• 27 ಜುಲೈ 2024

ಪೀರಿಯೆಡ್ಸ್ ಆದರೂ ಬಿಡ್ತಿಲ್ಲ ಸಾರ್: ಕೆ.ಎಸ್ಆರ್ ಟಿ.ಸಿ ನಿರ್ವಾಹಕಿ ಕಣ್ಣೀರು!

 ಪೀರಿಯೆಡ್ಸ್ ಆದರೂ ಬಿಡ್ತಿಲ್ಲ ಸಾರ್: ಕೆ.ಎಸ್ಆರ್ ಟಿ.ಸಿ ನಿರ್ವಾಹಕಿ ಕಣ್ಣೀರು!
Digiqole Ad

ಪೀರಿಯೆಡ್ಸ್ ಆದರೂ ಬಿಡ್ತಿಲ್ಲ ಸಾರ್: ಕೆ.ಎಸ್ಆರ್ ಟಿ.ಸಿ ನಿರ್ವಾಹಕಿ ಕಣ್ಣೀರು!

ಹಗಲಿರುಳು ಶ್ರಮಿಸುವ ಮಹಿಳಾ ಕಂಡೆಕ್ಟರ್‌ಗೆ ಕಿರುಕುಳ ನೀಡುತ್ತಿದ್ದ ಆರೋಪವೊಂದು ಎಲ್ಲೆಡೆ ಕೇಳಿ ಬಂದಿದೆ. ಪೇರಿಯಡ್ಸ್ ಅಂದರೂ ಡ್ಯೂಟಿ ಮಾಡಿ ಅಂತಾರೆ ಎಂದು ಕೆಎಸ್‌ಆರ್‌ಟಿಸಿಯ ನಿರ್ವಾಹಕಿ ಕಣ್ಣೀರು ಹಾಕಿದ್ದಾರೆ. ಬೆಂಗಳೂರಿನ ದೀಪಾಂಜಲಿ ನಗರದ ಕೆಎಸ್‌ಆರ್‌ಟಿಸಿ ಡಿಪೋ 5ರ ಕಂಡೆಕ್ಟರ್ ಮಂಜಮ್ಮ ಎಂಬುವವರು ವಿಡಿಯೊ ಮಾಡಿ ಗಳಗಳನೆ ಅತ್ತಿದ್ದಾರೆ.ಡಿಪೋ ಮ್ಯಾನೇಜರ್‌ ಎಂ ಕೃಷ್ಣಪ್ಪ ಎಂಬುವವರು ಕಿರುಕುಳ ನೀಡುತ್ತಿದ್ದಾರೆ ಎಂದು ಮಂಜಮ್ಮ ಕಣ್ಣೀರು ಹಾಕಿ ಆರೋಪಿಸಿದ್ದಾರೆ. ಕೃಷ್ಣಪ್ಪನ ಟಾರ್ಚರ್ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಕ್ಕೆ ಕೆಲಸಕ್ಕೆ ಬೇಗ ಬಂದರೂ ಡ್ಯೂಟಿ ನೀಡದೆ ಸತಾಯಿಸುತ್ತಿದ್ದಾರೆ. ಎಷ್ಟೇ ತಡವಾದರೂ ಕೆಲಸ ಮುಗಿಸಿ ಮನೆಗೆ ಹೋಗುವಂತೆ ಕಿರಿಕಿರಿ ಮಾಡುತ್ತಿದ್ದಾರೆ ಎಂದಿದ್ದಾರೆ. ಅಧಿಕಾರಿಗಳ ಕಿರುಕುಳಕ್ಕೆ ರೋಸಿ ಹೋಗಿ ಮಂಜಮ್ಮ ಸೇರಿ 44 ಸಿಬ್ಬಂದಿ ಸಿಎಂ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರಿಗೆ ಪತ್ರವನ್ನು ಬರೆದಿದ್ದಾರೆ.

ದೂರಿನಲ್ಲಿ ಏನಿದೆ?

-ಕೆಲಸಕ್ಕೆ ಹಾಜರಾಗಿದ್ದರೂ, ಬೆಳಗ್ಗೆಯಿಂದ ಸಂಜೆವರೆಗೂ ಡ್ಯೂಟಿ ನೀಡದೆ ಸುಮ್ಮನೆ ರಜೆ ಎಂದು ಬರೆಯುತ್ತಿದ್ದಾರೆ.

-ತಡವಾಗಿ ಗಾಡಿ ಕೊಟ್ಟು ಪೂರ್ತಿ ಕಿಲೋ ಮೀಟರ್ ಮಾಡಬೇಕು ಎಂದು ಕಿರುಕುಳ ನೀಡುತ್ತಿದ್ದಾರೆ.

-ಡಿಪೋ ಮ್ಯಾನೇಜರ್ ಕೇಳಿದರೆ ಬಾಯಿಗೆ ಬಂದ ಹಾಗೆ ಬೈದು ನಿಂದಿಸುತ್ತಾರೆ.

-ಘಟಕದಲ್ಲಿ ಸುಮ್ಮನೆ ಮೂರ್ನಾಲ್ಕು ದಿನ ಕೂರಿಸಿಕೊಂಡು ರಜೆ ಅರ್ಜಿ ಬರೆಸಿಕೊಳ್ಳುತ್ತಿದ್ದಾರೆ

ಎಂದು ಹಲವು ವಿಶಯಗಳನ್ನು ಪತ್ರದಲ್ಲಿ ಬರೆದು, 44 ಜನರ ಸಹಿ ಹಾಕಿಸಿ ಸಾರಿಗೆ ಸಚಿವರಿಗೆ ಪತ್ರ ಬರೆದಿದ್ದಾರೆ. ಜತೆಗೆ ಸಿಎಂ ಸಿದ್ದರಾಮಯ್ಯರ ಜನಸ್ಪಂದನ ಕಾರ್ಯಕ್ರಮದಲ್ಲೂ ದೂರು ನೀಡಿದ್ದಾರೆ ಎನ್ನಲಾಗಿದೆ.ಈ ಮಹಿಳೆಯ ಕೂಗಿಗೆ ನ್ಯಾಯ ಸಿಗುವವರೆಗೂ ,ಈ ಸುದ್ದಿಯನ್ನು ಹಿರಿಯ ಅಧಿಕಾರಿಗಳಿಗೆ ತಲುಪುವವರೆಗೂ ಶೇರ್ ಮಾಡೋಣ..

ಈ ಸುದ್ದಿ ಓದಿದ್ದೀರಾ : ಬಸ್ನಲ್ಲಿ ಚಿನ್ನದ ಸರ ಮಾಯ…ಪ್ರಯಾಣಿಕರ ಸಮೇತ ಬಸ್ ಪೋಲಿಸ್ ಸ್ಟೇಷನ್ಗೆ

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ