• 22 ನವೆಂಬರ್ 2024

ಸೈಬರ್ ವಂಚಕರ ಜಾಲ; 18 ಲಕ್ಷ ಮೊಬೈಲ್ ನಂಬರ್ ರದ್ದಾಗುವ ಸಾಧ್ಯತೆ!

 ಸೈಬರ್ ವಂಚಕರ ಜಾಲ; 18 ಲಕ್ಷ ಮೊಬೈಲ್ ನಂಬರ್ ರದ್ದಾಗುವ ಸಾಧ್ಯತೆ!
Digiqole Ad

ಸೈಬರ್ ವಂಚಕರ ಜಾಲ; 18 ಲಕ್ಷ ಮೊಬೈಲ್ ನಂಬರ್ ರದ್ದಾಗುವ ಸಾಧ್ಯತೆ!

ಭಾರತದಲ್ಲಿ ಹೆಚ್ಚುತ್ತಿರುವ ಆನ್ಲೈನ್ ಹಣಕಾಸು ವಂಚನೆ ಪ್ರಕರಣಗಳನ್ನು ನಿಯಂತ್ರಿಸಲು ಸರ್ಕಾರವು ವಂಚಕರು ಬಳಸುವ ಮೊಬೈಲ್ ಸೆಟ್ ಮತ್ತು ನಂಬರ್ಗಳನ್ನು ಪತ್ತೆ ಮಾಡಿ ರದ್ದುಗೊಳಿಸುವಂತೆ ಟೆಲಿಕಾಂ ಕಂಪನಿಗಳಿಗೆ ಸೂಚಿಸಲಾಗಿದೆ. ತನಿಖೆ ವೇಳೆ ಸಾವಿರಾರು ಸಿಮ್ಗಳನ್ನು ಒಂದು ಮೊಬೈಲ್ ಹ್ಯಾಂಡ್ಸೆಟ್ಗಳಲ್ಲಿ ಬಳಸಿರುವ ಅನೇಕ ನಿದರ್ಶನಗಳು ಸಿಕ್ಕಿವೆ. ಇಂಥ 28 ಸಾವಿರ ಹ್ಯಾಂಡ್ಸೆಟ್ಗಳನ್ನು ಕಾರ್ಯರಹಿತ ಮಾಡಲಾಗಿದೆ. ಇದರಲ್ಲಿ ಬಳಸಲಾದ 20 ಲಕ್ಷ ಮೊಬೈಲ್ ನಂಬರ್ಗಳನ್ನು ವೆರಿಫೈ ಮಾಡಲಾಗುತ್ತಿದೆ. ವೆರಿಫಿಕೇಶನ್ನಲ್ಲಿ ವಿಫಲವಾಗುವ ಸಿಮ್ಗಳನ್ನು ಕಾರ್ಯರಹಿತ ಮಾಡಲಾಗುತ್ತದೆ.

ಇಂತಹ ಪ್ರಕರಣಗಳಲ್ಲಿ ಸಿಮ್ಗಳು ಯಶಸ್ವಿಯಾಗಿ ವೆರಿಫೈ ಆಗುವುದು ಶೇ. 10 ಮಾತ್ರ ಎಂಬುದು ಅಧಿಕಾರಿಗಳ ಅನಿಸಿಕೆ ಅಂತೆ. ಹಾಗೆ ನೋಡಿದರೆ, ಈಗ ಕಣ್ಗಾವಲಿನಲ್ಲಿರುವ 20 ಲಕ್ಷ ಸಿಮ್ಗಳಲ್ಲಿ ಶೇ. 10ರಷ್ಟು ಮೊಬೈಲ್ ಕನೆಕ್ಷನ್ಸ್ ಮಾತ್ರ ವೆರಿಫೈ ಆಗಬಹುದು. ಇನ್ನುಳಿದವುಗಳ ವೆರಿಫಿಕೇಶನ್ ಆಗದೇ ಹೋಗಬಹುದು. ಅಂದರೆ 18 ಲಕ್ಷದಷ್ಟು ಮೊಬೈಲ್ ನಂಬರ್ಗಳನ್ನು ನಿಷ್ಕ್ರಿಯ ಮಾಡಬಹುದು.

‘ಹದಿನೈದು ದಿನದಲ್ಲಿ ಟೆಲಿಕಾಂ ಕಂಪನಿಗಳು ಈ ನಂಬರ್ಗಳ ರೀವೆರಿಫಿಕೇಶನ್ ಪೂರ್ಣಗೊಳಿಸಲಿದ್ದಾರೆ. ಅದಾದ ಬಳಿಕ ವೆರಿಫೈ ಆಗದ ನಂಬರ್ಗಳನ್ನು ಕಾರ್ಯರಾಗಹಿತ ಮಾಡಲಾಗುವುದು,’ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ನ್ಯಾಷನಲ್ ಸೈಬರ್ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ ಪ್ರಕಾರ 2023ರಲ್ಲಿ ಆನ್ಲೈನ್ನಲ್ಲಿ ಆಗಿರುವ ಹಣಕಾಸು ವಂಚನೆಯಲ್ಲಿ ಜನರು 10,319 ಕೋಟಿ ರೂ ಕಳೆದುಕೊಂಡಿದ್ದಾರೆ. ಆ ವರ್ಷ ಸುಮಾರು ಏಳು ಲಕ್ಷ ಸಮೀಪದಷ್ಟು ದೂರುಗಳು ದಾಖಲಾಗಿರುವುದು ಗೊತ್ತಾಗಿದೆ.

ಇನ್ನು ವಂಚಕರ ಜಾಲ ಹೇಗಿರುತ್ತದೆ ಎಂದರೆ,ವಂಚಕರು ಸಿಮ್ ಕಾರ್ಡ್​ಗಳನ್ನು ಬಹಳ ಚಾಣಾಕ್ಷ್ಯತನದಿಂದ ನಿರ್ವಹಿಸುತ್ತಾರೆ. ಒಂದು ಟೆಲಿಕಾಂ ಸರ್ಕಲ್​ನ ಸಿಮ್ ಕಾರ್ಡ್ ಅನ್ನು ಬೇರೆ ಟೆಲಿಕಾಂ ಸರ್ಕಲ್​ನಲ್ಲಿ ಬಳಸಬಹುದು. ಉದಾಹರಣೆಗೆ, ಕೇರಳದ ಸರ್ಕಲ್​ನ ಸಿಮ್ ಕಾರ್ಡ್ ಅನ್ನು ಕರ್ನಾಟಕದ ರಾಜ್ಯದಲ್ಲಿ ಬಳಸಬಹುದು.

ವಂಚಕರು ಒಂದು ಸಿಮ್ ಕಾರ್ಡ್ ಅನ್ನು ಬೇರೆ ಬೇರೆ ಹ್ಯಾಂಡ್​ಸೆಟ್​ಗಳಿಗೆ ಹಾಕಿ ಬಳಸುತ್ತಾರೆ. ಒಂದೇ ಮೊಬೈಲ್ ಹ್ಯಾಂಡ್​ಸೆಟ್​ನಿಂದ ವಂಚಕರ ಕರೆ ಹೋಗುತ್ತಿದ್ದರೆ ಬೇಗ ಪತ್ತೆಯಾಗಬಹುದು ಎಂಬ ಕಾರಣಕ್ಕೆ ಈ ದೂರ್ತರು ಸಿಮ್ ಕಾರ್ಡ್ ಮತ್ತು ಹ್ಯಾಂಡ್​ಸೆಟ್​ಗಳನ್ನು ಅದಲುಬದಲು ಮಾಡುತ್ತಲೇ ಇರುತ್ತಾರೆ. ಉದಾಹರಣೆಗೆ ಒಂದು ಹ್ಯಾಂಡ್​ಸೆಟ್​ನಿಂದ ಒಂದಷ್ಟು ಮೊಬೈಲ್ ಕರೆಗಳು ಹೋದ ಬಳಿಕ ಸಿಮ್ ತೆಗೆದು ಬೇರೆ ಹ್ಯಾಂಡ್​ಸೆಟ್​ಗೆ ಹಾಕಿ ಕರೆ ಮಾಡಬಹುದು ಎನ್ನಲಾಗಿದೆ.

 

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ