• 18 ಜೂನ್ 2024

ಜಾಹೀರಾತು ಅಪಪ್ರಚಾರ ಪ್ರಕರಣ: ರಾಹುಲ್​ ಗಾಂಧಿಗೆ ಜಾಮೀನು

 ಜಾಹೀರಾತು ಅಪಪ್ರಚಾರ ಪ್ರಕರಣ: ರಾಹುಲ್​ ಗಾಂಧಿಗೆ ಜಾಮೀನು
Digiqole Ad

ಜಾಹೀರಾತು ಅಪಪ್ರಚಾರ ಪ್ರಕರಣ: ರಾಹುಲ್​ ಗಾಂಧಿಗೆ ಜಾಮೀನು

ಕಳೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ BJP ಸರ್ಕಾರದ ವಿರುದ್ಧ 40% ಕಮಿಷನ್‌ ಬಗ್ಗೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಮಾನನಷ್ಟ ಪ್ರಕರಣ ಎದುರಿಸುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಇದೀಗ ಬೆಂಗಳೂರಿನ 42ನೇ ACMM ಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ರಾಹುಲ್‌ ಅವರ ಜಾಮೀನು ಸಂಬಂಧ ಮಾಜಿ ಸಂಸದ ಡಿಕೆ ಸುರೇಶ್‌ ಶೂರಿಟಿ ನೀಡಿದ್ದಾರೆ. ರಾಹುಲ್‌ ಖುದ್ದು ಕೋರ್ಟ್‌ಗೆ ಹಾಜರಾಗುವಂತೆ ಕೋರ್ಟ್‌ ಸಮನ್ಸ್‌ ನೀಡಿತ್ತು. ಅದರಂತೆ ಇಂದು ಕಟಕಟೆಗೆ ಹಾಜರಾಗಿ ಜಾಮೀನು ಪಡೆದುಕೊಳ್ಳುವ ಮೂಲಕ ಬಂಧನದ ಭೀತಿಯಿಂದಲೂ ಪಾರಾಗಿದ್ದಾರೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!