• 26 ಜುಲೈ 2024

ಕೇಜ್ರಿವಾಲ್ ಅವರ ಕೃತ್ಯವೇ ಅವರಿಗೆ ಮುಳುವಾಗಿದೆ: ಅಣ್ಣಾ ಹಜಾರೆ.

 ಕೇಜ್ರಿವಾಲ್ ಅವರ ಕೃತ್ಯವೇ ಅವರಿಗೆ ಮುಳುವಾಗಿದೆ: ಅಣ್ಣಾ ಹಜಾರೆ.
Digiqole Ad

ಕೇಜ್ರಿವಾಲ್ ಅವರ ಕೃತ್ಯವೇ ಅವರಿಗೆ ಮುಳುವಾಗಿದೆ: ಅಣ್ಣಾ ಹಜಾರೆ.

ಮುಂಬೈ: ಹಲವು ವರ್ಷಗಳ ಹಿಂದೆ ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕ ಎಲ್ಲರ ಗಮನ ಸೆಳೆದಿದ್ದ ಸಾಮಾಜಿಕ ಹೋರಾಟಗಾರ ಅಣ್ಣಾಹಜಾರೆ ಅವರು ಅಬಕಾರಿ ನೀತಿ ರೂಪಿಸದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್‌ಗೆ ಎಚ್ಚರಿಸಿದ್ದೆ ಎಂದು ಬಂಧನವಾದ ಹಿನ್ನೆಲೆಯಲ್ಲಿ ಹೇಳಿದ್ದಾರೆ. 2010ರ ಲೋಕಪಾಲ್ ಚಳವಳಿಯಲ್ಲಿ ಮುಂಚೂಣಿ ನಾಯಕರಾಗಿದ್ದ ಹಜಾರೆ ಜೊತೆ ಅರವಿಂದ ಕೇಜ್ರವಾಲ್ ಸಹ ಗುರುತಿಸಿಕೊಂಡಿದ್ದರು.

ಈ ಸುದ್ದಿಯನ್ನು ಓದಿದ್ದೀರಾ.?ದೇವರ ಹುಂಡಿಯ ಹಣ ಕಳ್ಳತನ ಮಾಡುವ ಮುನ್ನ ಮಾಡಿದ್ದಾದರೂ ಏನು…??

ಇದೀಗ, ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೇಜ್ರವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದ್ದು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಣ್ಣಾ ಹಜಾರೆ, ಅವರ ಕೃತ್ಯವೇ ಅವರಿಗೆ ಮುಳುವಾಗಿದೆ ಎಂದಿದ್ದಾರೆ. ಅಬಕಾರಿ ನೀತಿ ರೂಪಿಸುವುದು ನಮ್ಮ ಕೆಲಸವಲ್ಲ ಎಂದು ಅವರಿಗೆ ಮೊದಲೇ ಹೇಳಿದ್ದೆ. ಮದ್ಯ ಕೆಟ್ಟದ್ದು ಎಂದು ಚಿಕ್ಕ ಮಕ್ಕಳಿಗೂ ಗೊತ್ತು. ಈ ಅಬಕಾರಿ ನೀತಿ ವಿವಾದದಿಂದ ಹಿಂದೆ ಸರಿಯುವಂತೆ ಸಲಹೆ ನೀಡಿದ್ದೆ. ಆದರೂ ಅವರು ನೀತಿ ರೂಪಿಸಿಯೇ ಬಿಟ್ಟರು’ ಎಂದು ಮಹಾರಾಷ್ಟ್ರದ ತಮ್ಮ ಹಳ್ಳಿ ರಾಲೇಗಾಂವ್‌ ಸಿದ್ಧಿಯಲ್ಲಿ ಅಣ್ಣಾ ಹಜಾರೆ ಹೇಳಿದ್ದಾರೆ. ಅಬಕಾರಿ ನೀತಿಯಿಂದ ಹೆಚ್ಚು ಆದಾಯ ಬರಲಿದೆ ಎಂದು ಕೇಜ್ರವಾಲ್‌ ನಂಬಿದ್ದರು.

ಈ ಸುದ್ದಿಯನ್ನು ಓದಿದ್ದೀರಾ.?ಆಫ್ರಿಕನ್ ಯೂನಿಯನ್‌ಗೆ ಜಿ20 ಕಾಯಂ ಸದಸ್ಯತ್ವ: ಮೋದಿ ಘೋಷಣೆ

ಅದಕ್ಕಾಗಿಯೇ ನೀತಿ ರೂಪಿಸಿದ್ದರು ಎಂದು ಹೇಳಿದ್ದಾರೆ. ನನ್ನ ಜೊತೆ ಮದ್ಯದ ವಿರುದ್ಧ ಧ್ವನಿ ಎತ್ತಿದ್ದ ವ್ಯಕ್ತಿಯೇ ಅಬಕಾರಿ ನೀತಿ ಮಾಡುತ್ತಿದ್ದಾರೆ ಎಂದು ಹೇಳುವಾಗ ಬಹಳ ನೋವಾಗಿದೆ. ಅವರ ಕೃತ್ಯವೇ ಈಗ ಅವರಿಗೆ ಮುಳುವಾಗಿದೆ. ಅವರು ಏನೂ ತಪ್ಪು ಮಾಡದಿದ್ದರೆ ಬಂಧನದ ಅಗತ್ಯ ಬರುತ್ತಿರಲಿಲ್ಲ.ಈಗ ಕಾನೂನು ಮತ್ತು ಸರ್ಕಾರ ಏನು ಮಾಡಬೇಕೊ ಅದನ್ನು ಮಾಡುತ್ತವೆ’ ಎಂದು ಹೇಳಿದ್ದಾರೆ. ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಗುರುವಾರ ರಾತ್ರಿ ಬಂಧನಕ್ಕೊಳಗಾಗಿದ್ದಾರೆ.

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ