• 8 ನವೆಂಬರ್ 2024

ಅಮಿತ್‌ ಶಾಗೆ ಗೃಹ ಖಾತೆ; ಇಲ್ಲಿದೆ 72 ಸಚಿವರು ಹಾಗೂ ಖಾತೆಗಳ ಪಟ್ಟಿ

 ಅಮಿತ್‌ ಶಾಗೆ ಗೃಹ ಖಾತೆ; ಇಲ್ಲಿದೆ 72 ಸಚಿವರು ಹಾಗೂ ಖಾತೆಗಳ ಪಟ್ಟಿ
Digiqole Ad

ಅಮಿತ್‌ ಶಾಗೆ ಗೃಹ ಖಾತೆ; ಇಲ್ಲಿದೆ 72 ಸಚಿವರು ಹಾಗೂ ಖಾತೆಗಳ ಪಟ್ಟಿ

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್, ಧಾರವಾಡದ ಪ್ರಲ್ಹಾದ್ ಜೋಶಿ, ಮಂಡ್ಯದ ಎಚ್​ಡಿ ಕುಮಾರಸ್ವಾಮಿ ಅವರಿಗೆ ಕ್ಯಾಬಿನೆಟ್​ ದರ್ಜೆ ಸಚಿವ ಸ್ಥಾನ ಸಿಕ್ಕಿದ್ದರೆ, ಬೆಂಗಳೂರು ಉತ್ತರ ಕ್ಷೇತ್ರದ ಶೋಭಾ ಕರಂದ್ಲಾಜೆ ಹಾಗೂ ತುಮಕೂರು ಕ್ಷೇತ್ರದ ವಿ ಸೋಮಣ್ಣ ಅವರಿಗೆ ರಾಜ್ಯ ಖಾತೆ ಸಚಿವ ಸ್ಥಾನ ದೊರೆತಿದೆ.

  • ನರೇಂದ್ರ ಮೋದಿ: ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪರಮಾಣು ಶಕ್ತಿ, ಬಾಹ್ಯಾಕಾಶ, ಪ್ರಮುಖ ನೀತಿ ನಿರೂಪಣೆಗಳು ಹಾಗೂ ಯಾರಿಗೂ ಹಂಚಕೆಯಾಗದ ಖಾತೆಗಳು
  • ಅಮಿತ್ ಶಾ (ಬಿಜೆಪಿ- ಗುಜರಾತ್)- ಗೃಹ ಖಾತೆ
  • ರಾಜನಾಥ್ ಸಿಂಗ್ (ಬಿಜೆಪಿ- ಉತ್ತರ ಪ್ರದೇಶ)- ರಕ್ಷಣಾ ಖಾತೆ
  • ನಿತಿನ್ ಗಡ್ಕರಿ (ಬಿಜೆಪಿ- ಮಹಾರಾಷ್ಟ್ರ)- ರಾಷ್ಟ್ರೀಯ ಹೆದ್ದಾರಿ ಮತ್ತು ಭೂ ಸಾರಿಗೆ
  • ಜೆ.ಪಿ.ನಡ್ಡಾ (ಬಿಜೆಪಿ- ಹಿಮಾಚಲ ಪ್ರದೇಶ)- ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರ
  • ಶಿವರಾಜ್ ಸಿಂಗ್ ಚೌಹಾಣ್ (ಬಿಜೆಪಿ- ಮಧ್ಯಪ್ರದೇಶ )-‌ ಕೃಷಿ‌, ಗ್ರಾಮೀಣಾಭಿವೃದ್ಧಿ
  • ನಿರ್ಮಲಾ ಸೀತಾರಾಮನ್ (ರಾಜ್ಯಸಭೆ ಬಿಜೆಪಿ ಸದಸ್ಯೆ)- ಹಣಕಾಸು, ಕಾರ್ಪೊರೇಟ್‌ ವ್ಯವಹಾರಗಳು
  • ಎಸ್.ಜೈ ಶಂಕರ್ (ರಾಜ್ಯಸಭೆ ಬಿಜೆಪಿ ಸದಸ್ಯ)- ವಿದೇಶಾಂಗ ವ್ಯವಹಾರಗಳ ಖಾತೆ
  • ಮನೋಹರ ಲಾಲ್‌ ಖಟ್ಟರ್‌ (ಬಿಜೆಪಿ- ಹರಿಯಾಣ)- ಇಂಧನ‌ ಮತ್ತು ವಸತಿ
  • ಎಚ್‌.ಡಿ.ಕುಮಾರಸ್ವಾಮಿ (ಜೆಡಿಎಸ್‌- ಕರ್ನಾಟಕ)- ಉಕ್ಕು ಮತ್ತು ಬೃಹತ್‌ ಕೈಗಾರಿಕೆ
  • ಪಿಯೂಷ್‌ ಗೋಯಲ್‌ (ಬಿಜೆಪಿ- ಮಹಾರಾಷ್ಟ್ರ )- ವಾಣಿಜ್ಯ ಮತ್ತು ಕೈಗಾರಿಕೆ
  • ಧರ್ಮೇಂದ್ರ ಪ್ರಧಾನ್ (ಬಿಜೆಪಿ- ಒಡಿಶಾ): ಶಿಕ್ಷಣ‌
  • ಜಿತನ್ ರಾಮ್ ಮಾಂಝಿ (ಎಚ್‌ಎಎಂ- ಬಿಹಾರ)- ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ
  • ರಾಜೀವ್‌ ರಂಜನ್‌ ಸಿಂಗ್‌ (ಲಲನ್‌ ಸಿಂಗ್-ಜೆಡಿಯು-ಬಿಹಾರ)- ಪಂಚಾಯತ್‌ ರಾಜ್‌, ಮೀನುಗಾರಿಕೆ, ಪಶು ಸಂಗೋಪನೆ ಹಾಗೂ ಹೈನುಗಾರಿಕೆ
  • ಸರ್ಬಾನಂದ ಸೋನೊವಾಲ್‌‌ (ಬಿಜೆಪಿ- ಅಸ್ಸಾಂ): ಬಂದರು, ಜಲಸಾರಿಗೆ ಮತ್ತು ಜಲಮಾರ್ಗ
  • ರಾಮ್‌ ಮೋಹನ್‌ ನಾಯ್ಡು (ಟಿಡಿಪಿ-ಆಂಧ್ರಪ್ರದೇಶ)- ನಾಗರಿಕ ವಿಮಾನಯಾನ
  • ಪ್ರಲ್ಹಾದ್‌ ಜೋಶಿ (ಬಿಜೆಪಿ- ಕರ್ನಾಟಕ): ಆಹಾರ ಮತ್ತು ಗ್ರಾಹಕ ವ್ಯವಹಾರಗಳು, ನವೀಕರಿಸಬಹುದಾದ ಇಂಧನ, ಆಹಾರ ಮತ್ತು ನಾಗರಿಕ ಪೂರೈಕೆ
  • ಡಾ.ವೀರೇಂದ್ರ ಕುಮಾರ್ (ಬಿಜೆಪಿ-ಮಧ್ಯಪ್ರದೇಶ)- ಸಾಮಾಜಿಕ ನ್ಯಾಯ
  • ಜುವೆಲ್‌ ಒರಾಮ್‌ (ಬಿಜೆಪಿ- ಒಡಿಶಾ)- ಬುಡಕಟ್ಟು
  • ಗಿರಿರಾಜ್‌ ಸಿಂಗ್‌ (ಬಿಜೆಪಿ-ಬಿಹಾರ) -‌ ಜವಳಿ
  • ಅಶ್ವಿನಿ ವೈಷ್ಣವ್‌ (ಬಿಜೆಪಿ-ರಾಜಸ್ಥಾನ-ರಾಜ್ಯಸಭೆ ಸದಸ್ಯ) – ರೈಲ್ವೆ ಮತ್ತು ಮಾಹಿತಿ ಪ್ರಸಾರ, ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ
  • ಜ್ಯೋತಿರಾದಿತ್ಯ ಸಿಂಧಿಯಾ (ಬಿಜೆಪಿ-ಮಧ್ಯಪ್ರದೇಶ)- ಕಮ್ಯುನಿಕೇಷನ್ಸ್‌ ಮತ್ತು ಈಶಾನ್ಯ ಪ್ರದೇಶಾಭಿವೃದ್ಧಿ ಖಾತೆ
  • ಭೂಪೇಂದ್ರ ಯಾದವ್‌ (ಬಿಜೆಪಿ-ರಾಜಸ್ಥಾನ)- ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ
  • ಗಜೇಂದ್ರ ಸಿಂಗ್ ಶೇಖಾವತ್ (ಬಿಜೆಪಿ- ರಾಜಸ್ಥಾನ): ಪ್ರವಾಸೋದ್ಯಮ ಮತ್ತು ಸಂಸ್ಕೃತಿ
  • ಅನ್ನಪೂರ್ಣ ದೇವಿ (ಬಿಜೆಪಿ-ಜಾರ್ಖಂಡ್)-ಮಹಿಳಾ ಮತ್ತು ಮಕ್ಕಳ ಕಲ್ಯಾಣ
  • ಕಿರಣ್‌ ರಿಜಿಜು (ಬಿಜೆಪಿ- ಅರುಣಾಚಲ ಪ್ರದೇಶ)-‌ ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
  • ಹರ್ದೀಪ್ ಸಿಂಗ್ ಪುರಿ (ರಾಜ್ಯಸಭೆ ಬಿಜೆಪಿ ಸದಸ್ಯ-ಪಂಜಾಬ್)- ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ
  • ಡಾ.ಮನ್ಸುಖ್‌ ಮಂಡಾವೀಯ (ಬಿಜೆಪಿ-ಗುಜರಾತ್)‌: ಕಾರ್ಮಿಕ ಮತ್ತು ಉದ್ಯೋಗ, ಯುವಜನ ಮತ್ತು ಕ್ರೀಡೆ
  • ಜಿ.ಕಿಶನ್‌ ರೆಡ್ಡಿ (ಬಿಜೆಪಿ-ತೆಲಂಗಾಣ)- ಕಲ್ಲಿದ್ದಿಲು ಮತ್ತು ಗಣಿಗಾರಿಕೆ
  • ಚಿರಾಗ್‌ ಪಾಸ್ವಾನ್‌ (ಎಲ್‌ಜೆಪಿ-ಬಿಹಾರ)-‌ ಆಹಾರ ಸಂಸ್ಕರಣೆ
  • ಸಿ.ಆರ್‌.ಪಾಟೀಲ್‌ (ಬಿಜೆಪಿ-ಗುಜರಾತ್)-ಜಲಶಕ್ತಿ

ರಾಜ್ಯ ಖಾತೆ ಸಚಿವರು

  • ಜಿತಿನ್‌ ಪ್ರಸಾದ್‌ (ಬಿಜೆಪಿ-ಉತ್ತರ ಪ್ರದೇಶ)- ವಾಣಿಜ್ಯ, ಕೈಗಾರಿಕೆ, ವಿದ್ಯುತ್‌ ಮತ್ತು ಮಾಹಿತಿ ತಂತ್ರಜ್ಞಾನ
  • ಶ್ರೀಪಾದ್‌ ನಾಯ್ಕ್ (ಬಿಜೆಪಿ-ಗೋವಾ)- ವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಇಂಧನ
  • ಪಂಕಜ್‌ ಚೌಧರಿ (ಬಿಜೆಪಿ-ಉತ್ತರ ಪ್ರದೇಶ)-‌ ಹಣಕಾಸು
  • ಕ್ರಿಶನ್‌ ಪಾಲ್‌ (ಬಿಜೆಪಿ-ಹರಿಯಾಣ)- ಸಹಕಾರ
  • ರಾಮ್‌ದಾಸ್‌ ಅಠಾವಳೆ (ಆರ್‌ಪಿಐ-ಮಹಾರಾಷ್ಟ್ರ)- ಸಾಮಾಜಿಕ ನ್ಯಾಯ
  • ರಾಮನಾಥ್‌ ಠಾಕೂರ್‌ (ಜೆಡಿಯು-ಬಿಹಾರ)- ಕೃಷಿ ಮತ್ತು ರೈತರ ಕಲ್ಯಾಣ
  • ನಿತ್ಯಾನಂದ್‌ ರಾಯ್‌ (ಬಿಜೆಪಿ-ಬಿಹಾರ)- ಗೃಹ
  • ಅನುಪ್ರಿಯಾ ಪಟೇಲ್‌ (ಅಪ್ನಾದಳ್‌ (ಎಸ್‌)-ಉತ್ತರ ಪ್ರದೇಶ)- ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರ
  • ವಿ. ಸೋಮಣ್ಣ (ಬಿಜೆಪಿ-ಕರ್ನಾಟಕ)- ಜಲಶಕ್ತಿ ಹಾಗೂ ರೈಲ್ವೆ
  • ಪೆಮ್ಮಸಾನಿ ಚಂದ್ರಶೇಖರ್‌ (ಟಿಡಿಪಿ-ಆಂಧ್ರಪ್ರದೇಶ)- ಗ್ರಾಮೀಣಾಭಿವೃದ್ಧಿ, ಸಂವಹನ
  • ಎಸ್‌ಪಿ ಸಿಂಗ್‌ ಬಘೇಲ್‌ (ಬಿಜೆಪಿ-ಉತ್ತರ ಪ್ರದೇಶ)- ಮೀನುಗಾರಿಕೆ, ಪಶು ಸಂಗೋಪನೆ, ಪಂಚಾಯತ್‌ ರಾಜ್
  • ಶೋಭಾ ಕರಂದ್ಲಾಜೆ (ಬಿಜೆಪಿ-ಕರ್ನಾಟಕ)-‌ ಎಂಎಸ್‌ಎಂಇ, ಕಾರ್ಮಿಕ ಮತ್ತು ಉದ್ಯೋಗ
  • ಕೀರ್ತಿ ವರ್ಧನ್‌ ಸಿಂಗ್‌ (ಬಿಜೆಪಿ-ಉತ್ತರ ಪ್ರದೇಶ)- ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ, ವಿದೇಶಾಂಗ ಇಲಾಖೆ
  • ಬಿ.ಎಲ್‌.ವರ್ಮಾ (ಬಿಜೆಪಿ-ಉತ್ತರ ಪ್ರದೇಶ)- ಗ್ರಾಹಕ ರಕ್ಷಣೆ, ಆಹಾರ, ನಾಗರಿಕ ಪೂರೈಕೆ, ಸಾಮಾಜಿಕ ನ್ಯಾಯ
  • ಶಂತನು ಠಾಕೂರ್‌ (ಬಿಜೆಪಿ- ಪಶ್ಚಿಮ ಬಂಗಾಳ)- ಬಂದರು, ಜಲಸಾರಿಗೆ ಮತ್ತು ಜಲಮಾರ್ಗ
  • ಸುರೇಶ್‌ ಗೋಪಿ (ಬಿಜೆಪಿ-ಕೇರಳ)- ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಪ್ರವಾಸೋದ್ಯಮ
  • ಡಾ.ಎಲ್‌.ಮುರುಗನ್‌ (ಬಿಜೆಪಿ-ತಮಿಳುನಾಡು)- ಮಾಹಿತಿ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ಖಾತೆ
  • ಅಜಯ್‌ ತಮ್ಟಾ (ಬಿಜೆಪಿ-ಉತ್ತರಾಖಂಡ)- ರಸ್ತೆ ಸಾರಿಗೆ ಮತ್ತು ಹೆದ್ದಾರಿ
  • ಬಂಡಿ ಸಂಜಯ್‌ ಕುಮಾರ್‌ (ಬಿಜೆಪಿ-ತೆಲಂಗಾಣ)- ಗೃಹ
  • ಕಮಲೇಶ್‌ ಪಾಸ್ವಾನ್‌ (ಬಿಜೆಪಿ-ಉತ್ತರ ಪ್ರದೇಶ)- ಗ್ರಾಮೀಣಾಭಿವೃದ್ಧಿ
  • ಭಾಗೀರಥ್‌ ಚೌಧರಿ (ಬಿಜೆಪಿ-ರಾಜಸ್ಥಾನ)- ಕೃಷಿ ಮತ್ತು ರೈತರ ಕಲ್ಯಾಣ
  • ಸತೀಶ್‌ ಚಂದ್ರ ದುಬೆ (ಬಿಜೆಪಿ-ಬಿಹಾರ)- ಕಲ್ಲಿದ್ದಿಲು ಮತ್ತು ಗಣಿಗಾರಿಕೆ
  • ಸಂಜಯ್‌ ಸೇಠ್‌ (ಬಿಜೆಪಿ-ಜಾರ್ಖಂಡ್)- ರಕ್ಷಣಾ ಖಾತೆ
  • ರವನೀತ್‌ ಸಿಂಗ್‌ ಬಿಟ್ಟು (ಬಿಜೆಪಿ-ಪಂಜಾಬ್)- ಆಹಾರ ಸಂಸ್ಕರಣೆಗಳ ಉದ್ಯಮ ಮತ್ತು ರೈಲ್ವೆ
  • ದುರ್ಗಾದಾಸ್‌ ಉಯಿಕೆ (ಬಿಜೆಪಿ- ಮಧ್ಯಪ್ರದೇಶ)- ಬುಡಕಟ್ಟು ವ್ಯವಹಾರಗಳ ಇಲಾಖೆ
  • ರಕ್ಷಾ ನಿಖಿಲ್‌ ಖಡ್ಸೆ (ಬಿಜೆಪಿ-ಮಹಾರಾಷ್ಟ್ರ)- ಯುವಜನ ಮತ್ತು ಕ್ರೀಡೆ
  • ಸುಕಾಂತ ಮಜುಂದಾರ್‌ (ಬಿಜೆಪಿ-ಪಶ್ಚಿಮ ಬಂಗಾಳ)- ಶಿಕ್ಷಣ ಮತ್ತು ಈಶಾನ್ಯ ಪ್ರದೇಶಗಳ ಅಭಿವೃದ್ಧಿ
  • ಸಾವಿತ್ರಿ ಠಾಕೂರ್‌ (ಬಿಜೆಪಿ-ಮಧ್ಯಪ್ರದೇಶ)- ಮಹಿಳಾ ಮತ್ತು ಮಕ್ಕಳ ಕಲ್ಯಾಣ
  • ತೋಖನ್‌ ಸಾಹು (ಬಿಜೆಪಿ-ಛತ್ತೀಸ್‌ಗಢ)- ವಸತಿ ಮತ್ತು ನಗರಾಭಿವೃದ್ಧಿ
  • ಡಾ.ರಾಜ್‌ಭೂಷಣ್‌ ಚೌಧರಿ (ಬಿಜೆಪಿ-ಬಿಹಾರ)- ಜಲಶಕ್ತಿ
  • ಭೂಪತಿ ರಾಜು ಶ್ರೀನಿವಾಸ್‌ ವರ್ಮಾ (ಬಿಜೆಪಿ-ಆಂಧ್ರಪ್ರದೇಶ)- ಬೃಹತ್‌ ಕೈಗಾರಿಕೆ ಮತ್ತು ಉಕ್ಕು
  • ಹರ್ಷ ಮಲ್ಹೋತ್ರಾ (ಬಿಜೆಪಿ-ದೆಹಲಿ)- ರಸ್ತೆ ಸಾರಿಗೆ ಮತ್ತು ಹೆದ್ದಾರಿ ಹಾಗೂ ಕಾರ್ಪೊರೇಟ್‌ ವ್ಯವಹಾರಗಳ ಖಾತೆ
  • ನಿಮುಬೆನ್‌ ಬಾಂಭಣಿಯಾ (ಬಿಜೆಪಿ-ಗುಜರಾತ್)- ಗ್ರಾಹಕ ರಕ್ಷಣೆ, ಆಹಾರ ಮತ್ತು ನಾಗರಿಕ ಪೂರೈಕೆ
  • ಮುರಳೀಧರ್‌ ಮೊಹೊಲ್‌ (ಬಿಜೆಪಿ-ಮಹಾರಾಷ್ಟ್ರ)- ಸಹಕಾರ ಮತ್ತು ನಾಗರಿಕ ವಿಮಾನಯಾನ
  • ಜಾರ್ಜ್‌ ಕುರಿಯನ್‌ (ಬಿಜೆಪಿ-ಕೇರಳ)- ಅಲ್ಪಸಂಖ್ಯಾತ ವ್ಯವಹಾರಗಳು, ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ
  • ಪವಿತ್ರ ಮಾರ್ಗರಿಟಾ (ಬಿಜೆಪಿ-ಅಸ್ಸಾಂ)- ವಿದೇಶಾಂಗ ವ್ಯವಹಾರಗಳು ಮತ್ತು ಜವಳಿ
Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ