• 18 ಅಕ್ಟೋಬರ್ 2024

ಸರ್ಚ್ ಎಂಜಿನ್ ಗೂಗಲ್‌ಗೆ ಇಂದು 25 ವರ್ಷ: ಇಂದಿನ ವಿಶೇಷ ಡೂಡಲ್​​ ನೋಡಿ!

 ಸರ್ಚ್ ಎಂಜಿನ್ ಗೂಗಲ್‌ಗೆ ಇಂದು 25 ವರ್ಷ: ಇಂದಿನ ವಿಶೇಷ ಡೂಡಲ್​​ ನೋಡಿ!
Digiqole Ad

ಸರ್ಚ್ ಎಂಜಿನ್ ಗೂಗಲ್‌ಗೆ ಇಂದು 25 ವರ್ಷ: ಇಂದಿನ ವಿಶೇಷ ಡೂಡಲ್​​ ನೋಡಿ!

‘ಗೂಗಲ್’​ಗೆ ಇಂದು 25 ವರ್ಷ ತುಂಬಿದ್ದು, ಡೂಡಲ್ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ವಾಕ್ ಡೌನ್ ಮೆಮೊರಿ ಲೇನ್” ಮೂಲಕ ಕಂಪನಿಯು ತನ್ನ ಜನ್ಮದಿನದಂದು ವಿಭಿನ್ನ ಡೂಡಲ್‍ಗಳನ್ನು ಪ್ರದರ್ಶಿಸಿತು.

ಹೊಚ್ಚ ಹೊಸ  ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ  ಮೂಲಕ ವಿಶ್ವದ ಮನೆ ಮಾತಾಗಿರುವ ಗೂಗಲ್‍ನ ಇಂದಿನ ಹೊಸ ಟ್ಯಾಬ್ ತೆರೆದರೆ GIFನೊಂದಿಗೆ ಬರುತ್ತದೆ. ಅದು ‘Google’ ಅನ್ನು ‘G25gle’ ಆಗಿ ಪರಿವರ್ತಿಸುತ್ತದೆ. 25-ಎಂಬುದು ವರ್ಷಗಳನ್ನು ಸೂಚಿಸುತ್ತದೆ. ಒಮ್ಮೆ ನೀವು ಲೋಗೋ ಮೇಲೆ ಕ್ಲಿಕ್ ಮಾಡಿದರೆ, ನೀವು ಪುಟದಲ್ಲಿ ಇದನ್ನು ಕಾಣಬಹುದು.

ಅಮೆರಿಕದ ಪ್ರತಿಷ್ಠಿತ ಸ್ಟಾನ್‌ಫೋರ್ಡ್‌ ಯೂನಿವರ್ಸಿಟಿಯ ವಿದ್ಯಾರ್ಥಿಗಳಾಗಿದ್ದ ಲ್ಯಾರಿ ಪೇಜ್‌ ಹಾಗೂ ಸೆರ್ಗೆ ಬ್ರಿನ್‌ ಸೆಪ್ಟೆಂಬರ್ 27, 1998 ರಂದು ಗೂಗಲ್​ನ್ನು ಜಗತ್ತಿಗೆ ಪರಿಚಯಿಸಿದರು.

1998ರಿಂದ 2023ರ ವರೆಗೆ ಗೂಗಲ್ ನ ಲೋಗೋ ಮತ್ತು ಕಾಲಕಾಲಕ್ಕೆ ಪ್ರಕಟಿಸುವ ಡೂಡಲ್‌ಗಳನ್ನು ತನ್ನ ಬ್ಲಾಗನಲ್ಲಿ ಗೂಗಲ್ ಹಂಚಿಕೊಂಡಿದೆ. ಸರ್ಗಿ ಬ್ರೈನ್ ಮತ್ತು ಲಾರಿ ಪೇಜ್ ಅವರು ಸ್ಟ್ಯಾಂಡ್ ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ 1997ರ ಜನವರಿಯಲ್ಲಿ ಮೊದಲ ಬಾರಿಗೆ ಭೇಟಿಯಾದರು. ಸರ್ಗಿ ಬ್ರೈನ್ ಸಂಶೋಧನ ವಿದ್ಯಾರ್ಥಿಯಾಗಿದ್ದರು. ನಂತರ ಇಬ್ಬರೂ  ಸರ್ಚ್ ಎಂಜಿನ್ ಅಭಿವೃದ್ಧಿಪಡಿಸುವ ಕುರಿತು ಜೊತೆಗೂಡಿ ಕೆಲಸ ಆರಂಭಿಸಿದರು. ಅದರಲ್ಲಿ ಯಶಸ್ವಿ ಆದ್ದರು. ಸನ್ ಮೈಕ್ರೋ ಸಿಸ್ಟಮ್ ಒಂದು ಲಕ್ಷ ಅಮೆರಿಕನ್ ಡಾಲರ್ ಅನ್ನು ಗೂಗಲ್‌ನಲ್ಲಿ ಹೂಡಿಕೆ ಮಾಡಿದರು. ಹೀಗಾಗಿ 1998ರ ಸೆಪ್ಟೆಂಬರ್ 27ರಂದು ಕ್ಯಾಲಿಫೋರ್ನಿಯದಲ್ಲಿ ಗೂಗಲ್ ಅಧಿಕೃತವಾಗಿ ಆರಂಭಗೊಂಡಿತು.

ಪ್ರಸ್ತುತ ಗೂಗಲ್ ಕೇವಲ ಸರ್ಚ್ ಎಂಜಿನ್ ಆಗಿ ಮಾತ್ರವಲ್ಲ ಇ-ಮೇಲ್, ಯೂಟ್ಯೂಬ್ ಪ್ರಸ್ತುತ ಕೃತಕ ಬುದ್ಧಿಮತ್ತೆಯ ಚಾಟ್‌ ಬೋಟ್‌ವರೆಗೂ ಬೆಳೆದು ಬಂದಿದೆ.

 

 

 

 

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ