• 27 ಜುಲೈ 2024

ಕೂಜಮಲೈ ರಬ್ಬ‌ರ್ ಎಸ್ಟೇಟ್ ಪ್ರದೇಶದಲ್ಲಿ ಕೂಂಬಿಂಗ್ ಆರಂಭ.

 ಕೂಜಮಲೈ ರಬ್ಬ‌ರ್ ಎಸ್ಟೇಟ್ ಪ್ರದೇಶದಲ್ಲಿ ಕೂಂಬಿಂಗ್ ಆರಂಭ.
Digiqole Ad

ಕೂಜಮಲೈ ರಬ್ಬ‌ರ್ ಎಸ್ಟೇಟ್ ಪ್ರದೇಶದಲ್ಲಿ ಕೂಂಬಿಂಗ್ ಆರಂಭ.

ಮಂಗಳೂರು: ಸುಳ್ಯದ ಕೂಜಮಲೈ ಮತ್ತು ಪಕ್ಕದ ಕೊದಡು ಗಡಿ ಪ್ರದೇಶದಲ್ಲಿ ನಕ್ಸಲರು ಓಡಾಡಿದ ಮಾಹಿತಿ ಸಿಗುತ್ತಿದ್ದಂತೆಯೇ ನಕ್ಸಲ್ ನಿಗ್ರಹ ಪಡೆ ಕೂಂಬಿಂಗ್ ಕಾರ್ಯಾಚರಣೆ ಪ್ರಾರಂಭಿಸಿದೆ. ಮಾರ್ಚ್.18 ನಿನ್ನೆ ಹೆಬ್ರಿಯಿಂದ ಸುಳ್ಯ ತಲುಪಿರುವ ನಕ್ಸಲ್ ನಿಗ್ರಹ ಪಡೆ ಸಿಬ್ಬಂದಿ ಕಾಡಿನೊಳಗೆ ಹುಡುಕಾಟ ಶುರು ಮಾಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಈ ಸುದ್ದಿಯನ್ನು ಓದಿದ್ದೀರಾ.?ಚಂದ್ರನ 5ನೇ ಮತ್ತು ಅಂತಿಮ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದ ಚಂದ್ರಯಾನ-3

ಮಡಿಕೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಬ್ರಹ್ಮಣ್ಯ ಸಮೀಪದ ಕೂಜಮಲೈ ರಬ್ಬರ್ ಎಸ್ಟೇಟ್ ಬಳಿಯ ಅಂಗಡಿಯೊಂದರಲ್ಲಿ ಶನಿವಾರ ಸಂಜೆ 8 ಮಂದಿ ಶಂಕಿತ ನಕ್ಸಲರ ತಂಡ ಶಸ್ತ್ರಾಸ್ತ್ರಗಳೊಂದಿಗೆ ದಿನಸಿ ವಸ್ತುಗಳನ್ನು ಖರೀದಿಸಿದೆ ಎಂದು ಹೇಳಲಾಗಿದೆ. ಕೂಜಮಲೈ ರಬ್ಬರ್ ಎಸ್ಟೇಟ್ ಸುಳ್ಯ ತಾಲೂಕಿನ ಗುತ್ತಿಗಾರ್, ಕೊಲ್ಲಮೊಗ್ರು ಮತ್ತು ಕಲ್ಮಕಾರುಗಳಲ್ಲಿ ಹರಡಿಕೊಂಡಿದೆ. ಮಾರ್ಚ್.18 ಸೋಮವಾರ ಬೆಳಗ್ಗೆ ಕೂಂಬಿಂಗ್ ಕಾರ್ಯಾಚರಣೆ ಆರಂಭವಾಗಿದೆ ಎಂದು ಸುಬ್ರಹ್ಮಣ್ಯ ಠಾಣೆಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಂಪಾಜೆ ಬಳಿಯ ಪ್ರದೇಶಗಳಲ್ಲಿ ನಕ್ಸಲ್‌ ನಿಗ್ರಹ ಪಡೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ. ನಾವು ಅಂಗಡಿ ಮಾಲೀಕರನ್ನು ವಿಚಾರಿಸಿದೆವು. ಅವರು ಶಂಕಿತ ನಕ್ಸಲರೇ ಎಂಬುದು ಖಚಿತವಾಗಿಲ್ಲ.

ಈ ಸುದ್ದಿಯನ್ನು ಓದಿದ್ದೀರಾ.?ಭಾರತದ ಈ 8 ರಾಜ್ಯಗಳ ಹೆಸರಿನ ಹಿಂದಿನ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ!

ಅವರು(ಶಂಕಿತ ನಕ್ಸಲರು) ಹಿಂದಿಯಲ್ಲಿ ಸಂಭಾಷಣೆ ನಡೆಸುತ್ತಿದ್ದರು ಎಂದು ಅಂಗಡಿಯವರು ಹೇಳಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಮಾ. 16ರಂದು ಕೊಡಗು ಜಿಲ್ಲೆಯ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಜಮಲೈ ಎಸ್ಟೇಟ್ ಪ್ರದೇಶಕ್ಕೆ ನಕ್ಸಲ್ ತಂಡವೊಂದು ಭೇಟಿ ನೀಡಿ ಕೂಜಮಲೈ ಎಸ್ಟೇಟ್ ಒಳಗಡೆ ಇರುವ ರಾಮಲಿಂಗ ಎನ್ನುವವರ ಅಂಗಡಿಯಿಂದ ಅಕ್ಕಿ ಬೆಲ್ಲ, ರವೆ, ಈರುಳ್ಳಿ ಹಾಗೂ ತಿಂಡಿ ತಿನಿಸುಗಳು ಸೇರಿದಂತೆ 3245 ರೂಪಾಯಿಗಳ ಆಹಾರ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ನಕ್ಸಲರಲ್ಲಿ ಉಡುಪಿ ಜಿಲ್ಲೆಯ ವಿಕ್ರಂ ಗೌಡ, ಚಿಕ್ಕಮಗಳೂರು ಜಿಲ್ಲೆಯ ಮುಂಡಗರು ಲತಾ, ತಮಿಳುನಾಡಿನ ಸಂತೋಷ್, ಕೇರಳದ ಜಿಷಾ ಎಂಬುದಾಗಿ ಎಸ್ಟೇಟ್ ಕೆಲಸಗಾರರು ಗುರುತಿದ್ದಾರೆ. ನಕ್ಸಲರು ತಮ್ಮನ್ನು ಅರಣ್ಯ ಇಲಾಖೆಯವರು ಎಂದು ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ 8 ಎಎನ್‌ಎಫ್ ತಂಡಗಳು ಶ್ವಾನದಳ ಹಾಗೂ ಡೋನ್ ಮೂಲಕ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಗಡಿ ಪ್ರದೇಶಗಳಲ್ಲಿ ಹಾಗೂ ಆಯಕಟ್ಟಿನ ಪ್ರದೇಶಗಳಲ್ಲಿ ಕಟ್ಟೆಚರ ವಹಿಸಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.

GOLD FACTORY NEWS

Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

Digiqole Ad

ಈ ಸುದ್ದಿಗಳನ್ನೂ ಓದಿ