• 15 ಜೂನ್ 2024

ದ.ಕ. ಜಿಲ್ಲೆಯ ಮತದಾರರ ಅಂತಿಮ ಪಟ್ಟಿ ಪ್ರಕಟ

 ದ.ಕ. ಜಿಲ್ಲೆಯ ಮತದಾರರ ಅಂತಿಮ ಪಟ್ಟಿ ಪ್ರಕಟ
Digiqole Ad

ದ.ಕ. ಜಿಲ್ಲೆಯ ಮತದಾರರ ಅಂತಿಮ ಪಟ್ಟಿ ಪ್ರಕಟ

ದಕ್ಷಿಣ ಕನ್ನಡ ಜಿಲ್ಲೆ 8 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಆ ಪ್ರಕಾರ ಜಿಲ್ಲೆಯಲ್ಲಿ 8,73,277 ಪುರುಷರು, 9,15,058 ಮಹಿಳೆಯರು, 70 ತೃತೀಯ ಲಿಂಗ ಸೇರಿ ಒಟ್ಟು 17,88,405 ಮತದಾರರಿದ್ದಾರೆ. ಒಟ್ಟು 33,545 ಮಂದಿ ಮತದಾರರು 18-19 ವರ್ಷದೊಳಗಿನವರು. 182 ಪುರುಷರು, 51 ಮಹಿಳೆಯರು ಸೇರಿ ಒಟ್ಟು 233 ಅನಿವಾಸಿ ಮತದಾರರು ಪಟ್ಟಿಯಲ್ಲಿದ್ದಾರೆ. 2024ರಲ್ಲಿ ಒಟ್ಟು 27,440 ಮತದಾರರ ಸೇರ್ಪಡೆಯಾಗಿದ್ದು, 24,870 ಹೆಸರು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಜತೆಗೆ 15,961 ಮತದಾರರ ವಿವರ ತಿದ್ದುಪಡಿ ಮಾಡಲಾಗಿದೆ.

ಮತದಾರರ ಪಟ್ಟಿಯಲ್ಲಿರುವ ಯುವ (18ರಿಂದ 19 ವರ್ಷ) ಮತದಾರರ ವಿವರ: ಗಂಡು-17,180 ಹೆಣ್ಣು-16,362, ತೃತೀಯ ಲಿಂಗ-3 ಒಟ್ಟು 33,545. ಆಗಿರುತ್ತದೆ.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ನಾಲ್ಕು ಅರ್ಹತಾ ದಿನಗಳು ಜ.1, ಎ.1, ಜು.1 ಹಾಗೂ ಅ.1, ಸಾರ್ವಜನಿಕರು ತಮ್ಮ ವ್ಯಾಪ್ತಿಯಲ್ಲಿರುವ ಮತದಾರರ ನೋಂದಾಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಾಣಾಧಿಕಾರಿ ಕಚೇರಿ, ತಮ್ಮ ವ್ಯಾಪ್ತಿಯ ಮತಗಟ್ಟೆ ಅಧಿಕಾರಿ ಅಥವಾ ವೆಬೆಸೈಟ್ ವಿಳಾಸ: ceokarnataka.kar.nic.in, ttps://voters.eci.gov.in, Voters Helpline Appಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವ ಬಗ್ಗೆ ಮತ್ತು ತಿದ್ದುಪಡಿ ಬಗ್ಗೆ ಪರಿಶೀಲಿಸಬಹುದು ಎಂದು ಜಿಲ್ಲಾಧಿಕಾರಿ ಪ್ರಕಟನೆ ಯಲ್ಲಿ ತಿಳಿಸಿದ್ದಾರೆ.

 

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!