• 21 ಮೇ 2024

ಆಕಸ್ಮಿಕವಾಗಿ ಹೊಳೆಗೆ ಬಿದ್ದು ಕೃಷಿಕ ಸಾವು!

 ಆಕಸ್ಮಿಕವಾಗಿ ಹೊಳೆಗೆ ಬಿದ್ದು ಕೃಷಿಕ ಸಾವು!
Digiqole Ad

ಆಕಸ್ಮಿಕವಾಗಿ ಹೊಳೆಗೆ ಬಿದ್ದು ಕೃಷಿಕ ಸಾವು!

ಆಕಸ್ಮಿಕವಾಗಿ ಹೊಳೆನೀರಿಗೆ ಬಿದ್ದು ಕೃಷಿಕ ಸಾವನ್ನಪ್ಪಿರುವ ಘಟನೆ ಕಡಬ ತಾಲೂಕು ಸಮೀಪದ ಇಚ್ಚಂಪಾಡಿ ಗ್ರಾಮದಲ್ಲಿ ನಡೆದಿದೆ.ಇಚ್ಚಂಪಾಡಿ ಗ್ರಾಮದ ಕುಡಾಲ ನಿವಾಸಿ ಕೃಷ್ಣಪ್ಪ ಗೌಡ(ಕಿಟ್ಟಣ್ಣ) ಮೃತ ದುರ್ದೈವಿ ಎಂದು‌ ಗುರುತಿಸಲಾಗಿದೆ.

ಜು.9ರಂದು ಮಧ್ಯಾಹ್ನ ಇಚ್ಚಂಪಾಡಿಯ ಕೊಕ್ಕೊ ಕಾಡಿನ ಹೊಳೆಬದಿಗೆ ಹೋದವರು ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಮನೆಯವರು ಹೊಳೆಯಲ್ಲಿ ಹುಡುಕಾಟ ನಡೆಸಿದ್ದ ವೇಳೆ ಅವರ ಚಪ್ಪಲಿ ಪತ್ತೆಯಾಗಿತ್ತು. ಆದರೆ ರಾತ್ರಿಯ ತನಕ ಹೊಳೆ ಬದಿ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ದೊರೆತಿರಲಿಲ್ಲ.

ಜು.10ರಂದು ಬೆಳಿಗ್ಗೆ ಹೊಳೆಬದಿ ಮತ್ತೆ ಹುಡುಕಾಟ ನಡೆಸಿದಾಗ ಗುಂಡ್ಯಹೊಳೆ ಸೇರುವಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!