ಇನ್ನು ಮುಂದೆ ಗರ್ಭ ಗುಡಿಗೆ ಪ್ರವೇಶಿಸಿ ಹಾಸನಾಂಬೆಯ ದರ್ಶನ ಪಡೆಯುವಂತಿಲ್ಲ :
ಇನ್ನು ಮುಂದೆ ಗರ್ಭ ಗುಡಿ ಪ್ರವೇಶಿಸಿ ಹಾಸನಾಂಬೆಯ ದರ್ಶನ ಪಡೆಯುವಂತಿಲ್ಲ:
ಹಾಸನ : ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆಯನ್ನು ಕಣ್ಣು ತುಂಬಿಕೊಳ್ಳಲು ಹಲವಾರು ಕಡೆಯಿಂದ ಜನಸಾಗರವೇ ಹರಿದು ಬರುತ್ತದೆ. ಇದೀಗ ತಾಯಿಯ ದರ್ಶನಕ್ಕೆ ನಾಲ್ಕೆ ದಿನ ಬಾಕಿ ಇದ್ದು, ಭಕ್ತಾದಿಗಳ ಆಗಮನ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. ಅಲ್ಲದೇ ನಿನ್ನೆವರೆಗೂ ಗಣ್ಯರು, ಅತಿಗಣ್ಯರಿಗೆ ದೇವಸ್ಥಾನದ ಗರ್ಭ ಗುಡಿಗೆ ಪ್ರವೇಶಿಸಲು ಅವಕಾಶ ನೀಡುತ್ತಿದ್ದು, ಇನ್ನು ಮುಂದೆ ಗರ್ಭ ಗುಡಿಗೆ ಪ್ರವೇಶಿಸಲು ಪೂಜಾರಿಯನ್ನು ಹೊರತು ಪಡಿಸಿ ಯಾರಿಗೂ ಅವಕಾಶ ಇಲ್ಲ ಎಂಬ ಮಹತ್ವದ ನಿರ್ಧಾರವನ್ನು ದೇವಸ್ಥಾನದ ಆಡಳಿತ ಮಂಡಳಿಯು ಕೈಗೊಂಡಿದೆ. ಇನ್ನೇನು ದೇವಿಯ ದರ್ಶನ ಪಡೆಯಲು ಬೆರಳೆಣಿಕೆಯ ದಿನಗಳು ಬಾಕಿ ಇರುವುದರಿಂದ,
ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಇದರಿಂದ ಕೆಲವರು ಗರ್ಭ ಗುಡಿ ಪ್ರವೇಶಿಸಿ ದರ್ಶನ ಪಡೆಯುತ್ತಿರುವುದರಿಂದ ಸಾಮಾನ್ಯ ಭಕ್ತಾದಿಗಳಿಗೆ ದರ್ಶನ ಪಡೆಯಲು ಸಮಸ್ಯೆ ಆಗುತ್ತಿದ್ದು, ಮಂಡಳಿಯು ಇನ್ನು ಮುಂದೆ ಗರ್ಭ ಗುಡಿ ಪ್ರವೇಶ ಮಾಡುವಂತಿಲ್ಲ ಎಂಬ ಇತಿಹಾಸದಲ್ಲೇ ಪ್ರಥಮ ಬಾರಿ ಇಂತಹ ನಿರ್ಧಾರ ತೆಗೆದುಕೊಂಡಿದೆ.