• 27 ಜುಲೈ 2024

Electoral Bond ಡೇಟಾ ಬಹಿರಂಗ, ಅತೀ ದೊಡ್ಡ ದಾನಿ ಯಾರು?ಸರಿ ಸುಮಾರು 1,368 ಕೋಟಿ ಮೌಲ್ಯದ ಬಾಂಡ್‌ ಖರೀದಿ!

 Electoral Bond ಡೇಟಾ ಬಹಿರಂಗ, ಅತೀ ದೊಡ್ಡ ದಾನಿ ಯಾರು?ಸರಿ ಸುಮಾರು 1,368 ಕೋಟಿ ಮೌಲ್ಯದ ಬಾಂಡ್‌ ಖರೀದಿ!
Digiqole Ad

Electoral Bond ಡೇಟಾ ಬಹಿರಂಗ, ಅತೀ ದೊಡ್ಡ ದಾನಿ ಯಾರು?ಸರಿ ಸುಮಾರು 1,368 ಕೋಟಿ ಮೌಲ್ಯದ ಬಾಂಡ್‌ ಖರೀದಿ!

ಈ ಕಂಪನಿಯು ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್ ಪ್ರೈವೇಟ್ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ. Electoral Bond ಡೇಟಾ ಬಹಿರಂಗ, ಅತೀ ದೊಡ್ಡ ದಾನಿ ಯಾರು ಗೊತ್ತಾ? ಬರೋಬ್ಬರಿ 1,368 ಕೋಟಿ ಮೌಲ್ಯದ ಬಾಂಡ್‌ ಖರೀದಿ.ಈ ಕಂಪನಿಯು 1991 ರಲ್ಲಿ ಪ್ರಾರಂಭವಾಗಿ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್ ಪ್ರೈವೇಟ್ ಹೆಸರಿನಲ್ಲಿ ನೋಂದಾವಣೆ ಆಗಿದೆ.ತಮಿಳುನಾಡಿನ ಕೊಯಮತ್ತೂರು ಮೂಲದ ಫ್ಯೂಚರ್ ಗೇಮಿಂಗ್ ಸಂಸ್ಥೆಯು ಎಲೆಕ್ಟೋರಲ್ ಬಾಂಡ್‌ಗಳ ಮೂಲಕ ಗರಿಷ್ಠ 1,368 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಕಂಪನಿಯು ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್ ಪ್ರೈ.ಲಿ. ಹೆಸರಿನಲ್ಲಿ ನೋಂದಣಿಯಾಗಿದೆ. ಇದನ್ನು 1991 ರಲ್ಲಿ ಪ್ರಾರಂಭವಾದ ಈ ಕಂಪನಿಯು ಭಾರತದ ಲಾಟರಿ ಕಿಂಗ್ ಎಂದು ಪ್ರಸಿದ್ಧರಾದ ಸ್ಯಾಂಟಿಯಾಗೊ ಮಾರ್ಟಿನ್ ಆರಂಭಿಸಿದರು.

ಈ ಸುದ್ದಿ ಓದಿದ್ದೀರಾ?:ಹ್ಯುಂಡೈ ಎಕ್ಸ್‌ಟರ್ SUV ಕಾರು ಬಿಡುಗಡೆ! ಈ ಕಾರಿಗೆ ಭಾರೀ ಡಿಮಾಂಡ್!

ಫ್ಯೂಚರ್‌ನ ಸಾಮಾಜಿಕ ಜಾಲತಾಣ ನೀಡಿದ ಮಾಹಿತಿ ಪ್ರಕಾರ ಪ್ರಕಾರ, ಮಾರ್ಟಿನ್ 13 ನೇ ವಯಸ್ಸಿನಲ್ಲಿ ಲಾಟರಿ ವ್ಯವಹಾರವನ್ನು ಪ್ರಾರಂಭಿಸಿದರು. ಅವರು ಭಾರತದಾದ್ಯಂತ ಲಾಟರಿ ಖರೀದಿದಾರರು ಮತ್ತು ಮಾರಾಟಗಾರರ ದೊಡ್ಡ ಮಾರುಕಟ್ಟೆ ಜಾಲವನ್ನು ನಿರ್ಮಿಸಿದರು. ದಕ್ಷಿಣದಲ್ಲಿ ಕಂಪನಿಯು ಮಾರ್ಟಿನ್ ಕರ್ನಾಟಕ ಎಂಬ ಅಂಗಸಂಸ್ಥೆಯ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದು ಈಶಾನ್ಯದಲ್ಲಿ ಕಂಪನಿಯು ಮಾರ್ಟಿನ್ ಸಿಕ್ಕಿಂ ಲಾಟರಿಯನ್ನು ಪ್ರಾರಂಭಿಸಿತು.ಕಂಪನಿಯು 13 ರಾಜ್ಯಗಳಲ್ಲಿ 1,000 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಕೆಲಸ ನೀಡಿದೆ, ಅರುಣಾಚಲ ಪ್ರದೇಶ, ಅಸ್ಸಾಂ, ಗೋವಾ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.

ಅಕ್ಟೋಬರ್ 2023 ರಲ್ಲಿ, ಆದಾಯ ತೆರಿಗೆ ಇಲಾಖೆಯು ಮಾರ್ಟಿನ್ ಮತ್ತು ಫ್ಯೂಚರ್ ಗೇಮಿಂಗ್‌ನ ನಾಲ್ಕು ಸ್ಥಳಗಳ ಮೇಲೆ ದಾಳಿ ನಡೆಸಿ ಈ ತನಿಖೆಯನ್ನು 2002 ರ ಮನಿ ಲಾಂಡರಿಂಗ್ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಸ್ಯಾಂಟಿಯಾಗೊ ಮಾರ್ಟಿನ್ ಮತ್ತು ಅವರ ಪಾಲುದಾರರು 2009-10 ರ ನಡುವೆ ಬಹುಮಾನ ವಿಜೇತ ಟಿಕೆಟ್ ಕ್ಲೈಮ್‌ಗಳ ಬೆಲೆಗಳನ್ನು ಏರಿಸುವ ಮೂಲಕ ಸುಮಾರು 910 ಕೋಟಿ ರೂಪಾಯಿಗಳ ಲಾಭವನ್ನು ಅಕ್ರಮವಾಗಿ ಗಳಿಸಿ ಕೊಂಡಿದೆ ಎಂದು ಇಲಾಖ ಅಧಿಕಾರಿಗಳ ವಾದವಾಗಿತ್ತು.
ಏಪ್ರಿಲ್ 2022 ರಲ್ಲಿ, ಇ.ಡಿ ಫ್ಯೂಚರ್ ಗೇಮಿಂಗ್ ಮತ್ತು ಅದರ ವೈಯಕ್ತಿಕ ಲಾಟರಿ ಟಿಕೆಟ್ ವಿತರಕರು ಕಾನೂನುಬಾಹಿರವಾಗಿ ಮಾರಾಟವಾಗದ ಲಾಟರಿ ಟಿಕೆಟ್‌ಗಳನ್ನು ಇದ್ದು ಮತ್ತು ಆ ಟಿಕೆಟ್‌ಗಳಿಗೆ ಹೆಚ್ಚಿನ ಬೆಲೆ ನಿದಿಪಡಿಸಿದ್ದಾರೆ ಎಂದು ಆರೋಪಿಸಿತ್ತು.

ಲಾಟರಿ ಟಿಕೆಟ್ ಮಾರಾಟದಿಂದ ಬಂದ ಲಾಭವನ್ನು ಉಡುಗೊರೆಗಳು ಮತ್ತು ಪ್ರೋತ್ಸಾಹಕ ಬಹುಮಾನಕ್ಕೆ ಬಳಸಲಾಗಿದೆ ಮತ್ತು ಕಂಪನಿಯು 2014 ಮತ್ತು 2017 ರ ನಡುವೆ ಸುಮಾರು 400 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಕ್ಲೈಮ್ ಮಾಡಿದೆ ಎಂದು ಇಡಿ ಆ ಸಮಯದಲ್ಲಿ ತನ್ನ ವರದಿಯಲ್ಲಿ ಹೇಳಿತ್ತು. ಇದಲ್ಲದೆ ಇ.ಡಿ ಮಾರ್ಟಿನ್ ಅವರ ಅಳಿಯ ಆಧವ್ ಅರ್ಜುನ್ ಮತ್ತು ಅವರ ಆಸ್ತಿಯ ಮೇಲೆ ಈ ವರ್ಷದ ಮಾರ್ಚ್‌ನಲ್ಲಿಯೇ ಆಸ್ತಿ ವಿವರಗಳನ್ನು ಹುಡುಕುವ ಕೆಲಸ ಸಹ ಮಾಡಿತ್ತು . ತಮಿಳುನಾಡಿನ ಮರಳುಗಾರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆಗೆ ಸಂಬಂಧ ಪಟ್ಟಂತೆ ತನಿಖೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಈಡಿಯು ತನ್ನ ವರದಿಯಲ್ಲಿ ತಿಳಿಸಿದೆ.

ಈ ಸುದ್ದಿ ಓದಿದ್ದೀರಾ?:200ಕ್ಕೆ ತಲುಪಿದ ಟೊಮೆಟೊ ದರ,-ಇತರ ತರಕಾರಿಗಳು ದುಬಾರಿ!

www.goldfactorynews.com

Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

Digiqole Ad

ಈ ಸುದ್ದಿಗಳನ್ನೂ ಓದಿ