• 27 ಜುಲೈ 2024

ಸದ್ಧಿಲ್ಲದ ಕಾಯಕ ಯೋಗಿ ಶ್ರೀ ಬ್ಯಾಡನೂರು ವೀರಭದ್ರಪ್ಪ ಶಿವಶರಣ.ಎಸ್

 ಸದ್ಧಿಲ್ಲದ ಕಾಯಕ ಯೋಗಿ ಶ್ರೀ ಬ್ಯಾಡನೂರು ವೀರಭದ್ರಪ್ಪ ಶಿವಶರಣ.ಎಸ್
Digiqole Ad

ಸದ್ಧಿಲ್ಲದ ಕಾಯಕ ಯೋಗಿ ಶ್ರೀ ಬ್ಯಾಡನೂರು ವೀರಭದ್ರಪ್ಪ ಶಿವಶರಣ.ಎಸ್

ಶ್ರೀ ಯುತ ಬ್ಯಾಡನೂರು ವೀರಭದ್ರಪ್ಪ ಶಿವಶರಣ ರವರು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಬ್ಯಾಡನೂರು ಗ್ರಾಮದ ಕೃಷಿಕ ದಂಪತಿಗಳಾದ ಶ್ರೀ ಸದಾಶಿವಪ್ಪ ಮತ್ತು ಮಲ್ಲಮ್ಮ (ಗಂಗಮ್ಮ) ದಂಪತಿಯರ ಸುಪುತ್ರರು.

ಬಡತನದಲ್ಲೇ ಹುಟ್ಟಿ ಬೆಳೆದ ಇವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಮಾಡಿ, ಪಿ,ಯು, ಸಿ,ಯನ್ನು ಪಕ್ಕದ ಗ್ರಾಮವಾದ ಗುಂಡಾರ್ಲಹಳ್ಳಿ ಯಲ್ಲಿ ಮುಗಿಸಿರುತ್ತಾರೆ. ನಂತರ ಕೈಗಾರಿಕಾ ತರಬೇತಿ ಶಿಕ್ಷಣವನ್ನು ಪಾವಗಡ ಪಟ್ಟಣದಲ್ಲಿ ಪೂರೈಸಿದ್ದಾರೆ.ನೇರ ನಡೆ, ಖಡಕ್ ಮಾತು ಇವರ ಹುಟ್ಟು ಗುಣ,ಇವರ ನೇರ ನುಡಿಯಿಂದ ಎಷ್ಟೋ ಜನ ಅಪಹಾಸ್ಯ ಮಾಡಿರುವುದುಂಟು. ತಪ್ಪು ಮಾಡದೇ ಇದ್ದಾಗ ಕ್ಷಮೆ ಕೇಳುವ ಅಗತ್ಯವಿಲ್ಲ ಎಂಬುದು ಇವರ ಸಿದ್ಧಾಂತ. ಇವರು ಮನುಷ್ಯನ ವ್ಯಕ್ತಿತ್ವಕ್ಕೆ ತಲೆ ಬಾಗಿ ನಡೆಯುತ್ತಾರೆಯೇ ಹೊರತು ಆತನ ಸಾವಿರ ಕೋಟಿಯ ದರ್ಪಕ್ಕಲ್ಲ, ಯಾವುದೇ ದೌರ್ಜನ್ಯಕ್ಕೆ ಹೆದರುವ ವ್ಯಕ್ತಿಯಲ್ಲ, ಮೇಲೆ ಒರಟಾಗಿ ಕಂಡರೂ ಸಹ ಕಷ್ಟಕ್ಕೆ ಮಿಡಿಯುವ ಹೃದಯವಂತರು.

ಈ ಸುದ್ದಿ ಓದಿದ್ದೀರಾ?:ಮಂಗಳೂರು; ಪಿಲಿಕುಳ ಜೈವಿಕ ಉದ್ಯಾನವನದಿಂದ ತಪ್ಪಿಸಿಕೊಂಡ ಬೃಹತ್ ಕಾಳಿಂಗ ಸರ್ಪ

ಮನೆಯಲ್ಲಿ ಬಡತನದ ಕಾರಣದಿಂದ ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಬಂದು ವಿದ್ಯುತ್ ಇಲಾಖೆಯಲ್ಲಿ ಎರಡು ವರ್ಷ, ಹಾಗೂ ಎನ್,ಎ, ಎಲ್, ಸಂಸ್ಥೆಯಲ್ಲಿ ಎರಡು ವರ್ಷ ತಾತ್ಕಾಲಿಕ ನೌಕರನಾಗಿ ಸೇವೆ ಸಲ್ಲಿಸಿದ್ದು ಅಲ್ಲಿಯೂ ನೆಲೆ ಕಾಣದೆ. ಪ್ರಸ್ತುತ ಅಂತಾರಾಷ್ಟ್ರೀಯ ಮಟ್ಟದ ಬಾರ್ ಕ್ಲೇಸ್ ಬ್ಯಾಂಕ್ ನಲ್ಲಿ ತಾತ್ಕಾಲಿಕ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದಾರೆ.(ಐ, ಎಸ್, ಎಸ್, ಫೆಸಿಲಿಟಿ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ)

ಇವರು ಕಳೆದ ಏಳೆಂಟು ವರ್ಷಗಳಿಂದ ಸಾಮಾಜಿಕ ಸೇವೆಗಳಲ್ಲಿ ತೊಡಗಿಕೊಂಡಿದ್ಧು. ಕೋವಿಡ್ ಸಂದರ್ಭದಲ್ಲಿ ತಮ್ಮ ಸ್ವಂತ ಹಣದಿಂದ ಅನ್ನದಾನ, ಮಾಸ್ಕ್, ಸ್ಯಾನಿಟೈಜರ್ ಗಳನ್ನು ಮೂರು ಸಾವಿರಕ್ಕೂ ಹೆಚ್ಚು ಸಾರ್ವಜನಿಕರಿಗೆ ವಿತರಿಸಿದ್ದಾರೆ. ಕಿಡ್ನಿ ಸಮಸ್ಯೆ ಇರುವ ಬಡರೋಗಿಗಳಿಗೆ ತನ್ನ ಕೈಲಾದಷ್ಟು ಹಣ ಸಹಾಯ ಮಾಡಿದ್ದಲ್ಲದೆ ಸುಮಾರು ನೂರಕ್ಕೂ ಹೆಚ್ಚು ಜನರಿಗೆ ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇರುವವರಿಗೆ ದಾನಿಗಳ ನೆರವಿನಿಂದ ಒದಗಿಸಿಕೊಟ್ಟಿದ್ಧಾರೆ.ಅಂದ ಮಾತ್ರಕ್ಕೆ ಇವರಿಗೆ ಬೇರೆ ಯಾವುದೇ ಆದಾಯದ ಮೂಲಗಳಿಲ್ಲ. ಇವರು ತೆಗೆದುಕೊಳ್ಳುವ ಅಲ್ಪ ವೇತನದಲ್ಲಿಯೇ ಬಾಡಿಗೆ ಮನೆಯಲ್ಲಿ ಆಡಂಬರವಿಲ್ಲದ ಸರಳ ಜೀವನ ನಡೆಸುತ್ತಾ ತಮ್ಮ ಕೈಲಾದಷ್ಟು ಅಳಿಲು ಸೇವೆ ಮಾಡುತ್ತಿದ್ದಾರೆ .ಇವರು ಇದುವರೆಗೂ ಯಾವುದೇ ಹಣ ಉಳಿತಾಯದ ಯೋಚನೆ ಮಾಡಿಲ್ಲದಿರುವುದಕ್ಕೆ ಇವರ ಸಮಾಜಮುಖಿ ಕಾರ್ಯಗಳೇ ಇದಕ್ಕೆ ಉದಾಹರಣೆ ಎನ್ನಬಹುದು.ಹಾಗೂ ಮಗನ ಹುಟ್ಟುಹಬ್ಬವನ್ನು ಅನಾಥಾಶ್ರಮದಲ್ಲಿ ಅನ್ನದಾನ ಮಾಡುವ ಮೂಲಕ ಆಚರಿಸುವುದು ಇವರ ವಿಶೇಷ ಕಾಳಜಿಗಳಲ್ಲಿ ಒಂದು.

ವೈಯಕ್ತಿಕ ಹಾಗೂ ಹಲವು ಸಾಹಿತ್ಯ, ಸಾಂಸ್ಕೃತಿಕ ಸಂಘಟನೆಗಳಲ್ಲಿ ಕ್ರಿಯಾಶೀಲ ರಾಗಿದ್ಧು ಎಲೆ ಮರೆಯ ಕಾಯಿಯಂತೆ ಯಾವುದೇ ಪ್ರಶಂಸೆಗಾಗಲಿ,ಒಣ ಪ್ರತಿಷ್ಟಿಗಾಗಲಿ, ಸನ್ಮಾನ, ಗೌರವಗಳಿಗಾಗಲಿ, ಪ್ರಶಸ್ತಿ ಗಾಗಲಿ ಆಸೆ ಪಡದೇ ತಮ್ಮಷ್ಟಕ್ಕೆ ತಾವು ಸಮಾಜಮುಖಿ ಕೆಲಸಗಳಿಗೆ ಅರ್ಪಿಸಿಕೊಂಡಿದಾರೆ, ಒಲಿದು ಬಂದ ಗೌರವಗಳನ್ನು ತಂದೆ ತಾಯಿಯವರ ಆಶೀರ್ವಾದವೆಂದು ಭಾವಿಸಿ ಸ್ವೀಕರಿಸಿದ್ದಾರೆ. ಸಾಹಿತ್ಯಾಸಕ್ತರಿಗೆ ಎರಡು ಸಾವಿರ ಪುಸ್ತಕಗಳನ್ನು ಉಚಿತವಾಗಿ ಧಾನ ಮಾಡಿದ್ದಾರೆ.

ಇವರು ಸಾಹಿತ್ಯ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ಧು,ಇವರ ಅನೇಕ ಲೇಖನಗಳು, ಕವನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.ಇವರು ವಚನ, ರುಬಾಯಿ, ಹಾಯ್ಕು, ಟಂಕಾ, ಹನಿಗವನ ಹಾಗೂ ಚುಟುಕು ಹೀಗೆ ನಾನಾ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಬಲ್ಲರು.ಇತ್ತೀಚೆಗೆ *ಬಾಳೊಂದು ವಲಸೆ* ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ.

ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿದ ಕೆಲವು ಸಂಘ ಸಂಸ್ಥೆಗಳು ಇವರಿಗೆ ಕರ್ನಾಟಕ ಕಾಯಕ ಯೋಗಿ ಬಸವಶ್ರೀ, ಡಾಕ್ಟರ್ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಸದ್ಭಾವನಾ ಪ್ರಶಸ್ತಿ,ಕನ್ನಡ ಕಟ್ಟಾಳು ಪ್ರಶಸ್ತಿ, ಕರ್ನಾಟಕ ಸೇವಾ ರತ್ನ,ಆದರ್ಶ ಸಮಾಜ ಸೇವಾ ರತ್ನ ಪ್ರಶಸ್ತಿ,, ಕವಿ ವಿಭೂಷಣ, ಕವಿ ಕಣ್ಮಣಿ , ನಿಸರ್ಗ ಸಮಾಜ ಸೇವಾ ರತ್ನ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಿವೆ.

ಇವರ ಎರಡನೇ ಕೃತಿ *ಭಾವ ಸುಗ್ಗಿ* ಲೋಕಾರ್ಪಣೆಯು 17/03/2024 ರಿ ಭಾನುವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಕನ್ನಡ ಸಾಂಸ್ಕೃತಿಕ ರಂಗದ ದಶಮಾನೋತ್ಸವದ ಸಂಭ್ರಮ ಕಾರ್ಯಕ್ರಮದಲ್ಲಿ ಅತಿ ವಿಜೃಂಭಣೆಯಿಂದ ನಡೆಯಿತು.

ಇವರ ಮುಂದಿನ ಸಾಹಿತ್ಯ ಮತ್ತು ಸಾಮಾಜಿಕ ಕಾರ್ಯಗಳು ಯಶಸ್ಸಿನ ಹಾದಿ ಹಿಡಿಯಲಿ ಹಾಗೂ ಜನ ಮನ್ನಣೆ ಪಡೆಯಲಿ ಎಂದು ಹಾರೈಸೋಣ.

ಈ ಸುದ್ದಿ ಓದಿದ್ದೀರಾ?:ತುಮಕೂರಿನಲ್ಲಿ ಸುಟ್ಟು ಕರಕಲಾದ ಕಾರು ಪತ್ತೆ; ದಕ್ಷಿಣ ಕನ್ನಡಕ್ಕೆ ಸೇರಿರಬಹುದು ಎಂಬ ಬಿಗು ಅನುಮಾನ!

www.goldfactorynews.com

Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

Digiqole Ad

ಈ ಸುದ್ದಿಗಳನ್ನೂ ಓದಿ