• 18 ಜೂನ್ 2024

ಪದ್ಮಶ್ರೀ ಹಾಜಬ್ಬ ಶಾಲೆಯಲ್ಲಿ ಕಾಂಪೌಂಡ್‌ ಕುಸಿದು ವಿದ್ಯಾರ್ಥಿನಿ ಸಾವು

 ಪದ್ಮಶ್ರೀ ಹಾಜಬ್ಬ ಶಾಲೆಯಲ್ಲಿ ಕಾಂಪೌಂಡ್‌ ಕುಸಿದು ವಿದ್ಯಾರ್ಥಿನಿ ಸಾವು
Digiqole Ad

ಪದ್ಮಶ್ರೀ ಹಾಜಬ್ಬ ಶಾಲೆಯಲ್ಲಿ ಕಾಂಪೌಂಡ್‌ ಕುಸಿದು ವಿದ್ಯಾರ್ಥಿನಿ ಸಾವು

ಮಂಗಳೂರು, ಮೇ 20: ಶಾಲೆಯ ತಡೆಗೋಡೆ ಕುಸಿದು ವಿದ್ಯಾರ್ಥಿನಿ ದಾರುಣವಾಗಿ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ‌ಉಳ್ಳಾಲ ತಾಲೂಕಿನ ನ್ಯೂಪಡ್ಪು ಶಾಲೆಯಲ್ಲಿ ನಡೆದಿದೆ. ನ್ಯೂಪಡ್ಪು ನಿವಾಸಿ ಸಿದ್ದೀಖ್ ಜಮೀಲಾ ಪುತ್ರಿ ಶಾಜಿಯಾ (7) ಮೃತ ಬಾಲಕಿ ಎಂದು ಗುರುತಿಸಲಾಗಿದೆ.ನ್ಯೂಪಡ್ಪು ಹಾಜಬ್ಬರ ಶಾಲೆಯಲ್ಲಿ 3ನೇ ತರಗತಿ ಕಲಿಯುತ್ತಿದ್ದ ವಿದ್ಯಾರ್ಥಿನಿ ಶಾಜಿಯಾ ಶಾಲೆಯಲ್ಲಿ ನಡೆಯುತ್ತಿದ್ದ ಎನ್‌ಎಸ್ಎಸ್ ಶಿಬಿರದಲ್ಲಿ ಭಾಗಿಯಾಗಿದ್ದಳು. ಇಂದು ಗೇಟಿನ ಬಳಿ ಆಟವಾಡುತ್ತಿರುವಾಗ, ಮಳೆಗೆ ನೆನೆದಿದ್ದ ಶಾಲೆಯ ತಡೆಗೋಡೆ ಏಕಾಏಕಿ ಕುಸಿದಿದ್ದು, ಬಾಲಕಿ ತಡೆಗೋಡೆಯ ಕೆಳಗೆ ಸಿಲುಕಿ ಸಾವನ್ನಪ್ಪಿದ್ದಾಳೆ. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಕಟ್ಟಿದ ನ್ಯೂಪಡ್ಪು ಶಾಲೆಯಲ್ಲಿ ಈ ದುರಂತ ನಡೆದಿದೆ.

 

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!