• 27 ಜುಲೈ 2024

ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ಸರಸ್ವತಿ ಮರಂಗಳ ಸೇವಾ ನಿವೃತ್ತಿ 

 ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ಸರಸ್ವತಿ ಮರಂಗಳ ಸೇವಾ ನಿವೃತ್ತಿ 
Digiqole Ad

ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ಸರಸ್ವತಿ ಮರಂಗಳ ಸೇವಾ ನಿವೃತ್ತಿ 

ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿಯಾಗಿ ಒಟ್ಟು ಸುದೀರ್ಘ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ ಶ್ರೀಮತಿ ಸರಸ್ವತಿ ಮರಂಗಳ ಮೇ. 31ರಂದು ನಿವೃತ್ತಿ ಹೊಂದಿದ್ದಾರೆ.

ಮಣಿಕ್ಕರ ಪರನೀರು ದಿಟ ರಾಮಯ್ಯ ಗೌಡ ಮತ್ತು ಹೊನ್ನಮ್ಮ ದಂಪತಿಗಳ ಪುತ್ರಿಯಾಗಿ 1961ರಲ್ಲಿ ಜನಿಸಿದ ಶ್ರೀಮತಿ ಸರಸ್ವತಿಯವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ ಶಾಲೆ ನೆಟ್ಟಾರು, ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಬೆಳ್ಳಾರೆ, ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ವಿವೇಕಾನಂದ ಕಾಲೇಜು ಪುತ್ತೂರು, ಬಿ.ಎಡ್ ವ್ಯಾಸಂಗವನ್ನು ಸರಕಾರಿ ಬಿ.ಎಡ್ ಕಾಲೇಜ್ ಮಂಗಳೂರಿನಲ್ಲಿ ಪೂರೈಸಿ, ಮಡಿಕೇರಿಯ ಸರಸ್ವತಿ TCH ಸಂಸ್ಥೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು.

 

ಬಳಿಕ 5 ವರ್ಷ ಪಂಜ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಮತ್ತು ಬೆಳ್ಳಾರೆ ಜೂನಿಯ‌ರ್ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿ, 2004ರಿಂದ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಸೇರ್ಪಡೆಗೊಂಡು ಬಳಿಕ ಮುಖ್ಯಶಿಕ್ಷಕಿಯಾಗಿ ಒಟ್ಟು ಸುದೀರ್ಘ 36 ವರ್ಷಗಳ ಕಾಲ ಸೇವೆ ಸಲ್ಲಿಸಿ ಮೇ. 31ರಂದು ನಿವೃತ್ತಿ ಹೊಂದಿದರು.

ಇವರ ಪತಿ ಲಕ್ಷ್ಮಣ ಗೌಡ ಮರಂಗಳ ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಪುತ್ರ ವಿಕಾಸ್ ಕಂಪನಿ ಉದ್ಯೋಗಿಯಾದರೆ, ಪುತ್ರಿ ಅಖಿಲಾ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ. ಅಳಿಯ ಕೀರ್ತಿಪ್ರಸಾದ್ ಯು.ಎಸ್.ಎ. ಯಲ್ಲಿ ಉದ್ಯೋಗಿಯಾಗಿದ್ದಾರೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ