ತನ್ನ ಮಗಳ ಸ್ಮರಣಾರ್ಥ ಪಾಲ್ತಾಡಿ ಗ್ರಾಮದ ವಿದ್ಯಾರ್ಥಿನಿಯೋರ್ವಳ ವಿದ್ಯಾಭ್ಯಾಸಕ್ಕೆ ಆಸರೆಯಾದ ಸವಣೂರಿನ ಮಹಾನುಭಾವ!
ತನ್ನ ಮಗಳ ಸ್ಮರಣಾರ್ಥ ಪಾಲ್ತಾಡಿ ಗ್ರಾಮದ ವಿದ್ಯಾರ್ಥಿನಿಯೋರ್ವಳ ವಿದ್ಯಾಭ್ಯಾಸಕ್ಕೆ ಆಸರೆಯಾದ ಸವಣೂರಿನ ಮಹಾನುಭಾವ!
ಸೇವೆಯೇ ಪರಮೋಚ್ಚ ಧರ್ಮ
ತನ್ನ ಮಗಳ ಸ್ಮರಣಾರ್ಥ ವಿದ್ಯಾರ್ಥಿನಿಯೋರ್ವಳ ವಿದ್ಯಾಭ್ಯಾಸಕ್ಕೆ ನೆರವಾಗುವ ಇಚ್ಛೆಯಿಂದ ಪಾಲ್ತಾಡಿ ಗ್ರಾಮದ ಬೊಮ್ಮಂತ ಗುಂಡಿಯ ವಿದ್ಯಾರ್ಥಿನಿಗೆ ಧನ ಸಹಾಯ ನೀಡುವ ಮೂಲಕ ಅಶ್ರಫ್ ಕಾಸಿಲೆಯವರು ಮಾದರಿಯಾಗಿದ್ದಾರೆ.ಇವರು ಸವಣೂರು ಗ್ರಾಮದ ಕಾಸಿಲೆ ನಿವಾಸಿಯಾಗಿದ್ದು ಪ್ರಸ್ತುತ ಸುಳ್ಯದಲ್ಲಿ ನೆಲೆಸಿರುತ್ತಾರೆ
ಶ್ರೀಯುತರು ವಿದ್ಯಾರ್ಥಿನಿಯ ಪ್ರತಿ ತಿಂಗಳ ಕಾಲೇಜು ಶುಲ್ಕ ಭರಿಸುವ ಮೂಲಕ ಸಹಾಯ ನೀಡುತ್ತಾ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಇವರು ಭಾರತೀಯ ಜನತಾ ಪಾರ್ಟಿಯ ಸುಳ್ಯ ಅಲ್ಪಸಂಖ್ಯಾತ ಮೋರ್ಚಾದ ಮಾಜಿ ಅಧ್ಯಕ್ಷರು. ಸಹಾಯಧನ ನೀಡುವ ಸಂಧರ್ಭದಲ್ಲಿ ಸುಳ್ಯ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಇಂದಿರಾ ಬಿ ಕೆ.. ಮತ್ತು ವಿದ್ಯಾರ್ಥಿನಿಯ ಮನೆಯವರು ಜೊತೆಗಿದ್ದರು.