• 27 ಜುಲೈ 2024

ಉಕ್ರೇನ್ ನ ಖಾರ್ಕಿವ್ ಮೇಲೆ ರಷ್ಯಾದ ಡ್ರೋನ್ ದಾಳಿ : ಕನಿಷ್ಠ 10 ಮಂದಿ ಬಲಿ. 

 ಉಕ್ರೇನ್ ನ ಖಾರ್ಕಿವ್ ಮೇಲೆ ರಷ್ಯಾದ ಡ್ರೋನ್ ದಾಳಿ : ಕನಿಷ್ಠ 10 ಮಂದಿ ಬಲಿ. 
Digiqole Ad

ಉಕ್ರೇನ್ ನ ಖಾರ್ಕಿವ್ ಮೇಲೆ ರಷ್ಯಾದ ಡ್ರೋನ್ ದಾಳಿ : ಕನಿಷ್ಠ 10 ಮಂದಿ ಬಲಿ. 

ಉಕ್ರೇನಿನ ಎರಡನೇ ಅತಿದೊಡ್ಡ ನಗರದ ಮೇಲೆ ರಷ್ಯಾದ ದಾಳಿಯ ನಂತರ ಕನಿಷ್ಠ ಆರು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 10 ಜನರು ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಅಧಿಕಾರಿಗಳು ಶನಿವಾರ (ಏಪ್ರಿಲ್ 6) ಮಾಹಿತಿ ನೀಡಿದ್ದಾರೆ. ಉಕ್ರೇನ್ ನ ದಕ್ಷಿಣ ನಗರ ಜಪೊರಿಝಿಯಾದಲ್ಲಿ ರಷ್ಯಾದ ಕ್ಷಿಪಣಿಗಳು ದಾಳಿ ನಡೆಸಿದ ಒಂದು ದಿನದ ನಂತರ ಈ ಘಟನೆ ನಡೆದಿದ್ದು, ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು 20 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.

ಈ ಸುದ್ದಿಯನ್ನು ಓದಿದ್ದೀರಾ.?ಮಂಗಳೂರು ನಗರದ ಆರು ಪ್ರದೇಶಗಳನ್ನು ‘ಹಾರ್ನ್ ನಿಷೇಧಿತ ಪ್ರದೇಶ’ ಘೋಷಣೆ

ಖಾರ್ಕಿವ್ ಮೇಲೆ ರಷ್ಯಾ ಏ.6 ಬೆಳಿಗ್ಗೆಯವರೆಗೆ ದಾಳಿ ನಡೆಸಿದೆ, ಶೆವ್ವಂಕಿವ್ಸ್ಕಿ ಜಿಲ್ಲೆಯಲ್ಲಿ ರಾತ್ರಿ ದಾಳಿಯ ಪರಿಣಾಮವಾಗಿ 6 ಜನರು ಸಾವನ್ನಪ್ಪಿದ್ದಾರೆ ಮತ್ತು 10 ಜನರು ಗಾಯಗೊಂಡಿದ್ದಾರೆ ಎಂದು ಖಾರ್ಕಿವ್ ಮೇಯ‌ರ್ ಇಹೋರ್ ಟೆರೆಖೋವ್‌ ಟೆಲಿಗ್ರಾಮ್ ಪೋಸ್ಟ್ ನಲ್ಲಿ ಮಾಹಿತಿ ನೀಡಿದ್ದಾರೆ. ಈ ದಾಳಿಯು ವಸತಿ ಪ್ರದೇಶಗಳ ಮೇಲೆ ನಡೆದಿತ್ತು. ಒಂಬತ್ತು ಎತ್ತರದ ಕಟ್ಟಡಗಳು, ಮೂರು ವಸತಿ ನಿಲಯಗಳು, ಹಲವಾರು ಆಡಳಿತಾತ್ಮಕ ಕಟ್ಟಡಗಳು, ಅಂಗಡಿ, ಪೆಟ್ರೋಲ್ ಬಂಕ್, ಸೇವಾ ಕೇಂದ್ರ ಮತ್ತು ಕಾರುಗಳಿಗೆ ಹಾನಿಯಾಗಿದೆ ಎಂದು ಅವರು ಹೇಳಿದ್ದಾರೆ. ಡ್ರೋನ್ ಗಳನ್ನು ಬಳಸಿ ಈ ಮಾರಣಾಂತಿಕ ದಾಳಿ ನಡೆಸಲಾಗಿದೆ ಎಂದು ಉಕ್ರೇನ್ ರಾಷ್ಟ್ರೀಯ ಪೊಲೀಸರು ತಿಳಿಸಿದ್ದಾರೆ. ಮಧ್ಯರಾತ್ರಿಯ ನಂತರ ಈ ದಾಳಿ ನಡೆದಿದೆ ಎಂದು ಉಕ್ರೇನ್ ಮಾಧ್ಯಮಗಳು ವರದಿ ಮಾಡಿದೆ.

ಈ ಸುದ್ದಿಯನ್ನು ಓದಿದ್ದೀರಾ.?ಮನೋವೈಜ್ಞಾನಿಕ ಚಿಕಿತ್ಸೆಯಾಗಿ ತುಳುನಾಡಿನ ಮಾಂತ್ರಿಕ ಕುಣಿತಗಳು

ಹೆಚ್ಚುವರಿಯಾಗಿ, ಖಾರ್ಕಿವ್ ಪ್ರಾದೇಶಿಕ ಗವರ್ನರ್ ಒಲೆಹ್ ಸಿನೆಹುಬೊವ್ ವಸತಿ ಕಟ್ಟಡದ ಮೇಲೆ ದಾಳಿ ಮತ್ತು ಖಾರ್ಕಿವ್ ನಗರದ ಉತ್ತರದ ಹಳ್ಳಿಯ ಮೇಲೆ ಕ್ಷಿಪಣಿ ದಾಳಿ ನಡೆದಿದೆ ಎಂದು ವರದಿ ಮಾಡಿದ್ದಾರೆ. ಆದಾಗ್ಯೂ, ಎರಡೂ ಘಟನೆಗಳಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದು ಹೇಳಿದ್ದಾರೆ.

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ