ಕಡಬ: ಬಿಳಿನೆಲೆ ವಲಯ ಒಕ್ಕೂಟ ಪದಾಧಿಕಾರಿಗಳ ಸಭೆ
ಕಡಬ: ಬಿಳಿನೆಲೆ ವಲಯ ಒಕ್ಕೂಟ ಪದಾಧಿಕಾರಿಗಳ ಸಭೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಿಳಿನೆಲೆ ವಲಯ ಒಕ್ಕೂಟ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳ ಸಭೆಯು ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.ಬಿಳಿನೆಲೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಮಾತನಾಡಿ
ಬಿಳಿನೆಲೆ ವಲಯದ ಒಕ್ಕೂಟದ ಅಧ್ಶಕ್ಷರು ಹಾಗೂ ಪಧಾದಿಕಾರಿಗಳ ಬಳಗವು ಯೋಜನೆಯ ಕಾರ್ಯಕ್ರಮಗಳನ್ನು ಒಕ್ಕೂಟದಲ್ಲಿ ಸಮರ್ಪಕವಾಗಿ ಅನುಷ್ಟಾನಿಸಲು ಶ್ರಮಿಸಬೇಕು. ಸೇವಾಪ್ರತಿನಿಧಿಗಳಿಗೆ ಉತ್ತಮ ರೀತಿಯಲ್ಲಿ ಸಹಕಾರ ನೀಡುವುದರಿಂದ ಒಕ್ಕೂಟದ ಸದಸ್ಯರಲ್ಲಿ ಆರ್ಥಿಕ ಶಿಸ್ತನ್ನು ಮೂಡಿಸಲು ಸಾಧ್ಶವಾಗುವುದು.
ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯು ಸಂಘಗಳಿಗೆ ಅತೀ ಕಡಿಮೆಯಲ್ಲಿ 13.5% ಬಡ್ದಿ ದರ ದಲ್ಲಿ ಎಸ್ ಬಿ ಐ ಬ್ಯಾಂಕಿನಿಂದ ಆರ್ಥಿಕ ಸಹಾಯವನ್ನು ಮಾಡುವಲ್ಲಿ ಪ್ರಮುಖಪಾತ್ರ ವಹಿಸುತ್ತದೆ.
ಸದಸ್ಯರುಗಳು ತಾವು ಮಾಡಿರುವ ಉಳಿತಾಯವನ್ನು ಸಂಘದ ಸಾಲದ ಖಾತೆಗೆ ಜಮೆಗೊಳಿಸುವುದರಿಂದ ಉಳಿತಾಯವು ಸದಸ್ಯರಿಗೆ ಸಾಲವಾಗಿ ವಿತರಣೆಯಾಗುತ್ತಿದ್ದು ಸದಸ್ಯರು ಉಳಿತಾಯಕ್ಕೆ ಹೆಚ್ಚಿನ ಬಡ್ಡಿಯನ್ನು ಪಡೆಯುವಲ್ಲಿಯೂ ಸಹಕಾರಿಯಾಗುತ್ತದೆ.
ಸದಸ್ಯರು ವಾರ ವಾರ ಮಾಡುವ ಉಳಿತಾಯ ಹಾಗೂ ತಾವು ಪಡೆದುಕೊಂಡ ಸಾಲದ ವಾರದ ಕಂತನ್ನು ಎಸ್ ಬಿ ಐ ಆಧೀನದಲ್ಲಿ ಯೋಜನೆಯ ಮೂಲಕ ನಡೆಯುತ್ತಿರುವ ಹಣ ಸಂಗ್ರಹಣಾ ಕೇಂದ್ರದಲ್ಲಿ ಜಮೆ ಮಾಡುವುದರಿಂದ ಸದಸ್ಯರು ಬ್ಯಾಂಕ್ ನಲ್ಲಿ ಕ್ಯೂ ನಿಲ್ಲುವ ಪ್ರಮೇಯ ತಪ್ಪುತ್ತದೆ ಹಾಗೂ ನಿಗದಿಪಡಿಸಿದ ಸಮಯದೊಳಗೆ ಹಣಸಂಗ್ರಹಣಾ ಕೇಂದ್ರದಲ್ಲಿ ಸಂಘದ ಹಣವನ್ನು ಜಮೆಮಾಡಲು ಸಹಕಾರಿಯಾಗುತ್ತದೆ.
ಸಂಘದ ಸಿ ಸಿ ಖಾತೆ ಮೂಲಕ ವ್ಯವಹಾರ ಮಾಡಿದ ಮಾಹಿತಿಯನ್ನು ಸದಸ್ಯವಾರು ತಿಂಗಳಿಗೊಮ್ಮೆ ವರದಿ ನೀಡುವುದರಿಂದ ಸಂಘದ ಮೂಲಕ ತಮ್ಮ ವ್ಯವಹಾರದ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಸಹಕಾರಿಯಾಗುತ್ತದೆ.
ಒಕ್ಕೂಟದ ಸಂಘಗಳಿಗೆ ಆರ್ಥಿಕ ಶಿಸ್ತುಮೂಡಿಸುವಲ್ಲಿ ಯೋಜನೆಯ ವತಿಯಿಂದ ಸಂಘದ ಪ್ರತೀ ಸದಸ್ಯರಿಗೆ ತರಬೇತಿಯು ನಡೆಯುತ್ತಿದ್ದು ಪಧಾದಿಕಾರಿಗಳು ತಮ್ಮ ಜವಾಬ್ದಾರಿಯ ಸಂಘಗಳಿಗೆ ಕಾಲಕಾಲಕ್ಕೆ ತರಬೇತಿ ಕೊಡುವುದು ಪ್ರತಿಯೋಬ್ಬ ಪದಾಧಿಕಾರಿಯ ಆಧ್ಯ ಕರ್ತವ್ಯವಾಗಿದೆ . ಒಕ್ಕೂಟದ ಸಂಘಗಳಲ್ಲಿ ಆರ್ಥಿಕ ಅವ್ಯವಹಾರ ನಡೆಯದಂತೆ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ಪದಾಧಿಕಾರಿಗಳ ಸಂಘ ಬೇಟಿ ಸಂಧರ್ಭ ಮಾಡುವಂತೆ ಮಾಹಿತಿ ನೀಡಿದರು.ಸಭೆಯ ಅಧ್ಯಕ್ಷತೆಯನ್ನು ಬಿಳಿನೆಲೆ ವಲಯ ಒಕ್ಕೂಟದ ಅಧ್ಯಕ್ಷರಾದ ಸಂತೋಷ್ ಕೇನ್ಶ ವಹಿಸಿದ್ದರು.
ಒಕ್ಕೂಟದ ಅಧ್ಶಕ್ಷರುಗಳಾದ ರಾಜೇಶ್ ಬಿಳಿನೆಲೆ ,ವಿಶ್ವನಾಥ ಗೌಡ ಕೆಂಜಾಳ,ˌಕುಲಶೇಖರ ಐತ್ತೂರುˌಸತೀಶ್ಚಂದ್ರ ರೈ ಬಂಟ್ರˌ ಸತೀಶ್ ಕುಮಾರ್ ಬೊಳ್ಳೂರ, ˌಡೀಕಯ್ಯ ಗೌಡ ಕೋಣಾಜೆ, ಧರ್ಮಪಾಲ ಗೌಡ ಕೊಂಬಾರು ಹಾಗೂ ವಲಯದ ಒಕ್ಕೂಟದ ಪಧಾದಿಕಾರಿಗಳು ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.ಸೇವಾಪ್ರತಿನಿಧಿ ಸತೀಶ್ ಸ್ವಾಗತಿಸಿ ದಿನೇಶ್ ಧನ್ಯವಾದ ಸಲ್ಲಿಸಿದರು.