ವಯನಾಡ್ ದುರಂತ: ಮೃತರ ಕುಟುಂಬಗಳಿಗೆ ರೂ.6 ಲಕ್ಷ ಪರಿಹಾರ ಘೋಷಿಸಿದ ಸಿಎಂ ಪಿಣರಾಯಿ ವಿಜಯನ್.
ವಯನಾಡ್ ದುರಂತ: ಮೃತರ ಕುಟುಂಬಗಳಿಗೆ ರೂ.6 ಲಕ್ಷ ಪರಿಹಾರ ಘೋಷಿಸಿದ ಸಿಎಂ ಪಿಣರಾಯಿ ವಿಜಯನ್.
ತಿರುವನಂತಪುರ: ಕೇರಳದ ವಯನಾಡು ಭೂಕುಸಿತದಲ್ಲಿ ಇದುವರೆಗೆ ಸುಮಾರು 437 ಮೃತದೇಹಗಳು ಹಾಗು ದೇಹ ಭಾಗಗಳು ಪತ್ತೆಯಾಗಿದೆ. ಈ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಸರಕಾರವು ರೂ.6 ಲಕ್ಷ ನೀಡಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ರಾಜ್ಯ ಪರಿಹಾರ ನಿಧಿಯಿಂದ 4 ಲಕ್ಷ ರೂ. ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 2 ಲಕ್ಷ ರೂ. ಶೇ.60 ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವವರಿಗೆ ರೂ.75000 ರೂ., ಶೇ.40 – 50 ರವರೆಗೆ ಅಂಗವೈಕಲ್ಯದಿಂದ ಬಳಲುತ್ತಿರುವವರಿಗೆ CMDRF ನಿಂದ ರೂ. 50000 ಮಂಜೂರು ಮಾಡಲಾಗುವುದು ಮತ್ತು ಗಂಭೀರ ಗಾಯಗೊಂಡವರಿಗೆ ಹೆಚ್ಚುವರಿಗೆ ರೂ.50000 ನೀಡಲಾಗುವುದು.
ಈ ಸುದ್ದಿಯನ್ನು ಓದಿದ್ದೀರಾ.?ಮಂಗಳೂರಿನಲ್ಲಿ ಪಿಜಿಯಿಂದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಕಳವು.
ಬಾಡಿಗೆ ಮನೆಗೆ ತೆರಳಬೇಕಾದವರಿಗೆ ಪರಿಹಾರ ನಿಧಿಯಿಂದ ಪ್ರತಿ ಕುಟಂಬಕ್ಕೆ ರೂ. 6 ಸಾವಿರದವರೆಗೆ ನೀಡಲಾಗುವುದು. ಸಂಬಂಧಿಕರ ಮನೆಗೆ ತೆರಳುವವರಿಗೂ ಇದು ಸಿಗಲಿದೆ ಎಂದು ಮಾಹಿತಿ ನೀಡಿದರು. ಉಚಿತ ವಸತಿ ಕಲ್ಪಿಸುವುದು ಸರಕಾರದ ಗುರಿ ಎಂದು ಹೇಳಿದ ಮುಖ್ಯಮಂತ್ರಿ, ಖಾಸಗಿ ವ್ಯಕ್ತಿಗಳು ಉಚಿತವಾಗಿ ನೀಡುವ ಸರಕಾರಿ ಮತ್ತು ಸಾರ್ವಜನಿಕ ಒಡೆತನದ ಅಂತಹ ಮನೆಗಳಿಗೆ ಬಾಡಿಗೆ ಅಗತ್ಯವಿಲ್ಲ ಮತ್ತು ಉಳಿದ ಮೊತ್ತವನ್ನು ಅರ್ಧ ಪ್ರಾಯೋಜಿತ ಮನೆಗಳಿಗೆ ಪಾವತಿಸಲಾಗುವುದು ಎಂದು ಹೇಳಿದರು. ದುರಂತದಲ್ಲಿ ನಾಪತ್ತೆಯಾದ ಅವಲಂಬಿತರಿಗೂ ನೆರವು ನೀಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಈ ಸುದ್ಧಿ ಓದಿದ್ದೀರಾ: ಸಾಮಾನ್ಯರಿಗೂ ಗೆಲ್ಲಬಹುದು ಸ್ವಂತ ಮನೆ!…
Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.