ ಕೂಡ ನಾಯಕಿಯಾಗಿದ್ದಾರೆ. ಇವರಲ್ಲದೇ ಚಿತ್ರದಲ್ಲಿ ಅವಿನಾಶ್, ಶರತ್ ಲೋಹಿತಾಶ್ವ, ಪವಿತ್ರ ಲೋಕೇಶ್, ರಮೇಶ್ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ,ಅಚ್ಯುತ ಕುಮಾರ್​​,ಮುಂತಾದವರು ಅಭಿನಯಿಸಿದ್ದಾರೆ.

ಕನ್ನಡ ಚಿತ್ರರಂಗದ ಜನಪ್ರಿಯ ನಿರ್ಮಾಣ ಮತ್ತು ವಿತರಣೆ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಚಿತ್ರಗಳನ್ನು ಬಿಡುಗಡೆ ಮಾಡುತ್ತಿದೆ. ಹೇಮಂತ್ ರಾವ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚರಣ್ ರಾಜ್ ಸಂಗೀತ ಮತ್ತು ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಈ ಸಿನಿಮಾ ದಲ್ಲಿ ಮೂಡಿಬಂದಿದೆ.ಪರಂವಃ ಯೂಟ್ಯೂಬ್​ ಚಾನೆಲ್​ನಲ್ಲಿ ಟ್ರೈಲರ್​ ಲಭ್ಯವಿದ್ದು. ಒಟ್ಟು 3 ನಿಮಿಷ 14 ಸೆಕೆಂಡ್​ಗಳಲ್ಲಿ ಟ್ರೈಲರ್ ಬಿಡುಗಡೆಗೊಂಡಿದೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ