ವಿಕಸಿತ ಭಾರತ ಸಂದೇಶ ನಿಲ್ಲಿಸಲು ಚುನಾವಣಾ ಆಯೋಗ ಸೂಚನೆ
ವಿಕಸಿತ ಭಾರತ ಸಂದೇಶ ನಿಲ್ಲಿಸಲು ಚುನಾವಣಾ ಆಯೋಗ ಸೂಚನೆ
ವಾಟ್ಸಾಪ್ನಲ್ಲಿ ವಿಕಸಿತ ಭಾರತ ಅಭಿಯಾನ ನಿಲ್ಲಿಸಲು ಸರ್ಕಾರಕ್ಕೆ ಕೇಂದ್ರ ಚುನಾವಣಾ ಆಯೋಗ ಸೂಚನೆ ನೀಡಿದೆ. ದೇಶಾದ್ಯಂತ ಜನರಿಗೆ ವಾಟ್ಸಾಪ್ನಲ್ಲಿ ವಿಕಸಿತ ಭಾರತಕ್ಕೆ ಸಂಬಂಧಿಸಿದ ಸಂದೇಶ ರವಾನೆಯಾಗುತ್ತಿದೆ. ಈ ಸಂದೇಶ ಮೋದಿ ಸರ್ಕಾರವನ್ನು ಉತ್ತೇಜಿಸುತ್ತಿದೆ. ಇದೀಗ ಕೇಂದ್ರ ಚುನಾವಣಾ ಆಯೋಗವು ತಕ್ಷಣವೇ ಜಾರಿಗೆ ಬರುವಂತೆ ಈ ಸಂದೇಶಗಳನ್ನು ಕಳುಹಿಸುವುದನ್ನು ನಿಲ್ಲಿಸುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವನ್ನು ಕೇಳಿದೆ. ನೀತಿ ಸಂಹಿತೆ ಜಾರಿಯಲ್ಲಿದ್ದರೂ ದೇಶದ ನಾಗರಿಕರ ಮೊಬೈಲ್ ಫೋನ್ಗಳಿಗೆ ಇಂತಹ ಸಂದೇಶಗಳು ರವಾನೆಯಾಗುತ್ತಿರುವುದು ತಿಳಿದು ಬಂದಿದೆ ಎಂದು ಚುನಾವಣಾ ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ.