ತಾಲೂಕು ಸ್ವೀಪ್ ಸಮಿತಿಯಿಂದ ತಾ.ಪಂ. ಸಭಾಂಗಣದಲ್ಲಿ ಸಾರ್ವತ್ರಿಕ ಚುನಾವಣೆ ಕುರಿತು ತರಬೇತಿ
ತಾಲೂಕು ಸ್ವೀಪ್ ಸಮಿತಿಯಿಂದ ತಾ.ಪಂ. ಸಭಾಂಗಣದಲ್ಲಿ ಸಾರ್ವತ್ರಿಕ ಚುನಾವಣೆ ಕುರಿತು ತರಬೇತಿ
ಸ್ವೀಪ್ ಸಮಿತಿ ವತಿಯಿಂದ 2024 ರ ಲೋಕಾಸಭಾ ’ಸಾರ್ವತ್ರಿಕ ಚುನಾವಣೆಯ ಅಂಗವಾಗಿ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶಾಲಾ ಕಾಲೇಜುಗಳ ಇ.ಎಲ್.ಸಿ ಸಂಚಾಲಕರಿಗೆ, ಚುನಾವಣಾ ಪ್ರಚಾರ ರಾಯಭಾರಿಗಳಿಗೆ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ಸ್ವೀಪ್ ತರಬೇತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮ ಫೆ.28 ರಂದು ನಡೆದಿತ್ತು. ಹಾಗೂ ಒಂದು ದಿನದ ಮಟ್ಟಿಗೆ ಸ್ವೀಪ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.
ಸುಳ್ಯ ತಾಲೂಕು ತಹಶೀಲ್ದಾರ್ ಮಂಜುನಾಥ್ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಚುನಾವಣಾ ಗೀತೆಯನ್ನು ಶಿಕ್ಷಕ ಹರಿಪ್ರಸಾದ್ ಅವರು ಹಾಡಿ, ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಯಿತು.
ತಾಲೂಕು ಮಟ್ಟದ ತರಬೇತುದಾರ ಹಾಗೂ ಶಾರದಾ ಪಿ.ಯು. ಕಾಲೇಜು ಉಪನ್ಯಾಸಕರಾದ ದಾಮೋದರ ರವರು ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಹಾಗೂ ಚುನಾವಣಾ ಪ್ರಚಾರದ ಅವಶ್ಯಕತೆಯನ್ನು, ಮಹತ್ವವನ್ನು ಹೇಳಿದರು. ಪ್ರಾಸ್ತಾವಿಕ ನುಡಿಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸುವ ಕೆಲಸವನ್ನು ಜಿಲ್ಲಾ ಮಟ್ಟದ ತರಬೇತುದಾರರಾದ ಸುಳ್ಯ ಸ.ಪ್ರ.ದ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶಿವಾನಂದರು ಮಾಡಿದರು. ಶಿಕ್ಷಕಿ ಶ್ರೀಮತಿ ಅನ್ನಪೂರ್ಣೇಶ್ವರಿ ಪ್ರತಿಜ್ಞಾ ವಿಧಿ ಬೋಧಿಸಿದರು.ವೇದಿಕೆಯ ಮೇಲೆ ಉಪ ತಹಶೀಲ್ದಾರ್ ಚಂದ್ರಕಾಂತ್ ಹಾಗೂ ಶಿಕ್ಷಣ ಸಂಯೋಜಕಿ ಶ್ರೀಮತಿ ಸಂಧ್ಯಾ ಕುಮಾರಿ ಬಿ.ಎಸ್. ಉಪಸ್ಥಿತರಿದ್ದರು. ತರಬೇತುದಾರರಾದ ಡಾ. ಜಯಶ್ರೀ ಕೆ., ಆನಂದ ಕೆ.ಎಸ್., ವಸಂತ ನಾಯಕ್ ಡಿ., ಪೂರ್ಣಿಮಾ ಟಿ., ಅನ್ನಪೂರ್ಣ ಹಾಜರಿದ್ದರು.