• 22 ನವೆಂಬರ್ 2024

ಸಲೂನ್‌ನಲ್ಲಿ ಕೂದಲು ಸ್ಟ್ರೇಟನಿಂಗ್ ಮಾಡಲು ಹೋಗಿ ಕಿಡ್ನಿ ಕಳೆದುಕೊಂಡ ಮಹಿಳೆ

 ಸಲೂನ್‌ನಲ್ಲಿ ಕೂದಲು ಸ್ಟ್ರೇಟನಿಂಗ್ ಮಾಡಲು ಹೋಗಿ ಕಿಡ್ನಿ ಕಳೆದುಕೊಂಡ ಮಹಿಳೆ
Digiqole Ad

ಸಲೂನ್‌ನಲ್ಲಿ ಕೂದಲು ಸ್ಟ್ರೇಟನಿಂಗ್ ಮಾಡಲು ಹೋಗಿ ಕಿಡ್ನಿ ಕಳೆದುಕೊಂಡ ಮಹಿಳೆ.

ವಾಷಿಂಗ್ಟನ್: ಸಲೂನ್ ಒಂದರಲ್ಲಿ ಹೇರ್ ಸ್ಟೇಟನಿಂಗ್ (ಕೂದಲು ನೇರಪಡಿಸುವಿಕೆ) ಮಾಡಿಸಿಕೊಳ್ಳಲು ತೆರಳಿದ್ದ ಮಹಿಳೆಯೊಬ್ಬರ ಕಿಡ್ನಿಗಳಿಗೆ ಹಾನಿಯಾದ ಘಟನೆ ವರದಿಯಾಗಿದೆ. ಮಹಿಳೆಗೆ ಉಂಟಾದ ಸಮಸ್ಯೆಗಳ ಬಗ್ಗೆ ದಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಪತ್ರಿಕೆಯಲ್ಲಿ ವರದಿ ಪ್ರಕಟಿತವಾಗಿದೆ. ಇದರಲ್ಲಿ ಮಹಿಳೆಯ ಹೆಸರು ಮತ್ತು ಹೆಸರು ಸೇರಿದಂತೆ ಯಾವುದೇ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸಿಲ್ಲ.

ಈ ಸುದ್ದಿಯನ್ನು ಓದಿದ್ದೀರಾ.?ಬಹುಬೇಡಿಕೆಯ ಫೀಚರ್ ಒದಗಿಸಿದ ಗೂಗಲ್

ಕೂದಲು ನೇರಗೊಳಿಸಲು ಬಳಸಿದ ಉತ್ಪನ್ನವೊಂದು ಅವರ ಅಂಗದ ಹಾನಿಗೆ ಕಾರಣವಾಗಿರಬಹುದು ಎಂದು ಮಹಿಳೆಗೆ ಚಿಕಿತ್ಸೆ ನೀಡಿದ ವೈದ್ಯರೊಬ್ಬರು ಹೇಳಿದ್ದಾರೆ. 26 ವರ್ಷದ ಈ ಮಹಿಳೆ, ಜೂನ್ 2020, ಏಪ್ರಿಲ್ 2021 ಮತ್ತು ಜುಲೈ 2022ರಂದು ಕೂದಲಿನ ಚಿಕಿತ್ಸೆಗಾಗಿ ಸಲೂನ್‌ಗೆ ಬೇಟಿ ನೀಡಿದ್ದರು. ಮಹಿಳೆಯಲ್ಲಿ ಈ ಹಿಂದೆ ಯಾವುದೇ ಆರೋಗ್ಯ ಸಮಸ್ಯೆಗಳು ಇರಲಿಲ್ಲ. ಆದರೆ ಪ್ರತಿ ಭೇಟಿಯ ಬಳಿಕವೂ ಆಕೆಯಲ್ಲಿ ವಾಂತಿ, ಅತಿಸಾರ, ಜ್ವರ ಹಾಗೂ ಬೆನ್ನು ನೋವು ಬಂದಿತ್ತು. ಅಲ್ಲದೆ, ಕೂದಲಿನ ಚಿಕಿತ್ಸೆ ವೇಳೆ ಆಕೆಯ ನೆತ್ತಿ ಭಾಗದಲ್ಲಿ ತೀವ್ರ ಉರಿಯುವ ಅನುಭವ ಉಂಟಾಗಿ ಕೊನೆಗೆ ಅದು ತಲೆಯಲ್ಲಿ ಹುಣ್ಣು ಸೃಷ್ಟಿಸಿತ್ತು ಎಂದು ಅಧ್ಯಯನ ಹೇಳಿದೆ. ಮಹಿಳೆಯ ರಕ್ತದಲ್ಲಿ ಕ್ರಿಯೇಟಿನ್ ಮಟ್ಟ ಹೆಚ್ಚಾಗಿರುವುದನ್ನು ಕಂಡ ಬಳಿಕ ವೈದ್ಯರು ತಪಾಸಣೆ ನಡೆಸಿದಾಗ ಅವರ ಮೂತ್ರಪಿಂಡ ಸರಿಯಾಗಿ ಕಾರ್ಯ ನಿರ್ವಹಿಸದೆ ಇರುವುದನ್ನು ಗಮನಿಸಿದ್ದಾರೆ. ಅವರ ಮೂತ್ರದಲ್ಲಿ ರಕ್ತದ ಅಂಶವಿತ್ತು. ಸಿಟಿ ಸ್ಕ್ಯಾನ್ ಮಾಡಿಸುವಂತೆ ವೈದ್ಯರು ಮಹಿಳೆಗೆ ಹೇಳಿದ್ದರು. ಆದರೆ ಸೋಂಕಿನ ಯಾವುದೇ ಲಕ್ಷಣಗಳು ಕಾಣಿಸಿರಲಿಲ್ಲ. ತಮ್ಮ ತಲೆಗೂದಲನ್ನು ನೇರ ಮಾಡಲು ಗ್ಲಿಯೋಕ್ಸಿಲಿಕ್ ಆಸಿಡ್ ಇರುವ ರಾಸಾಯನಿಕವನ್ನು ಬಳಸಲಾಗಿತ್ತು ಎಂಬುದನ್ನು ಆಕೆ ವೈದ್ಯರಿಗೆ ಹೇಳಿದ್ದಾರೆ. ಅವರ ನೆತ್ತಿಯಲ್ಲಿ ಉರಿಯೂತ ಹಾಗೂ ಹುಣ್ಣು ಆಗಲು ಇದೇ ಕಾರಣ ಎಂದು ವೈದ್ಯರು ತೀರ್ಮಾನಕ್ಕೆ ಬಂದಿದ್ದಾರೆ.

ಇಲಿಗಳ ಮೇಲೆ ಪ್ರಯೋಗ

ಇಲಿಗಳ ಮೇಲಿನ ಪ್ರಯೋಗಗಳ ಬಳಿಕ, ಅವರ ಚರ್ಮದ ಮೂಲಕ ದೇಹದ ಒಳಗೆ ಸೇರಿದ ಆಸಿಡ್, ಕಿಡ್ನಿಗಳಿಗೆ ತಲುಪಿದೆ. ಇದರಿಂದ ಅವುಗಳಿಗೆ ಹಾನಿ ಉಂಟಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕಿಡ್ನಿ ನಾಳಗಳಲ್ಲಿ ಕ್ಯಾಲ್ಸಿಯಂ ಓಕ್ಸಲೇಟ್ ಸೇರಿಕೊಂಡ ಪರಿಣಾಮ ಕಿಡ್ನಿ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವ ಅಪರೂಪದ ಕಾಯಿಲೆಯಾದ ಅಕೋಲೇಟ್ ನೆಪ್ರೋಪಥಿ ಕಾರಣದಿಂದ ಆಕೆಯಲ್ಲಿ ತೀವ್ರ ಸ್ವರೂಪದ ಮೂತ್ರಪಿಂಡ ಗಾಯ ಉಂಟಾಗಿದೆ ಎನ್ನಲಾಗಿದೆ. ಕೂದಲು ನೇರಪಡಿಸುವ ಪ್ರಕ್ರಿಯೆಯು ಇದಕ್ಕೆ ಗ್ಲಿಯೋಕ್ಸಿಲಿಕ್ ಆಸಿಡ್‌ ಹೊಣೆಗಾರ ಎಂಬುದನ್ನು ಸಾಬೀತುಪಡಿಸಿದೆ ಎಂದು ಅಧ್ಯಯನ ಹೇಳಿದೆ.

ಈ ಸುದ್ದಿಯನ್ನು ಓದಿದ್ದೀರಾ.?ರಾಜ್ಯದ ಮುಖ್ಯಮಂತ್ರಿಗೆ ಎಸ್ ನಾರಾಯಣ್ ಬರೆದ ‘ಭಾಗ್ಯರಾಜ ನಮ್ಮ ಮುಖ್ಯಮಂತ್ರಿ’ ಸಾಂಗ್ ರಿಲೀಸ್!

ಗುಂಗುರು ಅಥವಾ ಸುಕ್ಕುಗಟ್ಟಿದ ಕೂದಲುಗಳನ್ನು ನೇರ, ನುಣುಪು ಹಾಗೂ ಸಡಿಲಗೊಳಿಸಲು ಹೇರ್ ಸ್ಟೇಟನಿಂಗ್ ಮಾಡಲಾಗುತ್ತದೆ. ಈ ತಂತ್ರಜ್ಞಾನವು 1890ರ ಸಂದರ್ಭದಿಂದಲೂ ಬಳಕೆಯಲ್ಲಿದ್ದು, ಇದರಲ್ಲಿ ಬಳಸುವ ಕೆಲವು ರಾಸಾಯನಿಕಗಳನ್ನು ನಿಷೇಧಿಸಲು ಅಮೆರಿಕದ ಎಫ್‌ಡಿಎ ಕಳೆದ ವರ್ಷ ಪ್ರಸ್ತಾಪಿಸಿತ್ತು. ಇವುಗಳಲ್ಲಿ ಭಾರಿ ಪ್ರಮಾಣದ ವಿಷಕಾರಿ ಅಂಶವಿದ್ದು, ಕ್ಯಾನ್ಸರ್‌ಗೆ ಎಡೆಮಾಡಿಕೊಡಬಹುದು ಎಂದು ಅದು ತಿಳಿಸಿದೆ.

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ