• 27 ಜುಲೈ 2024

ಅಬ್ಬಾ.. 40 ಕೋಟಿಗೆ ಸೇಲ್‌ ಆದ ಹಸು ಇದು!

 ಅಬ್ಬಾ.. 40 ಕೋಟಿಗೆ ಸೇಲ್‌ ಆದ ಹಸು ಇದು!
Digiqole Ad

ಅಬ್ಬಾ.. 40 ಕೋಟಿಗೆ ಸೇಲ್‌ ಆದ ಹಸು ಇದು!

ಬ್ರೆಜಿಲ್‌ನಲ್ಲಿ Viatina-19 FIV Mara ಎಂಬ ಹಸು ದಾಖಲೆಯ ಮೊತ್ತಕ್ಕೆ ಹರಾಜಾಗಿದೆ. ಜಗತ್ತಿನಲ್ಲಿ 40 ಕೋಟಿ ರೂಪಾಯಿಗೆ ಮಾರಾಟವಾದ ದುಬಾರಿ ಹಸು ಅನ್ನೋ ಖ್ಯಾತಿಗೆ ಇದು ಪಾತ್ರವಾಗಿದೆ. 40 ಕೋಟಿಗೆ ಹರಾಜಾಗಿರುವ ಈ ಹಸು ಭಾರತದ ನೆಲ್ಲೂರು ಮೂಲದ ತಳಿಗೆ ಸೇರಿದ್ದು. ನೆಲ್ಲೂರು ತಳಿಯ ಹಸುಗಳಿಗೆ ಬ್ರೆಜಿಲ್‌ನಲ್ಲಿ ಸಾಕಷ್ಟು ಬೇಡಿಕೆ ಇದೆ. ಜಾಗತಿಕ ಮಟ್ಟದಲ್ಲಿ ನಡೆದ ಜಾನುವಾರು ಹರಾಜಿನಲ್ಲಿ ಬ್ರೆಜಿಲ್‌ನ ಈ ಹಸು ಹೊಸ ದಾಖಲೆ ಬರೆದಿದೆ. ನೆಲ್ಲೂರು ಹಸುವಿನ ಮೊದಲ ಜೋಡಿ 1868ರಲ್ಲಿ ಬ್ರೆಜಿಲ್‌ಗೆ ಹಡಗಿನ ಮೂಲಕ ಕಳುಹಿಸಲಾಯಿತು. ಇದರ ನಂತರ 1878ರಲ್ಲಿ ಹ್ಯಾಂಬರ್ಗ್ ಮೃಗಾಲಯದಿಂದ ಇನ್ನೂ ಎರಡು ಹಸುಗಳನ್ನು ತರಲಾಯಿತು. 1960ರ ಅವಧಿಯಲ್ಲಿ ನೂರು ನೆಲ್ಲೂರು ಹಸುಗಳನ್ನು ಪರಿಚಯಿಸಲಾಯಿತು. ಬ್ರೆಜಿಲ್‌ನಲ್ಲಿರುವ ಶೇಕಡ 80 ರಷ್ಟು ಹಸುಗಳು ನೆಲ್ಲೂರು ಹಸುಗಳಾಗಿವೆ.

ಈ ತಳಿಯ ವಿಶೇಷತೆ ಏನು?

ಈ ತಳಿಯ ದೊಡ್ಡ ವಿಶೇಷತೆ ಎಂದರೆ ಬಿಸಿ ತಾಪಮಾನವನ್ನು ತಡೆದುಕೊಳ್ಳಬಲ್ಲದು. ಇದಕ್ಕೆ ಯಾವುದೇ ಪರಾವಲಂಬಿ ಸೋಂಕು ಇಲ್ಲ. ಈ ಕಾರಣಗಳಿಂದ ಜನರು ಸುಲಭವಾಗಿ ಈ ಹಸುವನ್ನು ಸಾಕಬಹುದು. Viatina-19 FIV ಮಾರಾ ಇಮೊವಿಸ್ ಈ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ.ಬ್ರೆಜಿಲ್‌ನಲ್ಲಿ ಪ್ರಖ್ಯಾತವಾಗಿರುವ ಈ ಹಸುವಿಗೆ ಅಂತರಾಷ್ಟ್ರೀಯ ಹಸುವಿನ ಮಾರುಕಟ್ಟೆಯಲ್ಲಿ ಬೇಡಿಕೆ ಹೊಂದಿದೆ

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ