• 22 ನವೆಂಬರ್ 2024

ಕರಾವಳಿಗೆ ಬಂತು ಒಮನ್‌ ಬೂತಾಯಿ ಇದರ ರುಚಿ ದರದ ಬಗ್ಗೆ ಇಲ್ಲಿದೆ ಮಾಹಿತಿ

 ಕರಾವಳಿಗೆ ಬಂತು ಒಮನ್‌ ಬೂತಾಯಿ ಇದರ ರುಚಿ ದರದ ಬಗ್ಗೆ ಇಲ್ಲಿದೆ ಮಾಹಿತಿ
Digiqole Ad

ಕರಾವಳಿಗೆ ಬಂತು ಒಮನ್‌ ಬೂತಾಯಿ ಇದರ ರುಚಿ ದರದ ಬಗ್ಗೆ ಇಲ್ಲಿದೆ ಮಾಹಿತಿ


ಮಂಗಳೂರು ಕಡಲ ನಗರಿಗೆ ಒಮನ್‌ ಬೂತಾಯಿ ಆಗಮಿಸಿದ್ದು, ಹೆಚ್ಚಿನ ಬೇಡಿಕೆ ಬಂದಿದೆ.
ಕರಾವಳಿಗೆ ಮತ್ತೆ ಒಮನ್‌ ಬೂತಾಯಿಯ ಆಗಮನವಾಗಿದೆ. ಈ ಮೀನನ್ನು ‘ಮೋದಿ ಬೂತಾಯಿ’ ಎಂದು ಕರೆಯುವುದು ಇದೆ. ಒಮನ್‌ನಿಂದ ಆಮದು ಮಾಡಿಕೊಳ್ಳುವ ಈ ಮೀನು ಸಾಮಾನ್ಯ ಬೂತಾಯಿ ಮೀನಿಗಿಂತ ಗಾತ್ರ ಹಾಗೂ ರುಚಿಯಲ್ಲಿ ಹೆಚ್ಚಿನ ವ್ಯತ್ಯಾಸವೂ ಕಾಣಬಹುದಾಗಿದೆ.

ಈ ಋತುವಿನಲ್ಲಿ ಕರಾವಳಿಯ ಬಂದರುಗಳಲ್ಲಿ ಬೂತಾಯಿ ಮೀನನ್ನು ಕಂಡಿದ್ದು ಕಡಿಮೆ. ಆದ್ದರಿಂದ ಕೇವಲ ಒಂದು ತಿಂಗಳಷ್ಟೇ ಆಮದು ಮಾಡಿಕೊಳ್ಳುವ ಒಮನ್‌ ಬೂತಾಯಿ ಈಗ ಮೀನು ಪ್ರಿಯರ ಬಾಯಿ ಚಪ್ಪರಿಸಲು ತಯಾರಾಗಿದೆ.
ಒಮನ್‌ ಬೂತಾಯಿ ಅಥವಾ ಸ್ಥಳೀಯವಾಗಿ ಸ್ಪೆಷಲ್ ಬೂತಾಯಿ ಎಂದು ಕರೆಯಲ್ಪಡುವ ಈ ಮೀನು ಸಾಮಾನ್ಯ ಬೂತಾಯಿ ಮೀನಿಗಿಂತ ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಅಷ್ಟೇ ಅಲ್ಲ, ರುಚಿಯೂ ಮೀನು ಪ್ರಿಯರಿಗೆ ಇಷ್ಟವಾಗುವಂತಿರುತ್ತದೆ. ಇನ್ನು ರೇಟು ವಿಚಾರಕ್ಕೆ ಬಂದರೆ ಸ್ಥಳೀಯವಾಗಿ ಸಿಗುವ ಬೂತಾಯಿ ಮೀನಿಗಿಂತ ಹೆಚ್ಚಿರುತ್ತದೆ. ಸ್ಥಳೀಯವಾಗಿ ಆಳ ಸಮುದ್ರದಲ್ಲಿ ಸಿಗುವ ಬೂತಾಯಿ ಮೀನುಗಳಿಗೆ ಕೆಜಿಗೆ 150 ರಿಂದ 170 ರೂಪಾಯಿ ಇದ್ದರೆ, ಒಮನ್‌ ಬೂತಾಯಿಗೆ 200 ರಿಂದ 230 ಇರುತ್ತದೆ. ಆದ್ರೂ, ಒಮನ್‌ ಬೂತಾಯಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಸ್ಥಳೀಯ ಮೀನುಗಾರರು ಲಾಭವನ್ನೂ ಗಳಿಸುತ್ತಾರೆ.

ಸ್ಥಳೀಯವಾಗಿ ಸಿಗುವ ಬೂತಾಯಿ ಮೀನುಗಳು ಕೆಜಿಗೆ 20ಕ್ಕೂ ಹೆಚ್ಚು ಸಿಕ್ಕರೆ, ಒಮನ್‌ ಬೂತಾಯಿ ಮೀನುಗಳು ಕೆಜಿಗೆ 7 ರಿಂದ 12ಗಳಷ್ಟೇ ತೂಗುತ್ತವೆ.

Digiqole Ad

ಈ ಸುದ್ದಿಗಳನ್ನೂ ಓದಿ