• 15 ಜೂನ್ 2024

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ವಿಶೇಷ ಕಾರ್ಯಕಾರಣಿ

 ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ವಿಶೇಷ ಕಾರ್ಯಕಾರಣಿ
Digiqole Ad

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ವಿಶೇಷ ಕಾರ್ಯಕಾರಣ

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ವತಿಯಿಂದ ವಿಶೇಷ ಕಾರ್ಯಕಾರಣಿ ಸಭೆಯು ಪೆರುವಾಜೆಯ ಜೆ.ಡಿ ಆಡಿಟೋರಿಯಂನಲ್ಲಿ ಇಂದು ನಡೆಯಿತು.ಶಾಸಕರಾದ ಭಾಗೀರಥಿ ಮುರುಳ್ಯ  ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಘಾಟನಾ ಮಾತುಗಳನ್ನು ಆಡಿದ ನೂತನ ಶಾಸಕರು

ನಾನು ಇವತ್ತು ದೀಪವನ್ನು ಬೆಳಗಿಸಿ ಉದ್ಘಾಟನೆ ‌ಮಾಡಲು ಅವಕಾಶ ಮಾಡಿಕೊಟ್ಟ ಎಲ್ಲಾ ಕಾರ್ಯಕರ್ತರಿಗೆ ತನ್ನ ವೈಯಕ್ತಿಕ ನೆಲೆಯ ಧನ್ಯವಾದಗಳನ್ನು ಅರ್ಪಿಸಿದರು. ಇವತ್ತು ಪಕ್ಷ ದೊಡ್ಡ ಹೆಮ್ಮರವಾಗಿ ಬೆಳೆಯಲು ಕಾರಣಕರ್ತರಾದ ಹಿರಿಯರ ಬಲಿದಾನವನ್ನು ನೆನೆಸಿಕೊಂಡರು. ಶಾಸಕ ಸ್ಥಾನಕ್ಕೆ ಆಭ್ಯರ್ಥಿಯಾಗಿ ನನನ್ನು ಮಂಡಲ ಸಮಿತಿಯು  ಗಟ್ಟಿ‌ನಿರ್ಧಾರದಿಂದ ಆಯ್ಕೆ ಮಾಡಿದೆ ಶಾಸಕ ಸ್ಥಾನಕ್ಕೆ ನ್ಯಾಯ ಕೊಡಿಸುವ ಕೆಲಸವನ್ನು ಖಂಡಿತವಾಗಿಯೂ ಕೆಲಸಮಾಡುತ್ತೆನೆ ಎಂದು ತಿಳಿಸಿದರು,ಈ ಸಂದರ್ಭದಲ್ಲಿ ತನ್ನ ಕಾರ್ಯಕ್ಷೇತ್ರದಲ್ಲಿ ಬೇರೆ ಕ್ಷೇತ್ರದ ಶಾಸಕರು ಅವರ ಪಕ್ಷದ ಚಟುವಟಿಕೆಗಳನ್ನು ಮಾಡಲಿ,ನನ್ನ ಕ್ಷೇತ್ರದಲ್ಲಿ ಏನು ಕೆಲಸ ಮಾಡಬೇಕು ಎಂದು ನನಗೆ ಗೊತ್ತಿದೆ. ಅಭಿವೃದ್ಧಿವಿಚಾರದಲ್ಲಿ ಅಗತ್ಯವಿದ್ದರೆ ನಿಮ್ಮ ಸಹಕಾರವನ್ನು ಬಯಸುತ್ತೆವೆ ಎಂದರು. ಮುಂದಿನ‌ಕೆಲಸ ಕಾರ್ಯಗಳನ್ನು ನಿರ್ವಹಿಸಲು ಕಾರ್ಯಕರ್ತರ ಸಲಹೆ, ಸಹಕಾರವನ್ನು ಕೋರಿದರು.

ಸಭೆಯ ಅಧ್ಯಕ್ಷತೆಯನ್ನು ಸುಳ್ಯ ಭಾಜಪ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ವಹಿಸಿದ್ದರು.ಸಂದರ್ಭದಲ್ಲಿರಾಮದಾಸ್ ಬಂಟ್ವಾಳ ಜಿಲ್ಲಾ ಪ್ರಧಾನಕಾರ್ಯದರ್ಶಿಗಳು,

ಬೂಡಿಯಾರ್ ರಾಧಾಕೃಷ್ಣ ರೈ ಜಿಲ್ಲಾ ಉಪಾಧ್ಯಕ್ಷರು ಮತ್ತು ಸುಳ್ಯ ಪ್ರಭಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಬೋಧ್ ಶೆಟ್ಟಿ ಮೆನಾಲ ಸ್ವಾಗತಿಸಿ, ಇಂದಿರಾ ಬಿ.ಕೆ ವಂದಿಸಿದರು, ರಾಕೇಶ್ ರೈ ಕೆಡೆಂಜಿ ನಿರೂಪಿಸಿದರು. ಪಕ್ಷದ ಅಪೇಕ್ಷಿತ ಕಾರ್ಯಕರ್ತರು ಮತ್ತು ಪ್ರಮುಖರು ಉಪಸ್ಥಿತರಿದ್ದರು.

Digiqole Ad

ಗಣೇಶ್ ಪುತ್ತೂರು

https://goldfactorynews.com

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!