ಮರೆತು ಹೋಗುತ್ತಿರುವ..ಅಥವಾ… ಮರೆತೇ ಹೋಗುತ್ತಿರುವ..ಜಾನುವರ್ ಜಾತ್ರೆ, ಕುಲ್ಕುಂದಜಾತ್ರೆ…!
ಮರೆತು ಹೋಗುತ್ತಿರುವ..ಅಥವಾ…
ಮರೆತೇ ಹೋಗುತ್ತಿರುವ..ಜಾನುವರ್ ಜಾತ್ರೆ, ಕುಲ್ಕುಂದಜಾತ್ರೆ…!
ಬಾಲ್ಯದಿಂದ ನನಗೆ ತಿಳಿದಮಟ್ಟಿಗೆ ನಮ್ಮ ಸುಬ್ರಹ್ಮಣ್ಯ ಜಾತ್ರೆ ಶುರುವಾಗುತ್ತಿದ್ದಿದ್ದೇ ಸುಬ್ರಹ್ಮಣ್ಯದ ಕುಲ್ಕುಂದದಲ್ಲಿನ ಜಾನುವಾರು ಜಾತ್ರೆಯಿಂದ(ಪುರಾಣ ಇತಿಹಾಸದಲ್ಲಿ ಷಷ್ಠಿಗು ಇದಕ್ಕೂ ಕತೆಗಳಿವೆ,ವರ್ಣಾರ ಪಂಜುರ್ಲಿ ದೈವದ ಪಾಡ್ದನದಲ್ಲಿ ಇಂದಿಗೂ ಕುಲ್ಕುಂದ ಜಾನುವಾರು ಜಾತ್ರೆಯ ಉಲ್ಲೇಖವಿದೆ)..
ನಾಗರಪಂಚಮಿಯಿಂದ ಹಬ್ಬಗಳು ಶುರುವಾದರೆ ಅಷ್ಟಮಿ,ದಸರಾ, ನಂತರ ದೀಪಾವಳಿ ಹಾಗೆ ನಂತರ ಬರುವ ಹುಣ್ಣಿಮೆಯಿಂದ ಮುಂದೆಬರುವುದು ಲಕ್ಷದೀಪ ಚೌತಿ,ಪಂಚಮಿ,ಷಷ್ಠಿ ಹೀಗೆ…
ದೀಪಾವಳಿಯ ನಂತರಬರುವ ಹುಣ್ಣಿಮೆಯನ್ನು ಜಾನುವಾರು ಹುಣ್ಣಿಮೆ ಅಂತ ನನ್ನ ಅಜ್ಜಂದಿರು ಹೇಳುತ್ತಿದ್ದದು ನೆನಪಿದೆ.. ಜಾನುವಾರು ಜಾತ್ರೆಯನ್ನು ಕುಲ್ಕುಂದ ಜಾತ್ರೆ ಹೀಗೆ ಕರೆಯುತ್ತಿದ್ದದು ನೆನಪು.
ಹಿರಿಯರು ಹೇಳಿಕೊಂಡು ಬಂದಂತಹ “ಕುಲ್ಕುಂದಗ್(ಸುಬ್ರಹ್ಮಣ್ಯಗ್) ಪೋಂಡಲ ಅಂಚಿನ ಜೋಡಿತಿಕ್ಕಂದ್” “ಸುಬ್ರಹ್ಮಣ್ಯದ ಜೋಡಿ” ಎನ್ನುವ ಮಾತು ಇಲ್ಲಿಂದಲೆ ಉಗಮ..
ಸುಬ್ರಹ್ಮಣ್ಯದ ಜಾತ್ರೆಯ ಸಂತೆ ಆರಂಭವಾಗುವುದೆ ಇಲ್ಲಿಂದ ಹೊರಿಯಕ್ಕಿ, ಖರ್ಜೂರ, ಸಕ್ಕರೆ ಮಿಠಾಯಿ; ಚಿಕ್ಕ ಚಿಕ್ಕ ಅಂಗಡಿಗಳು ಬಿದ್ದರೆ ಅಧಿಕವಾಗಿ ಕಂಬಳಿ ರಗ್ಗು
ಉಲ್ಲನ್ ಟೋಪಿ, ಮಂಕಿ ಕ್ಯಾಪ್ ಗಳು, ಶಾಲು, ಕಂಬಳಿ ರಗ್ಗ್ ಸುತ್ತಹತ್ತೂರಿಗಿಂತ ಸುಬ್ರಹ್ಮಣ್ಯ ದಲ್ಲೇ ಪ್ರಸಿದ್ಧಿಕೂಡ, ಇದೇ ಮಾಸದಲ್ಲೇ ಮೈನಡುಗುವ ಚಳಿಯು ಇರುತ್ತಿತ್ತು ಹೊಳೆಯಲ್ಲಿ ಮೀನು ಹಿಡಿಯುವ ಉತ್ಸಾಹಿಗಳಿಗೆ ಮೀನಿನ ಬಲೆಯ ಮಾರಟವಹಿವಾಟುಗಳು ಕೂಡ ಇಲ್ಲಿ ಲಭ್ಯವಿತ್ತು…
ಮುಖ್ಯಭೂಮಿಕೆಯಲ್ಲಿ,
ಮೊದಲೆಲ್ಲ ಈ ಕುಲ್ಕುಂದಮಜಲಿನಿಂದಲೆ ಘಟ್ಟದ ಮೇಲಿನ ಊರಿಗೆ,ಪಕ್ಕದ ರಾಜ್ಯ ಕೇರಳಕ್ಕೆ ಹಾಗು ಹಲವಾರು ದೂರದೂರಿಗೆ ಉಳುಮೆಗೆ,ಹೈನುಗಾರಿಕೆಗೆಂದು ಜಾನುವಾರುಗಳನ್ನು ಖರೀದಿಮಾಡಿ ಹೊಡೆದುಕೊಂಡು ನಡಿಗೆಯಲ್ಲೆ ಹೋಗುತ್ತಿದ್ದರು ಕಾಲ ಕ್ರಮೇಣದ ನಂತರ ವಾಹನಗಳಲ್ಲಿ ಶುರುವಾಗಿದ್ದು..ಹಾಗೆ ದನಕರುಗಳನ್ನು ಕಾಲ್ನಡಿಗೆಯಲ್ಲೇ ಹೊಡೆದುಕೊಂಡು ಹೋಗುವಾಗ ಸಂಜೆ ಹೊತ್ತಿಗೆ ಕತ್ತಲಾಗುತ್ತಿದ್ದಂತೆ ನಮ್ಮ ಮನೆ ಮುಖ್ಯರಸ್ತೆಯ ಪಕ್ಕದಲ್ಲೇ ಇರುವುದರಿಂದ ದನಗಳನ್ನು ಕಟ್ಟಿ ಹಾಕಿ ದನಕರುಗಳಿಗೆ ನಮ್ಮ ಮನೆಯಿಂದ ಮೇವು ನೀರುಗಳನ್ನೆಲ್ಲ ಕೇಳಿ ಕೊಟ್ಟು ಹಾಲುಕರೆದು ಹಾಲನ್ನು ಮನೆಮಂದಿಗೆ ಕೊಟ್ಟು ದಾರಿಯಲ್ಲೋ
ಅಟ್ಟೊಳಿಗೆ ,ಸೋಗೆ ಮಂಟಮೆಯಲ್ಲೋ ಮಲಗಿ ರಾತ್ರಿಕಳೆದು ಮುಂಜಾನೆ ಬೇಗೆದ್ದು ಹೋದ ಆ ದಿನಗಳು ನಿನ್ನೆ ಮೊನ್ನೆ ಕಳೆದಂತಿದೆ..
ಕುಲ್ಕುಂದಮಜಲು ಈಗ ಎಲ್ಲಾ ವ್ಯಾಪಾರಿಕರಣ ಹಾಗು ಸೈಟ್, ನಿವೇಶನಗಳಿಂದ ಮುಚ್ಚಿಹೋಗಿದೆ…
ಅಂದೊಂದು ಕಾಲದಲ್ಲಿ ಸಾವಿರಾರು ದನಕರು ಹೋರಿ ಎಮ್ಮೆ ಕೋಣಗಳಂತ ಜಾನುವಾರುಗಳು ಮಜಲಿನತುಂಬೆಲ್ಲಾ ಆವರಿಸಿ ಕಣ್ಣುಹಾಯಿಸಿದರೆ ನಿಲುಕದಷ್ಟು ದೂರಕ್ಕು ತುಂಬಿಕೊಂಡಿತ್ತು..
ಹೇಳಿಕೊಂಡು ಹೋಗೊದಾದ್ರೆ ತುಂಬಾನೆ ಇದೆ.,
ಕೊನೆಯದಾಗಿ- ನಾವು ಶಾಲಾಕಾಲೇಜು ಹೋಗುವ ಸಮಯದಲ್ಲಿ ತರಗತಿಗೆ ಚಕ್ಕರ್ ಹೊಡೆದು ಕುಮಾರಧಾರ ಹೊಳೆದಾಟಿ ಇದೇ ಜಾನುವಾರು ಜಾತ್ರೆಗೆ ಕುಲ್ಕುಂದಮಜಲಿಗೆ ಹೋಗುತ್ತಿದ್ದೆವು, ಕೆಲವೊಮ್ಮೆ ಅಧ್ಯಾಪಕರು ಜೋರುಮಾಡಿದ್ದು ಉಂಟು.,ಕೆಲವೊಮ್ಮೆ ಕ್ಷಮೆಕೊಟ್ಟಿದ್ದು ಉಂಟು ಕಾರಣ ಇಷ್ಟೆ ಇಂತಹ ಜಾನುವಾರು ಜಾತ್ರೆ ಹತ್ತಿರದ ಹತ್ತೂರಿನಲ್ಲಿ ಎಲ್ಲೂ ಇಲ್ಲಾ ಹಾಗು ದೇಶದ ಹಲವಾರು ಬೇರೆಬೇರೆ ಜಾತಿ ಪ್ರಬೇಧ,ತಳಿಗಳ ಜಾನುವಾರುಗಳ ಸೇರುವಿಕೆ ಮತ್ತೆಲ್ಲು ಕಾಣುತ್ತಿರಲಿಲ್ಲ ಎನ್ನುವ ಕಾರಣಕ್ಕಾಗಿ…
ಇದೇ ಕುಲ್ಕುಂದ ಮಜಲಿನಲ್ಲಿ ಜಾನುವಾರು ತಳಿಗಳ ಅಧ್ಯಾಯನಕ್ಕೆ ದೇಶದ ಹಲವಾರು ಭಾಗಗಳಿಂದ ಬರುತ್ತಿದ್ದವರ ಸಂಖ್ಯೆಯು ಆ ಕಾಲದಲ್ಲಿ ಬಹಳಷ್ಟು ಇತ್ತು..
ಅದು ಈಗ ನೆನಪು ಮಾತ್ರ.
ಇಂತ ಹಲವಾರು ಇತಿಹಾಸ ಹಾಗು ವೈವಿಧ್ಯಮಯ ನೆನಪುಗಳಿಗೆ ಸಾಕ್ಷಿಯಾದಂತಹ ಜಾನುವಾರು ಜಾತ್ರೆ ಪುನಃ ಪ್ರಾರಂಭವಾದರೆ ಮತ್ತಷ್ಟು ಖುಷಿಯ ವಿಚಾರ ಇನ್ನೊಂದಿಲ್ಲ…
ಕಾರ್ತಿಪದೇಲ.
ಚಿತ್ರ- ೨೦೧೧ರದ್ದು ಫೇಸ್ಬುಕ್ ಕೃಪೆ.