• 18 ಜೂನ್ 2024

ಪೆರ್ನೆ ಬಿಳಿಯೂರಿನಲ್ಲಿ ಡೆಂಗ್ಯೂ ಹೆಚ್ಚಳ:ಗ್ರಾ..ಪಂ ನಿಂದ ಫಾಗಿಂಗ್

 ಪೆರ್ನೆ ಬಿಳಿಯೂರಿನಲ್ಲಿ ಡೆಂಗ್ಯೂ ಹೆಚ್ಚಳ:ಗ್ರಾ..ಪಂ ನಿಂದ ಫಾಗಿಂಗ್
Digiqole Ad

ಪೆರ್ನೆ ಬಿಳಿಯೂರಿನಲ್ಲಿ ಡೆಂಗ್ಯೂ ಹೆಚ್ಚಳ:ಗ್ರಾ..ಪಂ ನಿಂದ ಫಾಗಿಂಗ್

ಪೆರ್ನೆ ಗ್ರಾಮ ಪಂಚಾಯತ್ ಗೆ ಒಳಪಟ್ಟ ಬಿಳಿಯೂರು ಮಲ್ಲಡ್ಕ ಭಾಗದಲ್ಲಿ ಡೆಂಗ್ಯೂ ಗೆ ಒಳಗಾಗಿ ಆಸ್ಪತ್ರೆ ದಾಖಲಾಗಿರುವ 20ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ .ಕೆಲವು ದಿನಗಳಿಂದ ಆರಂಭಗೊಂಡ ತುಂತುರು ಮಳೆಯಿಂದ ಸ್ಥಳೀಯರಲ್ಲಿ ಜ್ವರ ಹಾಗೂ ಶಾಲಾ ಮಕ್ಕಳಲ್ಲಿ ಕಣ್ಣುಗುಡ್ಡೆಯ ವಿಪರೀತ ನೋವು ಕಾಣಿಸಿಕೊಂಡಿದ್ದು ಚಿಕಿತ್ಸೆಗೆ ಒಳಗಾಗಿದ್ದಾರೆ. ಸಮಸ್ಯೆಯನ್ನು ಅರಿತ ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ಆರೋಗ್ಯ ಇಲಾಖೆ ಸಾರ್ವಜನಿಕ ಪ್ರದೇಶ ಹಾಗೂ ಡೆಂಗ್ಯೂ ಪೀಡಿತರ ಮನೆಗಳ ಸುತ್ತ ಮುತ್ತ ಫಾಗಿಂಗ್ ಮಾಡುವ ಮೂಲಕ ಕಾಯಿಲೆ ಹತೋಟಿ ತರುವಲ್ಲಿ ತುರ್ತು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಪಂಚಾಯತ್ ವಾಹನ ಬಳಸಿ ಧ್ವನಿ ವರ್ಧಕ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಗ್ರಾಮ ಪಂಚಾಯತ್ ಸದಸ್ಯರಾದ ಕೇಶವ ಸುಣ್ಣಾಣ ,ಪ್ರಕಾಶ್ ನಾಯಕ್ ,ಸುಮತಿ ಹಾಗೂ ಅಭಿವೃದ್ಧಿ ಆಧಿಕಾರಿ ಸುನಿಲ್ ಕುಮಾರ್ ಆರೋಗ್ಯ ಕಾರ್ಯಕರ್ತೆಯರ ಮೂಲಕ ಗ್ರಾಮದ ಮನೆ ಮನೆಗೆ ಕರಪತ್ರ ಹಂಚುವ ಮೂಲಕ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಿಳಿಯೂರು ಮತ್ತು ಮಲ್ಲಡ್ಕ ಭಾಗದಲ್ಲಿ ಹೆಚ್ಚಾಗಿ ಪ್ರಕರಣಗಳು ಕಂಡು ಬಂದಿದೆ.ಇದಕ್ಕೆ ಸಂಬಂಧಪಟ್ಟಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಾಥಮಿಕ ಸುರಕ್ಷ ಆರೋಗ್ಯ ಅಧಿಕಾರಿ ಚೆನ್ನಮ್ಮ ಸ್ಪಷ್ಟ ಪಡಿಸಿದ್ದಾರೆ.

REPORTED BY: SATHISH BILIYURU

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!