• 21 ನವೆಂಬರ್ 2024

ಇನ್ಮುಂದೆ ಭಾರತದಲ್ಲಿ ಓಡಾಡಲಿದೆ ಹೈಡ್ರೋಜನ್ ಚಾಲಿತ ರೈಲು!

 ಇನ್ಮುಂದೆ ಭಾರತದಲ್ಲಿ ಓಡಾಡಲಿದೆ ಹೈಡ್ರೋಜನ್ ಚಾಲಿತ ರೈಲು!
Digiqole Ad

ಇನ್ಮುಂದೆ ಭಾರತದಲ್ಲಿ ಓಡಾಡಲಿದೆ ಹೈಡ್ರೋಜನ್ ಚಾಲಿತ ರೈಲು!

ನವದೆಹಲಿ: ಭಾರತದಲ್ಲಿ ಮೊದಲ ಪರಿಸರ ಸ್ನೇಹಿ ಹೈಡ್ರೋಜನ್ ಚಾಲಿತ ರೈಲು ಶೀಘ್ರವೇ ಓಡಾಡುವ ಸಾಧ್ಯತೆ ಇದೆ. ಜರ್ಮನಿಯ ಟಿಯುವಿ – ಎಸಯುಡಿ ಕಂಪೆನಿ ಮೂಲಕ ರೈಲಿನ ಆಡಿಟ್ ನಡೆಸಲು ರೈಲ್ವೆ ನಿರ್ಧರಿಸಿದ್ದು, ಡಿಸೆಂಬರ್ ನಲ್ಲಿ ಪ್ರಾಯೋಗಿಕ ಸಂಚಾರಕ್ಕೆ ಮುಂದಾಗಿದೆ. ಇದರೊಂದಿಗೆ ಹೈಡ್ರೋಜನ್ ಚಾಲಿತ ರೈಲು ಹೊಂದಿರುವ ವಿಶ್ವದ ಐದನೇ ದೇಶವೆಂಬ ಕೀರ್ತಿಗೆ ಭಾರತ ಭಾಜನವಾಗಲಿದೆ. ಚೀನಾ, ಸ್ವೀಡನ್, ಫ್ಯಾನ್ಸ್, ಜರ್ಮನಿ ದೇಶಗಳಲ್ಲಿ ಈಗಾಗಲೇ ಈ ರೈಲು ಓಡುತ್ತಿದೆ. ಭಾರತದಲ್ಲಿ ಇದರ ಪ್ರಾಯೋಗಿಕ ಪರೀಕ್ಷೆ ಹರಿಯಾಣದ ಜಿಂದ್-ಸೋನಿಪತ್ ಮಾರ್ಗದಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ