• 27 ಜುಲೈ 2024

ಕಡಬ : ಸತತ 7ಗಂಟೆಗಳ ಕಾರ್ಯಾಚರಣೆಯಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಸೆರೆ.

 ಕಡಬ : ಸತತ 7ಗಂಟೆಗಳ ಕಾರ್ಯಾಚರಣೆಯಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಸೆರೆ.
Digiqole Ad

ಕಡಬ : ಸತತ 7ಗಂಟೆಗಳ ಕಾರ್ಯಾಚರಣೆಯಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಸೆರೆ.

ಕಡಬ: ಇಲ್ಲಿನ ಕೋಡಿಂಬಾಳ ಗ್ರಾಮದಲ್ಲಿ ಬರೋಬ್ಬರಿ 13 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದನ್ನು ಸೆರೆ ಹಿಡಿಯಲಾಗಿದೆ. ಈ ದೈತ್ಯ ಕಾಳಿಂಗ ಸರ್ಪವನ್ನು ಗ್ರಾಮಸ್ಥರ ನೆರವಿನಿಂದ ಉರಗ ರಕ್ಷಕ ಗೋಪಾಲ ಅವರು ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ. ಮಾ.23 ರಂದು ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಕಾರ್ಮಿಕರೊಬ್ಬರಿಗೆ ಹಾವೊಂದು ಬುಸುಗುಟ್ಟುವ ಸದ್ದು ಕೇಳಿದೆ.

ಈ ಸುದ್ದಿಯನ್ನು ಓದಿದ್ದೀರಾ.?ವನ್ಯಜೀವಿ ಕಾಯ್ದೆ: ನವಿಲು ಗರಿಯನ್ನೂ ಇಟ್ಟುಕೊಳ್ಳುವಂತಿಲ್ಲ

ಈ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳದಲ್ಲಿ ಸ್ಥಳೀಯರು ಕುತೂಹಲದಿಂದ ಸೇರಿದ್ದಾರೆ. ಹೆಬ್ಬಾವು ಇರಬಹುದೆಂದು ಹುಡುಕಾ ನಡೆಸಿದಾಗ ಬೃಹತ್ ಗಾತ್ರದ ಕಾಳಿಂಗಸರ್ಪ ಎದುರಾಗಿದೆ. ಕಾಳಿಂಗ ಸರ್ಪದ ಗಾತ್ರ ನೋಡಿ ಒಂದು ಕ್ಷಣ ಬೆಚ್ಚಿಬಿದ್ದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಸುಬ್ರಹ್ಮಣ್ಯದ ಉರಗ ರಕ್ಷಕ ಗೋಪಾಲ ಅವರನ್ನು ಕರೆಸಿಕೊಂಡಿದ್ದಾರೆ. ಅವರು ಸತತ 7 ಗಂಟೆಗಳ ಕಾಲ ಶ್ರಮವಹಿಸಿ ಈ ದೈತ್ಯ ಕಾಳಿಂಗವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆ ವೇಳೆ ಈ ಕಾಳಿಂಗ ಸರ್ಪ ಕೋಪದಿಂದ ಜನರ ಮೇಲೆಯೇ ದಾಳಿಗೆ ಯತ್ನಿಸಿರುವ ಘಟನೆಯೂ ನಡೆದಿತ್ತು.

ಈ ಸುದ್ದಿಯನ್ನು ಓದಿದ್ದೀರಾ.?ಕರಾವಳಿಯಲ್ಲಿ ಏರುತ್ತಿರುವ ಬಿಸಿಲಿನ ಕಾವು

ಸೆರೆ ಸಿಕ್ಕ ಈ ಕಾಳಿಂಗ ಸರ್ಪ ಬರೋಬ್ಬರಿ 13 ಅಡಿಗಳಷ್ಟು ಉದ್ದವಿದ್ದು ಅದನ್ನು ನೋಡಲೆಂದೇ ಸ್ಥಳದಲ್ಲಿ ಜನ ಸೇರಿದ್ದರು.ಅದು ಆಹಾರ ಹುಡುಕಾಟದ ಸಂದರ್ಭ ಪ್ರಾಣಿಯೊಂದನ್ನು ಬೆನ್ನಟ್ಟಿ ಈ ಕಾಳಿಂಗ ಸರ್ಪ ಬಂದಿರಬಹುದು ಎಂದು  ಸ್ಥಳೀಯರು ತಿಳಿಸಿದ್ದಾರೆ. ಸದ್ಯ ಬೃಹತ್ ಗಾತ್ರದ ಹಾವನ್ನು ಸುರಕ್ಷಿತವಾಗಿ ಸುಬ್ರಹ್ಮಣ್ಯ ಸಮೀಪದ ದಟ್ಟ ಕಾಡಿನಲ್ಲಿ ಬಿಡಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ