• 27 ಜುಲೈ 2024

ಅರುಣಾಚಲ ಪ್ರದೇಶ, ಮಹಾರಾಷ್ಟ್ರದಲ್ಲಿ 2 ಬಾರಿ ಅಲುಗಾಡಿದ ಭೂಮಿ.!

 ಅರುಣಾಚಲ ಪ್ರದೇಶ, ಮಹಾರಾಷ್ಟ್ರದಲ್ಲಿ 2 ಬಾರಿ ಅಲುಗಾಡಿದ ಭೂಮಿ.!
Digiqole Ad

ಅರುಣಾಚಲ ಪ್ರದೇಶ, ಮಹಾರಾಷ್ಟ್ರದಲ್ಲಿ 2 ಬಾರಿ ಅಲುಗಾಡಿದ ಭೂಮಿ.!

ಮಾ.21 ಅರುಣಾಚಲ ಪ್ರದೇಶದಲ್ಲಿ ಗುರುವಾರ ಬೆಳಗಿನ ಜಾವ ಎರಡು ಗಂಟೆಗಳ ಅಂತರದಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ. ಬೆಳಗಿನ ಜಾವ ಸುಮಾರು 1.49ರ ಹೊತ್ತಿಗೆ ಪಶ್ಚಿಮ ಕಮೆಂಗ್ ಭಾಗದಲ್ಲಿ 3.7ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ್ದು ಭೂಕಂಪದ ಕೇಂದ್ರವು ಅಕ್ಷಾಂಶ 27.38 ಮತ್ತು ರೇಖಾಂಶ 92.77 ರಲ್ಲಿ 10 ಕಿಲೋಮೀಟರ್ ಆಳದಲ್ಲಿದೆ ಎಂದು ತಿಳಿಸಿದೆ.

ಈ ಸುದ್ದಿಯನ್ನು ಓದಿದ್ದೀರಾ.?ಅನ್ನದಾತನಿಗೆ ವರವಾದ ಕೃಷಿ ಭಾಗ್ಯ !

ಇದಾಗಿ ಎರಡೇ ಗಂಟೆಗಳ ಬಳಿಕ ಬೆಳಗಿನ ಜಾವ 3.40ರ ಹೊತ್ತಿಗೆ ಪೂರ್ವ ಕಮೆಂಗ್ ಪ್ರದೇಶದಲ್ಲಿ 3.4ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರವು ಅಕ್ಷಾಂಶ 27.46 ಮತ್ತು ರೇಖಾಂಶ 92.82ರಲ್ಲಿ 5 ಕಿಲೋಮೀಟರ್ ಆಳದಲ್ಲಿ ಪತ್ತೆಯಾಗಿದೆ ಎಂದು ಭೂಕಂಪನಶಾಸ್ತ್ರ ಕೇಂದ್ರವು ಎಕ್ಸ್‌ನಲ್ಲಿ ಮಾಹಿತಿಯನ್ನ ನೀಡಿದೆ. ಎರಡು ಬಾರಿ ಭೂಮಿ ಕಂಪಿಸಿದರೂ ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಹೇಳಲಾಗಿದೆ.

ಈ ಸುದ್ದಿಯನ್ನು ಓದಿದ್ದೀರಾ.?ಗೃಹ ಆರೋಗ್ಯ ಜಾರಿ: ಮನೆಮನೆಗೆ ಔಷಧ ಪೆಟ್ಟಿಗೆ

ಮಹಾರಾಷ್ಟ್ರದಲ್ಲೂ ಎರಡು ಬಾರಿ ಕಂಪನ.

ಮಹಾರಾಷ್ಟ್ರದ ಹಿಂಗೋಲಿ ಪ್ರದೇಶದಲ್ಲಿ 10 ನಿಮಿಷಗಳ ಅಂತರದಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ ಎಂದು ವರದಿಯಾಗಿದೆ. ಗುರುವಾರ ಬೆಳಿಗ್ಗೆ 6.08ರ ಹೊತ್ತಿಗೆ ಮೊದಲ ಬಾರಿ ಭೂಮಿ ಕಂಪಿಸಿದ್ದು ರಿಕ್ಟರ್ ಮಾಪಕದಲ್ಲಿ 4.5ರಷ್ಟು ತೀವ್ರತೆ ದಾಖಲಾಗಿದೆ. 10 ನಿಮಿಷಗಳ ಬಳಿಕ 6.19ರ ಹೊತ್ತಿಗೆ ಮತ್ತೆ ಭೂಮಿ ಕಂಪಿಸಿದ್ದು, 3.6ರಷ್ಟು ತೀವ್ರತೆ ದಾಖಲಾಗಿದ್ದು, ಯಾವುದೇ ಪ್ರಾಣ ಹಾನಿ,ನಾಶ ನಷ್ಟ ಸಂಭವಿಸಿಲ್ಲ ಎಂದು ವರದಿಯಾಗಿದೆ.

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ