• 27 ಜುಲೈ 2024

ನರಕಯಾತನೇ ಅನುಭವಿಸುತ್ತಿರುವ ಕುಕ್ಕೆ ಸುಬ್ರಹ್ಮಣ್ಯದ ಆನೆ-ಮಾವುತರ ನಿರ್ಲಕ್ಷ್ಯವೇ ಕಾರಣ.

 ನರಕಯಾತನೇ ಅನುಭವಿಸುತ್ತಿರುವ ಕುಕ್ಕೆ ಸುಬ್ರಹ್ಮಣ್ಯದ ಆನೆ-ಮಾವುತರ ನಿರ್ಲಕ್ಷ್ಯವೇ ಕಾರಣ.
Digiqole Ad

ನರಕಯಾತನೇ ಅನುಭವಿಸುತ್ತಿರುವ ಕುಕ್ಕೆ ಸುಬ್ರಹ್ಮಣ್ಯದ ಆನೆ-ಮಾವುತರ ನಿರ್ಲಕ್ಷ್ಯವೇ ಕಾರಣ.

ಸುಳ್ಯ :  ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಆನೆಗೆ ಕಾಲು ನೋವಿನಿಂದ ನರಕಯಾತನೆ ಅನುಭವಿಸುತ್ತಿದ್ದು ಇದಕ್ಕೆ ಮಾವುತರ ನಿರ್ಲಕ್ಷವೇ ಕಾರಣ ಎಂದು ತಿಳಿದುಬಂದಿದೆ.

ಕುಕ್ಕೆ ದೇಗುಲಕ್ಕೆ ರಾಜ್ಯದ ಮಾಜಿ ಪ್ರವಾಸೋದ್ಯಮ ಸಚಿವ ಅನಂದ್ ಸಿಂಗ್ ಉಡುಗೊರೆಯಾಗಿ ಯಶಸ್ವಿನಿ ಆನೆಯನ್ನು ನೀಡಿದ್ದರು. ಈಗ ಆನೆಗೆ 18 ವರ್ಷ ಪ್ರಾಯ ಪೂರ್ತಿಯಾಗಿದೆ. ಇದೀಗ ಆನೆಯ ಎಡಗಾಲಿನಲ್ಲಿ ತೀವ್ರ ಗಾಯವಾಗಿದ್ದು, ಕಾಲನ್ನು ನೆಲಕ್ಕೆ ಊರಲಾಗದೆ ಎಳೆದುಕೊಂಡು ಹೋಗುತ್ತಿದೆ.

ಈ ಸುದ್ದಿ ಓದಿದ್ದೀರಾ? ಕಾರ್ಕಳ: ಸಿಡಿಮದ್ದು ತಯಾರಿಕಾ ಘಟಕದಲ್ಲಿ ಆಕಸ್ಮಿಕ ಸ್ಫೋಟ; ಇಬ್ಬರು ಮಹಿಳೆಯರಿಗೆ ಗಾಯ.

ಈ ಹಿಂದೆ ಯಶಸ್ವಿನಿ ಆನೆ ಮಾವುತರ ನಿರ್ಲಕ್ಷ್ಯದಿಂದ ಮೈಲುತುತ್ತು ಸೇವಿಸಿ ಒಂದು ತಿಂಗಳ ಕಾಲ ಆನೆ ಅನಾರೋಗ್ಯದಿಂದ ಬಳಲುತ್ತಿತ್ತು.  ಸದ್ಯ ಮಾವುತರ ನಡುವಿನ ವೈಮನಸ್ಸಿನಿಂದ  ಸರಿಯಾಗಿ ನಿರ್ವಹಣೆ ಮಾಡದಿರುವುದು ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ.

ಈ ಸುದ್ದಿ ಓದಿದ್ದೀರಾ?ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ವಿಧಿವಶ.

ಯಶಸ್ವಿನಿ ಆನೆಯ ನಿರ್ವಹಣೆಗೆಂದು ಏಳು ಸಿಬ್ಬಂದಿಯನ್ನು ನೇಮಿಸಲಾಗಿದೆ. ಆದರೆ ಆನೆಗೆ ಸರಿಯಾದ ರೀತಿಯಲ್ಲಿ ಆಹಾರವನ್ನು ಮಾವುತರು ನೀಡುತ್ತಿಲ್ಲ ಎನ್ನುವ ಆರೋಪದ ನಡುವೆಯೂ ಆನೆಯನ್ನು ಸರಿಯಾಗಿ ಪರಿಶೀಲಿಸುವಲ್ಲಿ ಅಧಿಕಾರಿಗಳೂ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಆದರೆ ತದನಂತರ ಬಂದ ಸುದ್ದಿಗಳನ್ನು ಕಲೆ ಹಾಕಿದಾಗ, ಕುಕ್ಕೆ ಸುಬ್ರಮಣ್ಯ ದ ಆನೆಗೆ ಅನಾರೋಗ್ಯ ವಾಗಿರುವುದು ಸುಳ್ಳು ಸುದ್ದಿ,ಇದು ಅಪಪ್ರಚಾರ ಮಾಡಲಾಗಿದೆ ಎಂದು ಶ್ರೀ ಕುಕ್ಕೆ ಸುಬ್ರಮಣ್ಯ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಡಾ.ನಿಂಗಯ್ಯ ಸ್ಪಷ್ಟ ಪಡಿಸಿದ್ದಾರೆ,ಕ್ಷೇತ್ರದ ಆನೆ ಯಶಸ್ವಿನಿ ಆರೋಗ್ಯದಿಂದ ಇರುವುದಾಗಿ ಹಲವು ಮೂಲಗಳಿಂದ ತಿಳಿದುಬಂದಿದೆ.

GOLDFACTORYNEWS.COM the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged. Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

 

Digiqole Ad

ಈ ಸುದ್ದಿಗಳನ್ನೂ ಓದಿ