• 18 ಅಕ್ಟೋಬರ್ 2024

ಸದ್ಯದಲ್ಲೇ ದೇಶದಾದ್ಯಂತ ಚಾಲನೆಗೊಳ್ಳಲಿರುವ UPI ATM: ಡೆಬಿಟ್ ಕಾರ್ಡ್ ಇಲ್ಲದೆ ಸ್ಕ್ಯಾನ್ ಮೂಲಕ ಹಣ ವಿಥ್‌ಡ್ರಾ ಮಾಡಬಹುದು!

Digiqole Ad

ಸದ್ಯದಲ್ಲೇ ದೇಶದಾದ್ಯಂತ ಚಾಲನೆಗೊಳ್ಳಲಿರುವ UPI ATM: ಡೆಬಿಟ್ ಕಾರ್ಡ್ ಇಲ್ಲದೆ ಸ್ಕ್ಯಾನ್ ಮೂಲಕ ಹಣ ವಿಥ್‌ಡ್ರಾ ಮಾಡಬಹುದು!

ಬ್ಯಾಂಕ್ ಗ್ರಾಹಕರು ಡೆಬಿಟ್ ಕಾರ್ಡ್ ಇಲ್ಲದೆ ಎಟಿಎಂನಿಂದ ಹಣವನ್ನು ಪಡೆಯಬಹುದು. ಫೋನ್ ಮೂಲಕ ಸ್ಕ್ಯಾನ್ ಮಾಡಿದ್ರೆ ಸಾಕು ಎಟಿಎಂನಿಂದ ಹಣ ಬರುತ್ತದೆ. ಹೇಗೆ ಅಂತೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಜಪಾನ್ ಮೂಲದ ಹಿಟಾಚಿಯ ಅಂಗಸಂಸ್ಥೆಯಾದ ಹಿಟಾಚಿ ಪಾವತಿ ಸೇವೆಗಳು ಯುಪಿಐ-ಎಟಿಎಂ ಅನ್ನು ವೈಟ್ ಲೇಬಲ್ ಎಟಿಎಂ ಆಗಿ ಪ್ರಾರಂಭಿಸಿದೆ, ಇದನ್ನು ಬ್ಯಾಂಕಿಂಗ್ ಅಲ್ಲದ ಘಟಕಗಳು, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ನೊಂದಿಗೆ ನಿರ್ವಹಿಸುತ್ತವೆ.


ಇದೀಗ ಭಾರತ ಮತ್ತೊಂದು ಕ್ರಾಂತಿ ಮಾಡಿದೆ. ಯುಪಿಐ ಬಳಕೆ ಹೆಚ್ಚಾದ ಬಳಿಕ ಹಲವರು ಎಟಿಎಂ ಕಾರ್ಡ್ ಬಳಕೆ ಕಡಿಮೆ ಮಾಡಿದ್ದಾರೆ.ಡಿಜಿಟಲ್ ಇಂಡಿಯಾ ಮೂಲಕ ಭಾರತ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳುತ್ತಿದೆ.
ಹಣದ ಅವಶ್ಯಕತೆ ಬಂದಾಗ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಇಲ್ಲದೆ ತಡಬಡಿಸುವುದು ಸಹಜ. ಈ ಸಮಸ್ಯೆಗೆ ಉತ್ತರವಾಗಿ ಇದೀಗ ಭಾರತದಲ್ಲಿ UPI ATM ಸೇವೆ ಲಭ್ಯವಿದೆ. ಇಲ್ಲಿ ಹಣ ಪಡೆಯಲು ಯಾವುದೇ ಕಾರ್ಡ್ ಅವಶ್ಯಕತೆ ಇಲ್ಲ.ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ ಹಾಗೂ ಹಿಟಾಚಿ ಪೇಮೆಂಟ್ ಸರ್ವೀಸ್ ಜಂಟಿಯಾಗಿ UPI ATM ಅಭಿವೃದ್ಧಿಪಡಿಸಿದೆ. UPI ಪೇಮೆಂಟ್ ಬಳಕೆ ಮಾಡುತ್ತಿರುವ ಗ್ರಾಹಕರು ಯಾವುದೇ ಎಟಿಎಂ ಕಾರ್ಡ್ ಇಲ್ಲದೆ ಎಟಿಎಂನಿಂದ ಸುಲಭವಾಗಿ ಹಣ ಪಡೆದುಕೊಳ್ಳಬಹುದು.UPI ATM ಮಶಿನ್‌ನಲ್ಲಿ ಎಷ್ಟುರೂಪಾಯಿ ಬೇಕೆಂದು ಕ್ಲಿಕ್ ಮಾಡಿದ್ದೀರೋ, ಅಷ್ಟು ಹಣವನ್ನು ನಮೂದಿಸಿ. ಬಳಿಕ UPI ಪಿನ್ ಕೋಡ್ ಹಾಕಿದರೆ ನಿಮ್ಮ ಹಣ UPI ATM ಮಶಿನ್‌ಗೆ ವರ್ಗಾವಣೆಯಾಗಲಿದೆ. ಕ್ಷಣಾರ್ಧದಲ್ಲೇ UPI ATM ಮಶಿನ್‌ ನಿಮಗೆ ಹಣ ನೀಡಲಿದೆ.ಬ್ಯಾಂಕ್ ಗ್ರಾಹಕರು ಈ ವಿಧಾನದ ಅಡಿಯಲ್ಲಿ ಒಂದು ಬ್ಯಾಂಕ್ ಖಾತೆಯಿಂದ ಎರಡು ಬಾರಿ ಹಣವನ್ನು ಹಿಂಪಡೆಯಬಹುದು. ಪ್ರತಿ ಟ್ರಾನ್ಸಾಕ್ಸನ್ ಮೂಲಕ ರೂ. 5 ಸಾವಿರದವರೆಗೆ ಹಣ ಡ್ರಾ ಮಾಡುವ ಸೌಲಭ್ಯವಿದೆ. ಬ್ಯಾಂಕ್ ಆಫ್ ಬರೋಡಾ ದೇಶಾದ್ಯಂತ 11 ಸಾವಿರಕ್ಕೂ ಹೆಚ್ಚು ಎಟಿಎಂಗಳನ್ನು ಹೊಂದಿದೆ.ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸದೆಯೇ ಗ್ರಾಹಕರಿಗೆ ನಗದು ಹಿಂಪಡೆಯಲು ಇದು ಅನುಮತಿಸುತ್ತದೆ. ಯುನೈಟೆಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ನಿಮ್ಮ ಬ್ಯಾಂಕ್ ಖಾತೆಗಳಿಂದ ಹಣವನ್ನು ಹಿಂಪಡೆಯಲು UPI-ATM ನಿಮಗೆ ಅನುಮತಿಸುತ್ತದೆ.

UPI ATM ನಿಂದ ಹಣವನ್ನು ಹಿಂಪಡೆಯಲು ಕ್ರಮಗಳು

ಹಣವನ್ನು ಆಯ್ಕೆಮಾಡಿ. ತದನಂತರ ಆಯ್ದ ಮೊತ್ತಕ್ಕೆ ಅನುಗುಣವಾದ UPI QR ಕೋಡ್ ಅನ್ನು ಓಪನ್ ಮಾಡಿ UPI ಅಪ್ಲಿಕೇಶನ್ ಬಳಸಿಕೊಂಡು QR ಕೋಡ್ ಅನ್ನು ಸ್ಕ್ಯಾನ್ ಮಾಡಿ.
UPI ಪಿನ್ ಅನ್ನು ನಮೂದಿಸಿ ಹಣವನ್ನು ಸಂಗ್ರಹಿಸ ಬಹುದು.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ