• 27 ಜುಲೈ 2024

ಸಿದ್ದರಾಮಯ್ಯ ಮತ್ತು ಡಿಕೆಶಿ ಫೋಟೊ ಆಂಟಿಸಿದ್ದ ಕುಕ್ಕ‌ರ್ ವಶ.

 ಸಿದ್ದರಾಮಯ್ಯ ಮತ್ತು ಡಿಕೆಶಿ ಫೋಟೊ ಆಂಟಿಸಿದ್ದ ಕುಕ್ಕ‌ರ್ ವಶ.
Digiqole Ad

ಸಿದ್ದರಾಮಯ್ಯ ಮತ್ತು ಡಿಕೆಶಿ ಫೋಟೊ ಆಂಟಿಸಿದ್ದ ಕುಕ್ಕ‌ರ್ ವಶ.

ಬೆಂಗಳೂರು : ತುಮಕೂರಿನ ಕುಣಿಗಲ್‌ನಲ್ಲಿ ಚುನಾವಣಾ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್ ಅವರ ಫೋಟೊಗಳನ್ನು ಅಂಟಿಸಿದ್ದ ಕುಕ್ಕರ್‌ಗಳನ್ನು ಮಾ.20 ಬುಧವಾರ ವಶಕ್ಕೆ ತೆಗೆದುಕೊಂಡಿದ್ದಾರೆ. ಮತದಾರರಿಗೆ ಹಂಚುವ ಸಲುವಾಗಿ ಗೋದಾಮಿನಲ್ಲಿ 73 ಕುಕ್ಕರ್‌ಗಳನ್ನು ಸಂಗ್ರಹಿಸಿಡಲಾಗಿತ್ತು ಎನ್ನಲಾಗಿದೆ.

ಈ ಸುದ್ದಿಯನ್ನು ಓದಿದ್ದೀರಾ.?ಓಟಿಟಿ ಗಳಿಗೆ ಕೇಂದ್ರ ಮಹತ್ವದ ಆದೇಶ!

ವಶಪಡಿಸಿದ ಎಲ್ಲ ಕುಕ್ಕರ್ ಗಳಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಫೋಟೊ ಅಂಟಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಕುಕ್ಕರ್ ಬಾಕ್ಸ್‌ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾ‌ರ್, ಶಾಸಕರ ಭಾವಚಿತ್ರಗಳಿದ್ದು. ಜೊತೆಗೆ ಬಾಕ್ಸ್ ಮೇಲೆ ಹೊಸ ವರ್ಷ ಹಾಗೂ ಸಂಕ್ರಾತಿ ಶುಭಾಶಯಗಳು ಎಂದು ಮುದ್ರಿಸಲಾಗಿತ್ತು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಓದಿದ್ದೀರಾ.?ಐಸ್‌ಲ್ಯಾಂಡ್‌ನಲ್ಲಿ ಭೀಕರ ಜ್ವಾಲಾಮುಖಿ ಸ್ಫೋಟ.!

ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ ಗೋದಾಮಿನಲ್ಲಿದ್ದ ಎಲ್ಲ ಕುಕ್ಕರ್‌ಗಳನ್ನು ವಶ ಮಾಡಿದ್ದಾರೆ. ಕುಣಿಗಲ್ ಪಟ್ಟಣದ ಮಲ್ಲಿಪಾಳ್ಯದ ಕಾಂಗ್ರೆಸ್‌ ಪುರಸಭಾ ಸದಸ್ಯ ನಾಗೇಂದ್ರ ಅವರಿಗೆ ಸೇರಿದ ಗೋದಾಮಿನಲ್ಲಿ ಕುಕ್ಕರ್‌ಗಳನ್ನು ಸಂಗ್ರಹಿಸಿಡಲಾಗಿತ್ತು ಎಂದು ಹೇಳಲಾಗಿದೆ.

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ