• 15 ಜೂನ್ 2024

ತುಳುನಾಡಿನ ಮಣ್ಣಿನ ಧ್ವನಿಯಾಗಿ ಕಾರ್ಯ ನಿರ್ವಹಿಸುವೆ: ಕ್ಯಾ. ಬ್ರಿಜೇಶ್ ಚೌಟ

 ತುಳುನಾಡಿನ ಮಣ್ಣಿನ ಧ್ವನಿಯಾಗಿ ಕಾರ್ಯ ನಿರ್ವಹಿಸುವೆ: ಕ್ಯಾ. ಬ್ರಿಜೇಶ್ ಚೌಟ
Digiqole Ad

ತುಳುನಾಡಿನ ಮಣ್ಣಿನ ಧ್ವನಿಯಾಗಿ ಕಾರ್ಯ ನಿರ್ವಹಿಸುವೆ: ಕ್ಯಾ. ಬ್ರಿಜೇಶ್ ಚೌಟ

ಮಂಗಳೂರು: ಕಾರ್ಯಕರ್ತರ ಪ್ರೀತಿ ವಿಶ್ವಾಸದಿಂದ ಈ ಬಾರಿ ಲೋಕಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಸಿಕ್ಕಿದೆ. ಮುಂದಿನ ದಿನದಲ್ಲಿ ತುಳುನಾಡಿನ ಮಣ್ಣಿನ ಧ್ವನಿಯಾಗಿ ಕಾರ್ಯ ನಿರ್ವಹಿಸುವೆ. ಜನಸಾಮಾನ್ಯರ ಸೇವೆಗೆ ಸದಾ ಬದ್ಧನಾಗಿದ್ದೇನೆ ಎಂದು ಮಂಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.

ಇಂದು ಲೋಕಸಭಾ ಚುನಾವಣೆ ಪ್ರಯುಕ್ತ ಪ್ರವಾಸದ ಎಂಟನೇ ದಿನ ಮಂಗಳೂರು ನಗರ ಉತ್ತರ ಮಂಡಲದ ಪ್ರವಾಸದಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ನರೇಂದ್ರ ಮೋದಿಜಿಯವರ ಆಡಳಿತದಲ್ಲಿ ಮಹತ್ವದ ಯೋಜನೆಗಳು ಪ್ರಾಮಾಣಿಕ ಅನುಷ್ಠಾನದಿಂದ ಇಂದು ಯೋಜನೆಗಳು ಜನಸಾಮಾನ್ಯರನ್ನು ಸುಲಭದಲ್ಲಿ ತಲುಪುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಂಕಲ್ಪದ ರೀತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವೆ. ಮತದಾರರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸುವೆ, ದ.ಕ ಜಿಲ್ಲೆಯನ್ನು ಅಭಿವೃದ್ಧಿಶೀಲ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!