SIIMA 2023: ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡದ ರಿಷಬ್, ರಕ್ಷಿತ್, ಯಶ್,ಸೇರಿ ಹಲವರಿಗೆ ಒಲಿದ ಸೈಮಾ ಪ್ರಶಸ್ತಿ
SIIMA 2023: ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡದ ರಿಷಬ್, ರಕ್ಷಿತ್, ಯಶ್,ಸೇರಿ ಹಲವರಿಗೆ ಒಲಿದ ಸೈಮಾ ಪ್ರಶಸ್ತಿ
2023ನೇ ಸಾಲಿನ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ (SIIMA) ದುಬೈನ ವರ್ಲ್ಡ್ ಟ್ರೇಡ್ ಸೆಂಟರ್ನಲ್ಲಿ ಶುಕ್ರವಾರದಂದು ಅದ್ಧೂರಿಯಾಗಿ ಆರಂಭಗೊಂಡಿದೆ. ಸಿನಿ ಕ್ಷೇತ್ರದ ದಿಗ್ಗಜರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದಿಂದ ಕಾಂತಾರ ಸಿನಿಮಾ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಕಾಂತಾರ ನಿರ್ದೇಶಕ ರಿಷಬ್ ಶೆಟ್ಟಿಗೆ ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ ಲಭಿಸಿದೆ. ನಾಯಕಿ ಸಪ್ತಮಿ ಗೌಡ ‘ಅತ್ಯುತ್ತಮ ನಟಿ’ (ವಿಮರ್ಶಕರ ಆಯ್ಕೆ) ಪ್ರಶಸ್ತಿಗೆ ಭಾಜನರಾಗಿದ್ದಾರೆ ಹಾಗೂ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೌರವಕ್ಕೆ ಪಾತ್ರವಾಗಿದೆ. ಗಾಳಿಪಟ 2 ಚಿತ್ರದಲ್ಲಿನ ಪೋಷಕ ಪಾತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸ್ಯಾಂಡಲ್ವುಡ್ನ ದಿಗಂತ್ ಪಡೆದುಕೊಂಡಿದ್ದಾರೆ.
ಅತ್ಯುತ್ತಮ ನಟ (ಕ್ರಿಟಿಕ್ಸ್): ರಿಷಬ್ ಶೆಟ್ಟಿ (ಕಾಂತಾರ)
ಅತ್ಯುತ್ತಮ ನಟಿ (ಕ್ರಿಟಿಕ್ಸ್): ಸಪ್ತಮಿ ಗೌಡ (ಕಾಂತಾರ)
ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ರಿಷಬ್ ಶೆಟ್ಟಿ (ಕಾಂತಾರ)
ಅತ್ಯುತ್ತಮ ಸಂಗೀತ: ಅಜನೀಶ್ ಬಿ. ಲೋಕನಾಥ್ (ಕಾಂತಾರ)
ಅತ್ಯುತ್ತಮ ಹಾಸ್ಯನಟ: ಪ್ರಕಾಶ್ ತುಮ್ಮಿನಾಡು (ಕಾಂತಾರ)
ಅತ್ಯುತ್ತಮ ಖಳನಟ: ಅಚ್ಯುತ್ ಕುಮಾರ್ (ಕಾಂತಾರ)
ಅತ್ಯುತ್ತಮ ಗಾಯಕ: ವಿಜಯ್ ಪ್ರಕಾಶ್ (ಸಿಂಗಾರ ಸಿರಿಯೇ)
ಅತ್ಯುತ್ತಮ ನಟ: ಯಶ್ (ಕೆಜಿಎಫ್: ಚಾಪ್ಟರ್ 2)
ಅತ್ಯುತ್ತಮ ನಟಿ: ಶ್ರೀನಿಧಿ ಶೆಟ್ಟಿ (ಕೆಜಿಎಫ್: ಚಾಪ್ಟರ್ 2)
ಅತ್ಯುತ್ತಮ ಛಾಯಾಗ್ರಹಣ: ಭುವನ್ ಗೌಡ (ಕೆಜಿಎಫ್ 2)
ಅತ್ಯುತ್ತಮ ಸಿನಿಮಾ: 777 ಚಾರ್ಲಿ (ನಿರ್ದೇಶನ- ಕಿರಣ್ ರಾಜ್)
ಅತ್ಯುತ್ತಮ ನಟ (ವಿಶೇಷ ಮೆಚ್ಚುಗೆ ಪ್ರಶಸ್ತಿ): ರಕ್ಷಿತ್ ಶೆಟ್ಟಿ (777 ಚಾರ್ಲಿ)
ಅತ್ಯುತ್ತಮ ಪೋಷಕ ನಟ: ದಿಗಂತ್ ಮಂಚಾಲೆ (ಗಾಳಿಪಟ 2)
ಅತ್ಯುತ್ತಮ ಪೋಷಕ ನಟಿ: ಶುಭಾ ರಕ್ಷಾ (ಹೋಮ್ ಮಿನಿಸ್ಟರ್)
ಅತ್ಯುತ್ತಮ ಉದಯೋನ್ಮುಖ ನಟಿ : ನೀತಾ ಅಶೋಕ್ (ವಿಕ್ರಾಂತ್ ರೋಣ)
ಅತ್ಯುತ್ತಮ ಗಾಯಕಿ: ಸುನಿಧಿ ಚೌಹಾಣ್ (ರಾರಾ ರಕ್ಕಮ್ಮ)
ಅತ್ಯುತ್ತಮ ಉದಯೋನ್ಮುಖ ನಟ: ಪೃಥ್ವಿ ಶ್ಯಾಮನೂರು (ಪದವಿ ಪೂರ್ವ)
ಅಪೇಕ್ಷಾ ಪುರೋಹಿತ್, ಪವನ್ ಒಡೆಯರ್ – ಡೊಳ್ಳು – ಅತ್ಯುತ್ತಮ ಉದಯೋನ್ಮುಖ ನಿರ್ಮಾಪಕ ಪ್ರಶಸ್ತಿ.