• 18 ಅಕ್ಟೋಬರ್ 2024

ಕೇಂದ್ರದಿಂದ ರಸಗೊಬ್ಬರಕ್ಕೆ ಸಬ್ಸಿಡಿಗೆ ಅನುಮೋದನೆ

 ಕೇಂದ್ರದಿಂದ ರಸಗೊಬ್ಬರಕ್ಕೆ ಸಬ್ಸಿಡಿಗೆ ಅನುಮೋದನೆ
Digiqole Ad

ಕೇಂದ್ರದಿಂದ ರಸಗೊಬ್ಬರಕ್ಕೆ ಸಬ್ಸಿಡಿಗೆ ಅನುಮೋದನೆ

ಭಾರತದಲ್ಲಿ ಸಮರ್ಪಕವಾದ ಸೆಮಿಕಂಡಕ್ಟರ್ ಸರಬರಾಜು ಸರಪಳಿ ಸೃಷ್ಟಿಸಲು ಅನುಕೂಲವಾಗುವಂತೆ ಜಪಾನ್ ನೆರವು ಪಡೆಯುವ ಒಪ್ಪಂದಕ್ಕೆ ಕೇಂದ್ರ ಸಂಪುಟ ಇಂದು ಅನುಮೋದನೆ ನೀಡಿದ್ದು, ಸೆಮಿಕಂಡಕ್ಟರ್ ಸಪ್ಲೈ ಚೈನ್ ಉತ್ತಮಗೊಳಿಸಲು ಎರಡೂ ದೇಶಗಳು ಜುಲೈನಲ್ಲಿ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ್ದವು.

ಪೌಷ್ಟಿಕಾಂಶ ಆಧಾರಿತ ಸಬ್ಸಿಡಿಯಾದ NBS ಯೋಜನೆ ಅಡಿಯಲ್ಲಿ ರಸಗೊಬ್ಬರಕ್ಕೆ 22,303 ಕೋಟಿ ರೂ. ಸಬ್ಸಿಡಿ ಒದಗಿಸುವ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಇಂದು ಅನುಮೋದನೆ ನೀಡಿದೆ. ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಹಿಂಗಾರು ಋತುವಿಗೆ ಈ ಸಬ್ಸಿಡಿ ಇದೆ. ಫಾಸ್ಟ್ಯಾಟಿಕ್ ಮತ್ತು ಪೊಟಾಸಿಕ್ ರಸಗೊಬ್ಬರಗಳನ್ನು ಸಬ್ಸಿಡಿ ದರದಲ್ಲಿ ರೈತರು ಕೊಳ್ಳಬಹುದಾಗಿದೆ.1 ಕಿಲೋ ನೈಟ್ರೋಜನ್ ರಸಗೊಬ್ಬರಕ್ಕೆ 47 ರೂ. ದರ ನಿಗದಿ ಮಾಡಲಾಗಿದೆ. 1ಕಿಲೋ ಫಾಸ್‌ಫೇಟ್‌ಗೆ 20.82 ರೂ. 1 ಕಿಲೋ ಪೊಟ್ಯಾಶ್‌ಗೆ 2.38 ರೂ. ಹಾಗೂ ಸಲ್ಫರ್ 1.89 ರೂ. ಸಬ್ಸಿಡಿ ಸಿಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ರಸಗೊಬ್ಬರಗಳ ಬೆಲೆ ಬಹಳಷ್ಟು ಕಡಿಮೆ ಆಗಿದೆ. ಅಂತಾರಾಷ್ಟ್ರೀಯ ದರಕ್ಕೆ ಅನುಗುಣವಾಗಿ ರಸಗೊಬ್ಬರ ಬೆಲೆ ಇಳಿಸಲಾಗಿದೆ

ಸೆಮಿಕಂಡಕ್ಟರ್ ಫ್ಯಾಬ್, ಡಿಸ್​ಪ್ಲೇ ಫ್ಯಾಬ್, ಸೆಮಿಕಂಡಕ್ಟರ್ ಅಸೆಂಬ್ಲಿ, ಟೆಸ್ಟಿಂಗ್, ಮಾರ್ಕಿಂಗ್, ಪ್ಯಾಕೇಜಿಂಗ್, ಒಎಸ್​ಎಟಿ ಸೌಲಭ್ಯ ಇತ್ಯಾದಿಯನ್ನು ಭಾರತದಲ್ಲೇ ನಡೆಸುವುದು ಗುರಿ. ಸೆಮಿಕಂಡಕ್ಟರ್ ಸಪ್ಲೈ ಚೈನ್ ನಿರ್ಮಿಸುವುದು ಇದರ ಒಂದು ಭಾಗ. ಈ ಕಾರ್ಯಗಳಿಗೆ ಜಪಾನ್ ಸಹಕಾರವನ್ನು ಭಾರತ ಯಾಚಿಸಿದೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ