ಉಚಿತ ಬೋರ್ ವೆಲ್ ನೀಡಲಿದೆ ಸರಕಾರ! ಪಡೆಯುವುದು ಹೇಗೆ?
ಉಚಿತ ಬೋರ್ ವೆಲ್ ನೀಡಲಿದೆ ಸರಕಾರ! ಪಡೆಯುವುದು ಹೇಗೆ?
ರೈತರು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತ ಕೊಳವೆಬಾವಿ ಪಡೆದುಕೊಳ್ಳಬಹುದು. ಈ ಯೋಜನೆಯ ಲಾಭ ಪಡೆಯಲು ಬಯಸಿದರೆ ಹೇಗೆ ಅರ್ಜಿ ಹಾಕಬೇಕು ಎಂಬ ಮಾಹಿತಿ ಕೆಳಗೆ ನೀಡಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರವು ಗಂಗಾ ಕಲ್ಯಾಣ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆ ಮೂಲಕ ಉಚಿತ ನೀರಾವರಿ ಸೌಲಭ್ಯದ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
ಇದರಲ್ಲಿ ಕೊಳವೆಬಾವಿ ಮತ್ತು ತೆರೆದ ಬಾವಿಯನ್ನು ರಚಿಸಲು ಪಂಪ್ಸೆಟ್ಟುಗಳನ್ನು ಮತ್ತು ಎಕ್ಸಸೈಜ್ ಗಳನ್ನು ಸ್ಥಾಪಿಸುವುದು ಸೇರಿಸಲಾಗಿದೆ.
ಪ್ರತಿಯೊಂದು ಬೋರ್ವೆಲ್ ಯೋಜನೆಗಾಗಿ ಸರ್ಕಾರವು 1.50 ಲಕ್ಷ ರೂಪಾಯಿವರೆಗೆ ಸಂಪೂರ್ಣವಾಗಿ ಉಚಿತ ಸಹಾಯಧನವನ್ನು ನಿಗದಿ ಮಾಡಲಾಗಿದ್ದು ಈ ಹಣವನ್ನು ಬೋರವೆಲ್ ಕೊರೆಯಲು, ಪಂಪ್ ಸರಬರಾಜು ಮತ್ತು ವಿದ್ಯುತ್ ಉಪಕರಣ ಅಳವಡಿಸಲು ನೀಡಲಾಗುತ್ತದೆ. ಬೆಂಗಳೂರು ಅರ್ಬನ್( Bangalore urban) ಬೆಂಗಳೂರು ಗ್ರಾಮೀಣ( Bengaluru Gramin), ಚಿಕ್ಕಬಳ್ಳಾಪುರ, ಕೋಲಾರ್, ಮತ್ತು ತುಮಕೂರು ಮುಂತಾದ ಜಿಲ್ಲೆಗಳಲ್ಲಿ 3.5 ಲಕ್ಷ ರೂಪಾಯಿ ಅನುದಾನವನ್ನು ನೀಡಲಾಗುತ್ತಿದೆ.( ಲಾವಾ ಫಾರ್ಮ್ಸ್).
ಅರ್ಜಿ ಸಲ್ಲಿಸಲು ಅರ್ಹತೆಗಳು:
📌 ಅರ್ಜಿದಾರರು ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತ್ತಿದ್ದರೆ ಅವರ ವಾರ್ಷಿಕ ಆದಾಯವು 90 ಸಾವಿರ ಮೀರಿರಬಾರದು.
📌 ನಗರ ಪ್ರದೇಶದಲ್ಲಿ ವಾಸ ಮಾಡುವ ರೈತರಿಗೆ 1.03 ಲಕ್ಷ ರೂಪಾಯಿಗಳು ಮೀರಿರಬಾರದು.
📌 ಈ ಯೋಜನೆಗೆ ಅರ್ಜಿ ಹಾಕುವವರು ಕರ್ನಾಟಕದ ನಿವಾಸಿಯಾಗಿರಬೇಕು.
📌ಅರ್ಜಿದಾರರ ವಯಸ್ಸು ಕನಿಷ್ಠ 18ರಿಂದ ಗರಿಷ್ಠ 55 ವರ್ಷಗಳ ನಡುವೆ ಇರಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
📌ಅರ್ಜಿದಾರರ ಆಧಾರ್ ಕಾರ್ಡ್
📌ಜಾತಿ ಪ್ರಮಾಣ ಪತ್ರ
📌ಯೋಜನೆ ಅರ್ಜಿದಾರರ ಪ್ರಮಾಣ ಪತ್ರ
📌ಆದಾಯ ಪ್ರಮಾಣ ಪತ್ರ
📌ಹೊಲದ ಕೂಡುವಿಕೆ ರಸ್ತೆಯ ಕಡತದ ನಕಲು
📌ಬಿಪಿಎಲ್ ರೇಷನ್ ಕಾರ್ಡ್
📌ಭೂ ಕಂದಾಯ ರಶಿದೀ ಪಾವತಿ
📌ಬ್ಯಾಂಕ್ ಪಾಸ್ ಬುಕ್ ವಿವರಗಳು
📌ಸುರಕ್ಷತೆ ಸ್ವಯಂ ಘೋಷಣ ಪತ್ರ
📌ಸ್ವಯಂ ಘೋಷಣಾ ಪತ್ರ
ಅರ್ಜಿ ಸಲ್ಲಿಸುವ ವಿಧಾನ :
• ಮೊದಲು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ( ವೆಬ್ಸೈಟ್ನ ನ ಲಿಂಕ್ ಕೆಳಗೆ ನೀಡಲಾಗಿದೆ)
•ಯೋಜನೆಯ ಪುಟ ಆಯ್ಕೆ ಮಾಡಿ.
•ಅರ್ಜಿಗೆ ಸಂಬಂಧಿಸಿದಂತ ಪುಟಗಳು ಪ್ರದರ್ಶಿಸುತ್ತವೆ
•ಎಲ್ಲಾ ಅವಶ್ಯಕತೆಗಳು ಮಾಹಿತಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ.
•ಈ ಮೇಲೆ ತಿಳಿಸಿದ ಸಂಬಂಧಿತ ದಾಖಲೆಯನ್ನು ಅಪ್ಲೋಡ್ ಮಾಡಿ.
•ಕೊನೆಯದಾಗಿ ಸಬ್ಮಿಟ್(submit) ಎಂಬ ಆಕೆಯ ಮೇಲೆ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ
https://kmdc.karnataka.gov.in/31/ganga-kalyana-schmeme/en