ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಸರಕಾರಿ ಶಾಲೆ ದತ್ತು ಸ್ವೀಕಾರ,ತೆಂಗು,ಅಡಿಕೆ ತೋಟ ಮತ್ತು ಹಣ್ಣಿನ ತೋಟ ರಚನೆಗೆ ಚಾಲನೆ
ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಸರಕಾರಿ ಶಾಲೆ ದತ್ತು ಸ್ವೀಕಾರ,ತೆಂಗು,ಅಡಿಕೆ ತೋಟ ಮತ್ತು ಹಣ್ಣಿನ ತೋಟ ರಚನೆಗೆ ಚಾಲನೆ
ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಸರಕಾರಿ ಶಾಲೆ ದತ್ತು ಸ್ವೀಕಾರ ತೆಂಗು, ಅಡಿಕೆ ತೋಟ ಮತ್ತು ಹಣ್ಣಿನ ತೋಟ ರಚನೆಗೆ ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ ನೀಡಿದರು.
ಕೊಡಿಯಾಲಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಸ್ವೀಕರಿಸಿ ಶಾಲೆಯ ಸ್ಥಳದಲ್ಲಿ ತೆಂಗು, ಅಡಿಕೆ ಮತ್ತು ಹಣ್ಣಿನ ತೋಟವನ್ನು ರಚನೆ ಮಾಡುವ ಕಾರ್ಯಕ್ರಮಕ್ಕೆ ಅಡಿಕೆ ಗಿಡವನ್ನು ನೆಟ್ಟು, ಫಲಕವನ್ನು ಅನಾವರಣ ಮಾಡಿ ಚಾಲನೆ ನೀಡಿ ದೀಪ ಬೆಳಗಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ,ಶಾಸಕಿ ಭಾಗೀರಥಿ ಮುರುಳ್ಯ ನಮ್ಮ ದೇಶದ ಜೀವನಾಡಿ ಕೃಷಿ. ಕೃಷಿಗೆ ಹೆಚ್ಚು ಪ್ರೋತ್ಸಾಹ ನೀಡ ಬೇಕು. ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಿದ ಕಾರ್ಯ ಶ್ರೇಷ್ಠವಾದುದು ಎಂದರು.
ಭತ್ತದ ಗದ್ದೆಗಳು ನಮ್ಮ ಅನ್ನದ ಬಟ್ಟಲು, ಅನ್ನ ನೀಡುವ ಭತ್ತದ ಕೃಷಿಯ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿ, ಶಾಲೆಗಳಲ್ಲಿ ಭತ್ತ ಬೆಳೆಸಲು ಪ್ರೋತ್ಸಾಹ ನೀಡಬೇಕು ಮಕ್ಕಳಿಗೆ ಭತ್ತದ ಕೃಷಿಯ ಬಗ್ಗೆ ತಿಳುವಳಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಲೋಬಲ್ ಸರ್ವೀಸ್ ಬ್ಯಾಂಕಿನ ಕೋ ಆರ್ಡಿನೇಟರ್ ಜಗದೀಶ ಎಡಪಡಿತ್ತಾಯ,ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪ ಗೌಡ ಕಣಲ್ ,ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಚಿತ್ರಾ ಕುಮಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ ಬಿ.ಇ, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ.ಎಂ. ರಮೇಶ, ಉದ್ಯಮಿ, ಕಸ್ತೂರಿ ನರ್ಸರಿಯ ಮಧುಸೂದನ್ ಕುಂಭಕ್ಕೋಡು,ಕಾರ್ಯದರ್ಶಿ ದೊಡ್ಡಣ್ಣ ಬರಮೇಲು,ಕೋಶಾಧಿಕಾರಿ ಕಿರಣ್ ನೀರ್ಪಾಡಿ,ಲಯನ್ಸ್ ಪ್ರಾಂತ್ಯ VII ರ ಪ್ರಾಂತೀಯ ಅಧ್ಯಕ್ಷೆ ರೇಣುಕಾ ಸದಾನಂದ ಜಾಕೆ,ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪ ಗೌಡ ಕಣಲ,ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಚಂದ್ರಕಲಾ,ಯೋಜನಾ ನಿರ್ದೇಶಕ ಹರೀಶ್ ಉಬರಡ್ಕ,ಇದ್ದರು.
ವಿಜಯಕುಮಾರ್ ಉಬರಡ್ಕ ನಿರೂಪಿಸಿ,ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪಗೌಡ ಕಣಲ್ ಸ್ವಾಗತಿಸಿ,ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು ವಂದಿಸಿದರು.