• 22 ನವೆಂಬರ್ 2024

ಆಸ್ತಿ ನೋಂದಣಿ ಮಾರ್ಗಸೂಚಿ ದರ ಹೆಚ್ಚಳ – ಅಕ್ಟೋಬರ್‌ 1 ರಿಂದ ಜಾರಿ: ಕೃಷ್ಣಭೈರೇಗೌಡ

 ಆಸ್ತಿ ನೋಂದಣಿ ಮಾರ್ಗಸೂಚಿ ದರ ಹೆಚ್ಚಳ – ಅಕ್ಟೋಬರ್‌ 1 ರಿಂದ ಜಾರಿ: ಕೃಷ್ಣಭೈರೇಗೌಡ
Digiqole Ad

ಆಸ್ತಿ ನೋಂದಣಿ ಮಾರ್ಗಸೂಚಿ ದರ ಹೆಚ್ಚಳ – ಅಕ್ಟೋಬರ್‌ 1 ರಿಂದ ಜಾರಿ: ಕೃಷ್ಣಭೈರೇಗೌಡ

ಆಸ್ತಿಗಳ ನೋಂದಣಿ ಮಾರ್ಗಸೂಚಿ ದರ ಹೆಚ್ಚಳಕ್ಕೆ ಮುಂದಾಗಿದ್ದು, ಅಕ್ಟೋಬರ್ 1 ರಿಂದ ಜಾರಿಯಾಗಲಿದೆ. ಶೇಕಡಾ 30ರಷ್ಟು ಹೆಚ್ಚಳ ಆಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ .
ಪ್ರತಿ ವರ್ಷ ದರ ಪರಿಷ್ಕರಣೆ ಮಾಡುವ ನಿಯಮವಿದೆ. ಹೀಗಾಗಿ ಅಕ್ಟೋಬರ್ 1 ರಿಂದ ಪರಿಷ್ಕೃತ ದರವನ್ನು ಜಾರಿ ಮಾಡುತ್ತಿದ್ದೇವೆ ಎಂದು ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕೃಷ್ಣ ಬೈರೇಗೌಡ, ಮಾರುಕಟ್ಟೆ ದರಕ್ಕಿಂತ ಬಹಳ ಕಡಿಮೆ ಮಾರ್ಗಸೂಚಿ ದರ ಇದ್ದಾಗ ದರ ಹೆಚ್ಚಳ ಮಾಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಎಲ್ಲಾ ಕಡೆ ಮಾರ್ಗಸೂಚಿ ದರ ಏರಿಕೆ ಆಗಲ್ಲ. ಕೆಲವು ಕಡೆ ಮಾರುಕಟ್ಟೆ ದರಕ್ಕಿಂತ ಮಾರ್ಗಸೂಚಿ ದರ ಹೆಚ್ಚಳ ಇದ್ದರೆ ದರ ಪರಿಷ್ಕರಣೆ ಆಗಲ್ಲ. ಆದರೆ ಮಾರುಕಟ್ಟೆ ದರಕ್ಕಿಂತ ಬಹಳ ಕಡಿಮೆ ಮಾರ್ಗಸೂಚಿ ದರ ಇದ್ದರೆ ಅಲ್ಲಿ ದರ ಹೆಚ್ಚಳ ಆಗಲಿದೆ. ಹೈವೆ, ವಿಮಾನ ನಿಲ್ದಾಣ, ಐಟಿ-ಬಿಟಿ ಬಂದಿರೋ ಕಡೆಯೇ ಮಾರ್ಗಸೂಚಿ ದರ ಕಡಿಮೆ ಇದೆ. ಇಂತಹ ಕಡೆ ಮಾರ್ಗಸೂಚಿ ದರ ಹೆಚ್ಚಳ ಆಗಲಿದೆ ಎಂದು ತಿಳಿಸಿದರು.

ಒಟ್ಟಾರೆಯಾಗಿ ಸರಾಸರಿ 25% ರಿಂದ 30% ಮಾರ್ಗಸೂಚಿ ದರ ಏರಿಕೆ ಆಗಲಿದೆ.
ಏಕಾಏಕಿ ಜನರ ಸಂಖ್ಯೆ ಹಾಗೂ ನೋಂದಣಿಯಾಗುವ ಆಸ್ತಿಗಳ ಸಂಖ್ಯೆ ಹೆಚ್ಚಾದ ಕಾರಣ ಆನ್‌ಲೈನ್‌ ಸೇವೆಯಲ್ಲಿ ವ್ಯತ್ಯಯವುಂಟಾಗಿದೆ. ಕಾವೇರಿ 2 ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಕೆ ಸೇರಿದಂತೆ ಆಸ್ತಿ ನೋಂದಣಿಗೆ ಸಂಬಂಧಿಸಿದ ಇನ್ನಿತರ ಪ್ರಕ್ರಿಯೆಗಳನ್ನು ನಡೆಸಲಾಗದೆ ಜನರು ಸೇರಿದಂತೆ ಉಪ ನೋಂದಣಾಧಿಕಾರಿಗಳ ಕಚೇರಿ ಸಿಬ್ಬಂದಿಯೂ ಪರದಾಡುವಂತಾಗಿತ್ತು. ಕೆಲ ಹೊತ್ತು ಮಾತ್ರ ಕಾರ್ಯನಿರ್ವಹಿಸಿದ ಕಾವೇರಿ 2 ತಂತ್ರಾಂಶ, ಅದಾದ ನಂತರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ರಾಜ್ಯದಲ್ಲಿ ಕಾವೇರಿ 2 ತಂತ್ರಾಂಶದಿಂದ ಪ್ರತಿದಿನ 12ರಿಂದ 13 ಸಾವಿರ ಆಸ್ತಿಗಳು ನೋಂದಣಿಯಾಗುತ್ತಿವೆ. ಆದರೆ, ಗುರುವಾರ ಉಂಟಾದ ಸರ್ವರ್‌ ಸಮಸ್ಯೆಯಿಂದಾಗಿ ಸರಾಸರಿಯಲ್ಲಿ ಶೇ.20ರಷ್ಟು ಮಾತ್ರ ಆಸ್ತಿ ನೋಂದಣಿ ಸಾಧ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ