• 9 ಡಿಸೆಂಬರ್ 2024

ಅನಂತ್ ಅಂಬಾನಿ ಮದುವೆಗೆ 100 ರೂ. ಮುಯ್ಯಿ ಕೊಟ್ಟ ಅಜ್ಜಿ; ಅಹಂಕಾರವಿಲ್ಲದೇ ಸ್ವೀಕರಿಸಿದ ಕೋಟ್ಯಾಧೀಶ್ವರ

 ಅನಂತ್ ಅಂಬಾನಿ ಮದುವೆಗೆ 100 ರೂ. ಮುಯ್ಯಿ ಕೊಟ್ಟ ಅಜ್ಜಿ; ಅಹಂಕಾರವಿಲ್ಲದೇ ಸ್ವೀಕರಿಸಿದ ಕೋಟ್ಯಾಧೀಶ್ವರ
Digiqole Ad

ಅನಂತ್ ಅಂಬಾನಿ ಮದುವೆಗೆ 100 ರೂ. ಮುಯ್ಯಿ ಕೊಟ್ಟ ಅಜ್ಜಿ; ಅಹಂಕಾರವಿಲ್ಲದೇ ಸ್ವೀಕರಿಸಿದ ಕೋಟ್ಯಾಧೀಶ್ವರ

ನಮ್ಮ ದೇಶದಲ್ಲಿ ಕುಬೇರ, ಆಗರ್ಭ ಶ್ರೀಮಂತ, ಕೋಟ್ಯಾಧೀಶ್ವರ ಎಂದು ಕರೆಸಿಕೊಳ್ಳುವ ಅಂಬಾನಿ ಕುಡಿ ಅನಂತ್ ಅಂಬಾವಿ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಅಜ್ಜಿಯೊಬ್ಬರು ಬಂದು ರಾಧಿಕಾಗೆ ಹೂಗುಚ್ಛ ನೀಡಿದರೆ, ಅನಂತ್‌ಗೆ 100 ರೂ. ಮುಯ್ಯಿ ನೀಡುತ್ತಾರೆ. ಆದರೆ, ಈ ಹಣವನ್ನು ಸ್ವಲ್ಪವೂ ಗರ್ವ ತೋರಿಸದೇ ಗೌರವವಾಗಿ ಸ್ವೀಕರಿಸಿದ ಅನಂತ್ ಅಂಬಾನಿ ನಡೆ ಹಾಗೂ ಅಜ್ಜಿಯ ಮದುವೆಗೆ ಉಡುಗೊರೆ ಕೊಡುವ ಸಂಪ್ರದಾಯ ನೋಡಿದ ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸುದ್ದಿ ಓದಿದ್ದೀರಾ?: ಜಗತ್ತಿನ ಶ್ರೀಮಂತ ಭಿಕ್ಷುಕನ ಬಗ್ಗೆ‌ ಕೇಳಿದ್ದೀರಾ?😳😳

ಹೌದು, ನಮ್ಮ ದೇಶದಲ್ಲಿ ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್ ಕಾರ್ಯಕ್ರಮವನ್ನು ಕುಬೇರರ ಕಾರ್ಯಕ್ರಮವೆಂದೇ ಹೇಳಬಹುದು. ಈ ಸಮಾರಂಭಕ್ಕೆ ದೇಶದ ಬಹುತೇಕ ಹಾಗೂ ಜಗತ್ತಿನ ಹಲವು ಸೆಲೆಬ್ರಿಟಿಗಳು ಮತ್ತು ಶ್ರೀಮಂತರು ಬಂದು ಪಾಲ್ಗೊಂಡಿದ್ದಾರೆ. ಇನ್ನು ನಮ್ಮ ದೇಶದ ಎಲ್ಲ ಖ್ಯಾತ ಚಿತ್ರ ತಾರೆಯರು ಮತ್ತು ಕ್ರೀಡಾ ಪಟುಗಳು ಭಾಗವಹಿಸಿ ಕುಣಿದು ಕುಪ್ಪಳಿಸಿದ್ದಾರೆ. ಇನ್ನು ಸ್ವತಃ ಮುಖೇಶ್ ಅಂಬಾನಿ ಅವರು ಗುಜರಾತ್‌ನ ತಮ್ಮ ಗ್ರಾಮದ ಎಲ್ಲ ಜನಸಾಮಾನ್ಯರಿಗೂ ಆಹ್ವಾನವನ್ನೂ ಕೊಟ್ಟಿದ್ದಾರೆ. ಇನ್ನು ಮದುವೆ ಪೂರ್ವ ಸಮಾರಂಭದಲ್ಲಿ ಭಾಗವಹಿಸಿದ ಎಲ್ಲ ಅತಿಥಿಗಳು ಕೂಡ ಅವರ ಸಾಮರ್ಥ್ಯಾನುಸಾರ ಉಡುಗೊರೆಯನ್ನು ನೀಡಿದ್ದಾರೆ.

ಇನ್ನು ಮದುವೆಗೆ ಬಂದಿದ್ದ ಅಜ್ಜಿಯೊಬ್ಬರು ವೇದಿಕೆಯ ಮೇಲೆ ಬಂದು ವಿವಾಹವಾಗುವ ಜೋಡಿಯಾದ ಅನಂತ್ ಅಂಬಾನಿ ಹಾಗೂ ರಾಧಿಕಾಗೆ ಆಶೀರ್ವಾದ ಮಾಡಿದ್ದಾರೆ. ಈ ವೇಳೆ ರಾಧಿಕಾ ಮರ್ಚೆಂಟ್‌ಗೆ ಹೂಗುಚ್ಛವನ್ನು ನೀಡಿ ಶುಭಾಶಯ ಕೋರಿದರೆ, ಪಕ್ಕದಲ್ಲಿಯೇ ನಿಂತಿದ್ದ ಕೋಟ್ಯಾಧೀಶ್ವರ ಅನಂತ್‌ಗೆ 100 ರೂ. ನೋಟನ್ನು ಮುಯ್ಯಿಯಾಗಿ ನೀಡಿ ತಲೆ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಿದ್ದಾರೆ. ಈ ವೇಳೆ ಅನಂತ್ ಒಂದಿನಿತೂ ತಾನು ಶ್ರೀಮಂತನೆಂಬ ಗರ್ವವನ್ನು ತೋರಿಸದೇ ನಗು-ನಗುತ್ತಲೇ ಗೌರವ ಪೂರ್ವಕವಾಗಿ ಮುಯ್ಯಿ ಹಣವನ್ನು ಪಡೆದಿದ್ದಾರೆ. ಇಲ್ಲಿ ಅನಂತ್ ಅಂಬಾನಿ ಕುಬೇರನಾಗಿದ್ದರೂ ಸರಳತೆ ತೋರಿದ್ದು ಹಾಗೂ ಅಜ್ಜಿ ಶ್ರೀಮಂತರ ಮದುವೆಗೆ ಬಂದಿದ್ದೇನೆ 100 ರೂ. ಉಡುಗೊರೆ ಕೊಟ್ಟರೆ ಪಡೆಯುತ್ತಾರೆ ಇಲ್ಲವೋ ಎಂಬ ಹಿಂಜರಿಕೆ ಇಲ್ಲದೇ ತಮ್ಮ ಸಾಮರ್ಥ್ಯದ ಅನುಸಾರ ಸಂಪ್ರದಾಯದಂತೆ ಮುಯ್ಯಿ ನೀಡಿದ್ದನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಶಬರಿಮಲೆ ಯಾತ್ರೆ😱 

www.goldfactorynews.com

Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

Digiqole Ad

ಈ ಸುದ್ದಿಗಳನ್ನೂ ಓದಿ