• 21 ನವೆಂಬರ್ 2024

ಕಾಸರಗೋಡು ದಸರಾ ಕವಿಸಮ್ಮೇಳನ -ಪ್ರಶಸ್ತಿ ಪ್ರದಾನ ಸಂಪನ್ನ :

 ಕಾಸರಗೋಡು ದಸರಾ ಕವಿಸಮ್ಮೇಳನ -ಪ್ರಶಸ್ತಿ ಪ್ರದಾನ ಸಂಪನ್ನ :
Digiqole Ad

ಕಾಸರಗೋಡು ದಸರಾ ಕವಿಸಮ್ಮೇಳನ -ಪ್ರಶಸ್ತಿ ಪ್ರದಾನ ಸಂಪನ್ನ :

ಪಾಂಗೋಡು ದೇವಾಲಯದಲ್ಲಿ ಕಾಸರಗೋಡು ದಸರಾ ಕವಿಗೋಷ್ಠಿ ಮತ್ತು ವಿವಿಧ ಪ್ರಶಸ್ತಿ ಪ್ರದಾನ :
ಕಾಸರಗೋಡು: ಕನ್ನಡ ಭವನ ಗ್ರಂಥಾಲಯ ಕಾಸರಗೋಡು ಮತ್ತು ಶಿವಗಿರಿ ಸಾಹಿತ್ಯ ವೇದಿಕೆ ಅಡೂರು ಇದರ ಸಹಯೋಗದಲ್ಲಿ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಾಸರಗೋಡು ದಸರಾ ಕವಿಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಇದರಂಗವಾಗಿ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ ಸಮಿತಿ ವತಿಯಿಂದ ಹಿರಿಯ ಸಾಹಿತಿ ,ನಿವೃತ್ತ ಶಿಕ್ಷಕ ವಿ.ಬಿ ಕುಳಮರ್ವ, ಲಲಿತಾಲಕ್ಷ್ಮಿ ಕುಳಮರ್ವ ದಂಪತಿಯರಿಗೆ ಕಾಸರಗೋಡು ದಸರಾ ಸನ್ಮಾನ ನಡೆಯಿತು. ಕನ್ನಡ ಭವನ ಮತ್ತು ಗ್ರಂಥಾಲಯದ ಅಧ್ಯಕ್ಷ ವಾಮನ್ ರಾವ್ ಬೇಕಲ್, ಸಂಧ್ಯಾರಾಣಿ ಟೀಚರ್ ಕುಳಮರ್ವ ದಂಪತಿಗಳಿಗೆ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಅಭಿನಂದಿಸಿದರು.
ಡಾ .ಕೆ.ಜಿ ವೆಂಕಟೇಶ್ ಶಿವಮೊಗ್ಗ, ರಾಧಾಕೃಷ್ಣ ಕೆ. ಉಳಿಯತಡ್ಕ ,ಪಿ.ವಿ ಪ್ರದೀಪ್ ಕುಮಾರ್ ಮಂಗಳೂರು ,ಡಾ. ಕೊಳಚಪ್ಪೆ ಗೋವಿಂದ ಭಟ್, ಲಕ್ಷ್ಮಿ ವಿ ಭಟ್ ಮಂಜೇಶ್ವರ, ಜಯಾನಂದ ಪೆರಾಜೆ,ನಾಟಕಭಾರ್ಗವ ಕೆಂಪರಾಜು ಮೈಸೂರು, ವಿರಾಜ್ ಅಡೂರು, ಸೀತಾ ಲಕ್ಷ್ಮಿ ವರ್ಮ ವಿಟ್ಲ ,ಶಾಂತಾ ಪುತ್ತೂರು ,ರತ್ನಾ ಕೆ ಭಟ್ ತಲಂಜೇರಿ,ಡಾ.ಶೈಲಾ ಕೆ.ಎನ್ ಮಂಗಳೂರು ಇವರಿಗೆ ‘ಕಾಸರಗೋಡು ದಸರಾ ಕವಿ ಶ್ರೇಷ್ಠ ಪ್ರಶಸ್ತಿ 2024’ ನೀಡಿ ಗೌರವಿಸಲಾಯಿತು.
ರೇಖಾ ಸುದೇಶರಾವ್ ಮಂಗಳೂರು, ಅನ್ನಪೂರ್ಣ ಎನ್ ಕುತ್ತಾಜೆ ,ಕುಸುಮಾಕರ ಅಂಬೆಕಲ್ಲು, ರವೀಂದ್ರನ್ ಪಾಡಿ, ವಿದ್ಯಾ ರಕ್ಷಿತ್ ಪುತ್ತೂರು ,ರೇಖಾ ರೋಶನ್ ಮಲ್ಲಿಗೆ ಮಾಡು ,ಚಂಚಲಾಕ್ಷಿ ಶ್ಯಾಮಪ್ರಕಾಶ್ ಕಾಸರಗೋಡು, ಮೇಘ ಶಿವರಾಜ್ ಬೀರಂತ ಬೈಲು ,ಅನಿತಾ ಶೆಣೈ ಮಂಗಳೂರು, ನಿರ್ಮಲಾ ಶೇಷಪ್ಪ ಖಂಡಿಗೆ ,ಶ್ರೀಹರಿ ಭಟ್ ಪೆಲ್ತಾಜೆ, ಸುಭಾಷಿಣಿ ಚಂದ್ರ ಬೇಕೂರು ಇವರಿಗೆ ಕಾಸರಗೋಡು ದಸರಾ ಕವಿರತ್ನ ಪ್ರಶಸ್ತಿ 2024 ನೀಡಿ ಅಭಿನಂದಿಸಲಾಯಿತು.
ಶಿವಾನಿ ಕೆ. ಪೈವಳಿಕೆ, ಪ್ರಿಯಾ ಬಾಯಾರು, ಸುಜಿತ್ ಕುಮಾರ್ ಬೇಕೂರು,
ಕಲಾವತಿ ಟೀಚರ್ ಕುಂಬಳೆ, ಹಿತೇಶ್ ಕುಮಾರ್ ನೀರ್ಚಾಲು, ಗಿರೀಶ್ ಪಿ.ಎಂ ಚಿತ್ತಾರಿ, ಸುಶೀಲಾ ಕೆ ಪದ್ಯಾಣ, ಸಂಧ್ಯಾ ಗೀತಾ ಬಾಯಾರು, ಗಾಯತ್ರಿ ಪಳ್ಳತ್ತಡ್ಕ, ಗಿರೀಶ್ ಪೆರಿಯಡ್ಕ ಉಪ್ಪಿನಂಗಡಿ,ಶ್ವೇತಾ.ಡಿ ಬಂಟ್ವಾಳ ಇವರಿಗೆ ಕಾಸರಗೋಡು ದಸರಾ ಸಾಧಕ ಪ್ರಶಸ್ತಿ 2024 ನೀಡಿ ಪುರಸ್ಕರಿಸಲಾಯಿತು.
ಬಳಿಕ ಕಾಸರಗೋಡು ದಸರಾ ಕವಿಗೋಷ್ಠಿ ನಡೆಯಿತು 23 ಮಂದಿ ಕವಿಗಳು ಕವನವಾಚನ ಮಾಡಿದರು ಸಾಹಿತಿ ವಿ. ಬಿ ಕುಳಮರ್ವ ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಶ್ರೀಮತಿ ಲಲಿತಾ ಲಕ್ಷ್ಮಿ ಕುಳಮರ್ವ,ವಿಜ್ಡಮ್ ನೆಟ್ವರ್ಕ್ ನಿರ್ವಾಹಕ ಪ್ರಕಾಶ್ಚಂದ್ರ ಕೆ.ಪಿ,ಬಿ ಇ ಎಂ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ರಾಜೇಶ್ಚಂದ್ರ ಕೆ.ಪಿ,ವಿಜ್ಡಂ ಸಂಸ್ಥೆಯ ಸಿ ಇ ಒ ಅಭಿಲಾಷ್ ಕ್ಷತ್ರಿಯ,ಶ್ರೀಮತಿ ಸಂಧ್ಯಾರಾಣಿ ಟೀಚರ್,ರಾಜೇಶ್ ಅಣಂಗೂರು ಉಪಸ್ಥಿತರಿದ್ದರು.
ಕಾಸರಗೋಡು ಜಿಲ್ಲೆಯ ಆಯ್ದ ಪದವಿ ಕಾಲೇಜಿನ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಭರವಸೆಯ ಬೆಳಕು ಪ್ರಶಸ್ತಿಗಳನ್ನು ವಿತರಿಸಲಾಯಿತು . ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ದೀಕ್ಷಿತಾ, ಕೃಷ್ಣರಾಜ್, ಮೀನಾಕ್ಷಿ ವಿ, ಕಾಸರಗೋಡು ಸರಕಾರಿ ಕಾಲೇಜಿನ ಸ್ನೇಹಾ ಎಸ್. ವಿ, ಆಯಿಶತ್ ಫರ್ಹಾ ಸುಲ್ತಾನ, ಪೆರ್ಲ ನಾಲಂದ ಕಾಲೇಜಿನ ಅರ್ಚನಾ.ಕೆ, ಗಾನಸಮೃದ್ಧಿ.ಕೆ, ಪೆರಿಯ ಕಾಲೇಜಿನ ಮಾಳವಿಕಾ .ಎಂ, ಪ್ರಣವ್ ಎಂ.ವಿ, ಅಕ್ಷತಾ.ಪಿ, ಸೀತಾಂಗೋಳಿ ಮಾಲಿಕ್ ದಿನಾರ್ ಕಾಲೇಜಿನ ಅಹಮ್ಮದ್ ಶೆಹ್ಸಾದ್,ಸಲ್ವಾ ಅಬ್ದುಲ್ ಖಾದರ್ ಫೈಜಿ ಪ್ರಶಸ್ತಿಗಳನ್ನು ಪಡೆದುಕೊಂಡರು.
ಅಡೂರು ಶಿವಗಿರಿ ಸಾಹಿತ್ಯ ವೇದಿಕೆಯ ಅಧ್ಯಕ್ಷ ವಿರಾಜ್ ಅಡೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ಭವನ ಗ್ರಂಥಾಲಯದ ಅಧ್ಯಕ್ಷ ವಾಮನ ರಾವ್ ಬೇಕಲ್ ಸ್ವಾಗತಿಸಿದರು.ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಭವನದ ಕಾರ್ಯದರ್ಶಿ ವಸಂತ ಕೆರೆಮನೆ ಧನ್ಯವಾದ ಸಮರ್ಪಿಸಿದರು.

ಕವಿಗೋಷ್ಠಿ ಮತ್ತು ಪ್ರಶಸ್ತಿಗಳು ಕವಿಗಳಿಗೆ ಸ್ಫೂರ್ತಿದಾಯಕ :ವಿ ಬಿ ಕುಳಮರ್ವ :
ಕವಿಗೋಷ್ಠಿಗಳು ಮತ್ತು ಕವಿಗಳಿಗೆ ದೊರಕುವ ಪ್ರಶಸ್ತಿಗಳು ಕವಿಗಳಲ್ಲಿರುವ ಸೃಜನಶೀಲತೆಗೆ ಮತ್ತಷ್ಟು ಪ್ರೋತ್ಸಾಹ ನೀಡುತ್ತವೆ. ಅವರಿಗೆ ಇನ್ನಷ್ಟು ಉತ್ತಮ ಕೃತಿಗಳನ್ನು ಸೃಜಿಸಲು ಇದು ಸ್ಫೂರ್ತಿದಾಯಕವಾಗುತ್ತದೆ ಎಂದು ಕಾಸರಗೋಡು ದಸರಾ ಕವಿಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ವಿ.ಬಿ ಕುಳಮರ್ವ ಹೇಳಿದರು.
—————————–

ವಿವಿಧೆಡೆಗಳ ಕವಿಗಳ ಅಪೂರ್ವ ಮಿಲನ :

ಮೈಸೂರು,ಶಿವಮೊಗ್ಗ ,ಮಂಗಳೂರು,ಪುತ್ತೂರು,ವಿಟ್ಲ,ಉಪ್ಪಿನಂಗಡಿ,ಬಂಟ್ವಾಳ,ಮಂಜೇಶ್ವರ,ಕಾಸರಗೋಡು ಸೇರಿದಂತೆ ಕನ್ನಡ ನಾಡಿನ ನಾನಾಕಡೆಗಳಿಂದ ಬಂದ ಕವಿಗಳು ಕಾಸರಗೋಡು ದಸರಾ ಕವಿಗೋಷ್ಠಿಯಲ್ಲಿ ಪಾಲ್ಗೊಂಡರು

 

WWW.GOLDFACTORYNEWS.COM

Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.

 

Digiqole Ad

ಈ ಸುದ್ದಿಗಳನ್ನೂ ಓದಿ