ಮಂಗಳೂರಿನಲ್ಲಿ ಪ್ರಧಾನಿ ಮೋದಿ ಈ ರಸ್ತೆಗಳಲ್ಲಿ ರೋಡ್ ಶೋ
ಮಂಗಳೂರಿನಲ್ಲಿ ಪ್ರಧಾನಿ ಮೋದಿ ಈ ರಸ್ತೆಗಳಲ್ಲಿ ರೋಡ್ ಶೋ
ಪ್ರಧಾನಿ ನರೇಂದ್ರ ಮೋದಿ ಏ.14ರಂದು ಮಂಗಳೂರಿಗೆ ಆಗಮಿಸುವುದು ಖಚಿತಗೊಂಡಿದ್ದು ಅಂದು ಸಂಜೆ 5 ಗಂಟೆಗೆ ರೋಡ್ ಶೋ ಮಾತ್ರ ಮಾಡಲಿದ್ದಾರೆ. ನಗರದ ನಾರಾಯಣ ಗುರು ಸರ್ಕಲ್‌ನಿಂದ ಲಾಲ್‌ಬಾಗ್, PVS ವೃತ್ತದ ಮೂಲಕ ನವಭಾರತ ಸರ್ಕಲ್ ಮಾರ್ಗವಾಗಿ ಹಂಪನಕಟ್ಟೆವರೆಗೆ ರೋಡ್ ಶೋ ನಡೆಸಲಿದ್ದಾರೆ ಎಂದು BJP ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ. ಅಂದು ಸಂಜೆ 5ಕ್ಕೆ ಮೋದಿ ಅವರು ನಾರಾಯಣಗುರು ಸರ್ಕಲ್‌ನಲ್ಲಿರುವ ನಾರಾಯಣಗುರು ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ತೆರೆದ ವಾಹನದಲ್ಲಿ ರೋಡ್‌ಶೋ ಮಾಡಲಿದ್ದಾರೆ ಎಂದು ಕುಂಪಲ ತಿಳಿಸಿದ್ದಾರೆ.