• 8 ಸೆಪ್ಟೆಂಬರ್ 2024

ಕಾಣಿಯೂರು , ಸವಣೂರು, ನರಿಮೊಗರು ಕ್ಲಸ್ಟರ್ ಮಟ್ಟದ ಸಮಾಲೋಚನಾ ಸಭೆ

 ಕಾಣಿಯೂರು , ಸವಣೂರು, ನರಿಮೊಗರು ಕ್ಲಸ್ಟರ್ ಮಟ್ಟದ ಸಮಾಲೋಚನಾ ಸಭೆ
Digiqole Ad

ಕಾಣಿಯೂರು , ಸವಣೂರು, ನರಿಮೊಗರು ಕ್ಲಸ್ಟರ್ ಮಟ್ಟದ ಸಮಾಲೋಚನಾ ಸಭೆ

 

ಕಾಣಿಯೂರು, ಸವಣೂರು, ನರಿಮೊಗರು ಕ್ಲಸ್ಟರ್ ಮಟ್ಟದ ವಿಜ್ಞಾನ, ಸಮಾಜ ,ಗಣಿತ ವಿಷಯ ಆಧಾರಿತ ಸಮಾಲೋಚನ ಸಭೆಯು ದ, ಕ, ಜಿ, ಪ ಸರಕಾರಿ ಶಾಲೆ ನಾಣಿಲದಲ್ಲಿ ನಡೆಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಸಂತದಲಾರಿ ವಹಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಾಲಾ ಅಭಿವೃದ್ಧಿ ಮತ್ತು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ನಮ್ಮ ಶಾಲಾ ಅಭಿವೃದ್ಧಿ ಸಮಿತಿಯು ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸುತ್ತೇವೆ ಎಂಬ ಭರವಸೆಯನ್ನು ನೀಡಿದರು.ಈ ಕಾರ್ಯಕ್ರಮದಲ್ಲಿ ಕಾಣಿಯೂರು ಕ್ಲಸ್ಟರಿನ ಸಿ ಆರ್ ಪಿ ಯಶೋದ , ಪುತ್ತೂರು ತಾಲೂಕಿನ ಟಿ ಜಿ ಟಿ ಸಂಘದ ಅಧ್ಯಕ್ಷರಾದ ವಿಜಯ , ಕಡಬ ತಾಲೂಕಿನ ಪ್ರೌಢಶಾಲಾ ಶಿಕ್ಷಕರ ಸಂಘದ ಕೋಶಾಧಿಕಾರಿ ಶ್ರೀಲತಾ , ಸಮಾಲೋಚನಾ ಸಭೆಗೆ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ರವೀಂದ್ರ ಶಾಸ್ತ್ರಿ, ನಯನ ಕುಮಾರಿ ಅವರು ಎಲ್ಲಾ ಶಿಕ್ಷಕರಿಗೆ ಉಪಯುಕ್ತ ಮಾಹಿತಿ ನೀಡಿದರು, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಕುಸುಮಾವತಿ ಕಳ, ಸದಸ್ಯರುಗಳಾದ ಪುರಂದರ ಅಂಬುಲ, ದಿನೇಶ ಕುಕುನಡ್ಕ, ಬಾಲಕೃಷ್ಣ ಕಂಡಿಗ, ಆನಂದ ಉದ್ದ ಲಡ್ಡ, ಸರೋಜಿನಿ ಅರುವ, ಶಕುಂತಲಾ ಕುಂಬ್ಲಾಡಿ, ಪುಷ್ಪಲತಾ ಬೀರೊಳಿಗೆ, ಸವಣೂರು ಕ್ಲಸ್ಟರಿನ ಸಿ ಆರ್ ಪಿ ಕುಶಾಲಪ್ಪ ಸ್ವಾಗತಿಸಿದರು ಶಾಲಾ ಮುಖ್ಯ ಗುರುಗಳಾದ ಪದ್ಮಯ್ಯ ಗೌಡ ಧನ್ಯವಾದ ಅರ್ಪಿಸಿದರು.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ