• 18 ಅಕ್ಟೋಬರ್ 2024

ಮಾರ್ನೆಮಿಯ ಕಲೆಯಲ್ಲಿ ಚಿಗುರುವ ಚಿಗುರುಗಳು!

 ಮಾರ್ನೆಮಿಯ ಕಲೆಯಲ್ಲಿ ಚಿಗುರುವ  ಚಿಗುರುಗಳು!
Digiqole Ad

ಮಾರ್ನೆಮಿಯ ಕಲೆಯಲ್ಲಿ ಚಿಗುರುವ ಚಿಗುರುಗಳು!

ಮೊಬೈಲ್ ಮಾಯಲೋಕದ ಈ ಕಾಲಘಟ್ಟದಲ್ಲಿ…. ಎಲ್ಲಾ ಕಾರ್ಯಕಲಾಪಗಳನ್ನು,  ಮೊಬೈಲೇ.. ನುಂಗಿ ನೀರು ಕುಡಿಯುತ್ತಿರುವ ಸಮಯದಲ್ಲಿ.. ತುಳುನಾಡ ಮಣ್ಣಿನ ಕಲೆಯತ್ತ ಆಸಕ್ತಿ ಹೊಂದಿ .. ದಸರ ರಜೆಯ ಮಜವನ್ನು ಈ ಪುಟ್ಟ ಬಾಲಕರು ಶಾರ್ದುಲ ವೇಷದೊಂದಿಗೆ.. ಮಾರ್ನೆಮಿಗೆ.. ಮನೆಯಂಗಳದಿ ಕಣಿದು ಮನಗಳ ಗೆದ್ದಿದ್ದಾರೆ…

ಈಶ್ವರಮಂಗಲದ ಮುಂಡ್ಯ ಪರಿಸರದ ಈ ಬಾಲಕರ ಈ ಕಲೆಯ ಆಸಕ್ತಿಗೆ. ಎಲ್ಲರೂ ಮೆಚ್ಚಿ ಪ್ರೋತ್ಸಾಹಿಸುತ್ತಿದ್ದಾರೆ .. ಚಂದನ್ , ಜೀವನ್, ಚಿಂತನ್, ಗೌತಮ್ , ಯೋಗೀಶ , ಇವರೇ.. ಈ ಶಾರ್ದುಲ ತಂಡದ ನಾಯಕರು.. ಇವರಲ್ಲೊಂದು ವಿಶೇಷವಾದ ಸಂದೇಶವು ಇದೆ.. ಈ ಮಕ್ಕಳ ತಂಡದಲ್ಲಿ ಗೌತಮ್ ಎನ್ನುವ ಬಾಲಕನಿಗೆ ತನ್ನ ಎರಡೂ ಕೈಗಳ ಹುಟ್ಟಿನಿಂದಲೇ ಬಂದ ವೈಫಲ್ಯವನ್ನು ಲೆಕ್ಕಿಸದೆ.. ಎಲ್ಲರಂತೆ ತಾಸೆ ದೋಲುಗಳನ್ನು ಲಯಬದ್ಧವಾಗಿ ನುಡಿಸುತ್ತಾ ..ಇತರರಿಗೂ ಮಾದರಿಯಾಗಿದ್ದಾನೆ.. ವಿಧ್ಯಾಭ್ಯಾಸದೊಂದಿಗೆ ರಜೆಯ ದಿನಗಳಲ್ಲಿ ತಾಸೆ ದೋಲುಗಳ ಅಭ್ಯಾಸವನ್ನು ಮಾಡಿಕೊಂಡು .. ಈಗ ಪರಿಪೂರ್ಣವಾದ ವಾದಕನಾಗಿದ್ದಾನೆ..

ಇವರ ಈ ಕಲೆಯ ಆಸಕ್ತಿಗೆ.. ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗಲಿ… ಕಲೆಯನ್ನು ಚಿಗುರಿಸುವ ಚಿಗುರುಗಳು ಬೆಳೆದು ನಾಡಿನಾದ್ಯಂತ ಹೆಸರು ಪಡೆಯಲಿ ಎಂಬುದೆ.. ಗೋಲ್ಡ್ ಫ್ಯಾಕ್ಟರಿಯ ಆಶಯ… ನಮ್ಮ ಎಲ್ಲಾ ಓದುಗರಿಗೂ ದಸರ ಹಬ್ಬದ ಶುಭಾಶಯಗಳು.. ಸರ್ವ ಶಕ್ತ ಜಗನ್ಮಾತೆ ಎಲ್ಲರಿಗೂ ಶುಭವನ್ನು ಕರುಣಿಸಲಿ..

Digiqole Ad

ಎಂ. ರಾಮ ಈಶ್ವರಮಂಗಲ

https://goldfactorynews.com

ಈ ಸುದ್ದಿಗಳನ್ನೂ ಓದಿ