• 30 ಮೇ 2024

ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು – ಪ್ರಾಚೀನ ಕನ್ನಡ ಶಾಸನಗಳ ಶೋಧನ ಅಧ್ಯಯನ ಮತ್ತು ಸಂರಕ್ಷಣಾ ಯೋಜನೆ

 ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು – ಪ್ರಾಚೀನ ಕನ್ನಡ ಶಾಸನಗಳ ಶೋಧನ ಅಧ್ಯಯನ ಮತ್ತು ಸಂರಕ್ಷಣಾ ಯೋಜನೆ
Digiqole Ad

ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು – ಪ್ರಾಚೀನ ಕನ್ನಡ ಶಾಸನಗಳ ಶೋಧನ ಅಧ್ಯಯನ ಮತ್ತು ಸಂರಕ್ಷಣಾ ಯೋಜನೆ

ಪ್ರಾಚೀನ ಕಾಲದ ಶಾಸನಗಳನ್ನು ಸಂರಕ್ಷಿಸುವ ಹಾಗೂ ಅದನ್ನು ಬೆಳಕಿಗೆ ತರುವ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಒಂದು ಮಹತ್ತರ ಹೆಜ್ಜೆಯನಿಟ್ಟಿದೆ ಬಹುಶಹ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ಇದು ರಾಜ್ಯದಲ್ಲೇ ಪ್ರಥಮ ಎನಬಹುದು. ಪ್ರಾಚೀನ ಕಾಲದಲ್ಲಿ ನಡೆದು ಹೋದ ಘಟನೆಗಳನ್ನು ದಾಖಲೀಕರಣ ಮಾಡುವ ನಿಟ್ಟಿನಲ್ಲಿ ವಿವಿಧ ಪರಿಕರಗಳ ಮೇಲೆ ಬರೆಯಲಾದ ಅಮೂಲ್ಯ ಬರಹಗಳ ಶೋಧನೆ ಮಾಡಿ ಅದರ ಅಧ್ಯಯನ ಮಾಡಿ ಅದನ್ನು ಪ್ರಕಾಶನ ಮಾಡುವ ನಿಟ್ಟಿನಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಳ್ಳಲಾದ ವಿನೂತನ ಯೋಜನೆಯ ಶಾಸನ ಶೋಧನ- ಅಧ್ಯಯನ ಸಂರಕ್ಷಣಾ ಯೋಜನೆಯು 06-04.2024ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಾಲನೆಗೊಳ್ಳಲಿದೆ.

ಈ ಸುದ್ದಿ ಓದಿದ್ದೀರಾ?:ತುಮಕೂರಿನಲ್ಲಿ ಸುಟ್ಟು ಕರಕಲಾದ ಕಾರು ಪತ್ತೆ; ದಕ್ಷಿಣ ಕನ್ನಡಕ್ಕೆ ಸೇರಿರಬಹುದು ಎಂಬ ಬಿಗು ಅನುಮಾನ!

ಈ ಯೋಜನೆಯ ಪ್ರಕಾರ, ದೇವಾಲಯಗಳಲ್ಲಿ, ಮಠ ಮಂದಿರಗಳಲ್ಲಿ, ಜೈನ ಮಂದಿರ, ಬಸದಿ, ಗರಡಿಗಳಲ್ಲಿ ಹಾಗೂ ದೈವಸ್ಥಾನ, ರಾಜರ ಯಾ ಅರಸರ ಅರಮನೆಯಲ್ಲಿ , ಗುತ್ತಿನ ಮನೆಗಳಲ್ಲಿ, ತರವಾಡು ಮನೆಗಳಲ್ಲಿ, ಪ್ರಾಚೀನ ಮನೆಗಳಲ್ಲಿ ಹಾಗೂ ಬಯಲು ಪ್ರದೇಶಗಳಲ್ಲಿ ಪ್ರಾಚೀನ ಬರವಣಿಗೆಯ ಶಾಸನಗಳು ಲಭ್ಯವಾಗುತ್ತದವೆ.ಇವುಗಳು ಶಿಲೆಗಳ ಮೇಲೆ,ತಾಮ್ರಪಟಗಳ ಮೇಲೆ, ರಥದಲ್ಲಿ, ತುಳಸಿ ಕಟ್ಟೆಯಲ್ಲಿ, ಮೂರ್ತಿಗಳ ಮೇಲೆ, ಗಂಟೆ,ಹರಿವಾಣ, ಆರತಿ, ಶಂಖ, ಖಡ್ಗ, ಮಡಕೆ, ಇತ್ಯಾದಿಗಳ ಮೇಲೆ ಬರೆಯಲ್ಪಟ್ಟಿರುತ್ತವೆ.

ಇವುಗಳು ರಾಜಾಜ್ಞೆ, ದಾನ ಪತ್ರ, ಒಪ್ಪಂದ, ಪುರಾತನ ಘಟನೆಯ ವಿವರಗಳು ಇತ್ಯಾದಿಗಳನ್ನು ಹೊಂದಿರುತ್ತವೆ. ಇವುಗಳ ಅಧ್ಯಯನವು ನಮ್ಮ ಇತಿಹಾಸ ಕನ್ನಡ ಭಾಷೆ, ಕನ್ನಡ ಸಾಹಿತ್ಯ ಪರಂಪರೆ, ಸಂಸ್ಕೃತಿ, ಸಾಮಾಜಿಕ ಹಾಗೂ ಚಾರಿತ್ರಿಕ ನಡವಳಿಕೆಗಳು ಇತ್ಯಾದಿಗಳ ಕುರಿತು ಅಮೂಲ್ಯ ಮಾಹಿತಿಗಳನ್ನು ಒದಗಿಸುತ್ತವೆ.ಆದುದರಿಂದ ಇವುಗಳ ಅಧ್ಯಯನವು ಕುತೂಹಲಕಾರಿಯಾಗಿರುವಂತೆ ಜನಜೀವನದ ಅನೇಕ ಅಂಶಗಳ ಕುರಿತಾದ ಜ್ಞಾನ ನಿಧಿಗಳು ಆಗಿವೆ.ಇವುಗಳ ಶೋಧನೆ ಅಧ್ಯಯನ ಮತ್ತು ಪ್ರಕಟಣೆಯ ಒಂದು ಬೃಹತ್ ಯೋಜನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ತಾಲೂಕು ಘಟಕವು ಕೈಗೆತ್ತಿಕೊಂಡಿದೆ.ಹಿರಿಯ ಶಾಸನ ತಜ್ಞರಾಗಿರುವ ಡಾ. ಉಮಾನಾಥ್ ಶೆಣೈ ಈ ಯೋಜನೆಯ ಮುಖ್ಯ ಅಧ್ಯಯನಕಾರರಾಗಿರುತ್ತಾರೆ.

ಮೊದಲ ಹಂತದಲ್ಲಿ ಪುತ್ತೂರು ತಾಲೂಕು ಹಾಗೂ ಅದರ ಪರಿಸರವನ್ನು ಈ ಯೋಜನೆಗೆ ಅಳವಡಿಸಿಕೊಳ್ಳಲಾಗಿರುತ್ತದೆ. ಮುಂದಿನ ಹಂತದಲ್ಲಿ ಜಿಲ್ಲೆಯ ಇತರ ತಾಲೂಕುಗಳಿಗೆ ಈ ಶಾಸನ ಅಧ್ಯಯನವನ್ನು ವಿಸ್ತರಿಸಲಿದ್ದೇವೆ.

ಈ ಯೋಜನೆಯ ಅಡಿಯಲ್ಲಿ ಸಂಬಂಧಪಟ್ಟ ಶಾಸನಗಳು ಲಭ್ಯವಾದ ವಿವರ, ಅದರ ಛಾಯಾಚಿತ್ರ, ಪೂರ್ಣಪಾಠ, ಭಾಷಾಂತರ ಸಾರಾಂಶ, ಸಂಕ್ಷಿಪ್ತ ಪರಿಚಯ ಇತ್ಯಾದಿಗಳನ್ನು ಕೃತಿಯ ರೂಪದಲ್ಲಿ ಪ್ರಕಟಿಸಿಲಾಗುತ್ತದೆ. ಮುಂದಿನ ಹಂತದಲ್ಲಿ ಈ ಶಾಸನಗಳನ್ನು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಧ್ಯಯನ ಮಾಡುವ ಶಾಸನ ಅಧ್ಯಯನಕಾರರಿಗೆ ಉಪಯೋಗವಾಗುವಂತೆ ಆಂಗ್ಲ ಭಾಷೆಯಲ್ಲಿಯೂ ಪ್ರಕಟಿಸುವ ಯೋಜನೆ ಇದೆ.

ಆದುದರಿಂದ ಈ ಪ್ರದೇಶದ ಸಾರ್ವಜನಿಕರು ತಮ್ಮಲ್ಲಿ ತಮ್ಮ ಸಂಸ್ಥೆ ಯಾ ತಮ್ಮ ಪರಿಸರದಲ್ಲಿ ಇಂತಹ ಪ್ರಾಚೀನ ಕನ್ನಡದ ಶಾಸನಗಳನ್ನು ಕಂಡರೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರ ದೂರವಾಣಿ ಸಂಖ್ಯೆ 9844401295 ಗೆ ಸಂಪರ್ಕಿಸಬೇಕಾಗಿ ವಿನಂತಿ

“ಶಾಸನ ತಜ್ಞ ಡಾ ಉಮಾನಾಥ್ ಶೆಣೈ ಅವರ ಪರಿಚಯ” ಇವರು ಈವರೆಗೆ 110 ಪ್ರಾಚೀನ ಶಾಸನಗಳನ್ನು ಅಧ್ಯಯನ ಮಾಡಿ ಭಾರತೀಯ ಪ್ರಾಚೀನ ಸಂಸ್ಕೃತಿ,ಪರಂಪರೆ, ಜೀವನ ವಿಧಾನ ಮತ್ತು ಅಂದಿನ ಕನ್ನಡ ಸಾಹಿತ್ಯವನ್ನು ಬೆಳಕಿಗೆ ತಂದಿರುತ್ತಾರೆ. ಇವರು 250 ಕ್ಕೂ ಅಧಿಕ ಸಂಶೋಧನಾತ್ಮಕ ಲೇಖನಗಳನ್ನು ಬರೆದಿರುತ್ತಾರೆ. ಈ ಲೇಖನಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ಮತ್ತು ವಿಶ್ವವಿದ್ಯಾನಿಲಯಗಳ ಪ್ರಕಟಣೆಯಲ್ಲಿ ಪ್ರಕಟವಾಗಿದೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಇತಿಹಾಸ, ಬಂಗರ ಇತಿಹಾಸ, ಕಾರ್ಕಳ ಗೊಮ್ಮಟೇಶ್ವರ ಚರಿತ್ರೆ , ತೀರ್ಥಂಕರ ಪುರಾಣ, ಸಾವಿರ ಕಂಬದ ಬಸದಿ, ಹೊಯ್ಸಳ ರಾಜವಂಶದ ಉಗಮ ಸ್ಥಾನ ಸೇರಿದಂತೆ 21 ಅಮೂಲ್ಯ ಚಾರಿತ್ರಿಕ ಕೃತಿಗಳನ್ನು ರಚಿಸಿದ್ದಾರೆ.

ಮೈಸೂರು ಅರಮನೆ, ಕೊಡಗಿನ ಅರಮನೆ, ಮೂಡಬಿದ್ರೆ ಜೈನ ಮಠದ ಪ್ರಾಚೀನ ತಾಡಪತ್ರ ತಮಿಳುನಾಡು ರಾಜ್ಯ ಪತ್ರಗಾರದಲ್ಲಿರುವ ದಾಖಲೆ ಇತ್ಯಾದಿ ಶಾಸನಗಳನ್ನು ಗ್ರಂಥಗಳನ್ನು ತಾಡಪತ್ರಗಳನ್ನು ಅಧ್ಯಯನ ಮಾಡಿ ಅನೇಕ ಹೊಸ ವಿಚಾರಗಳನ್ನು ಬೆಳಕಿಗೆ ತಂದ ಗೌರವ ಇವರಿಗೆ ಸಲ್ಲುತ್ತದೆ.

ಇವರ ಈ ಸೇವೆಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವಾರ್ಪಣೆ ಸೇರಿದಂತೆ ಹತ್ತು ಹಲವರು ಪ್ರಶಸ್ತಿಗಳು ಇವರ ಮುಡಿಯೇರಿದೆ.ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಸುದೀರ್ಘ 35 ವರ್ಷಗಳ ಸೇವೆಯನ್ನು ಸಲ್ಲಿಸಿ, ಇದೀಗ ನಿವೃತ್ತರಾಗಿ ಪುತ್ತೂರಿನಲ್ಲಿ ವಾಸವಾಗಿದ್ದಾರೆ.

ಈ ಸುದ್ದಿ ಓದಿದ್ದೀರಾ?:ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿ ಕೊಲೆ; ಬೆಳ್ತಂಗಡಿಯ ಮೂವರ ಸಾವು.!

www.goldfactorynews.com

Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

Digiqole Ad

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!